ಮನೋರಂಜನೆ

ತಮ್ಮ ಮೇಲೆ ನಡೆಯುವ ಶೋಷಣೆ ಕುರಿತು ಬಾಯ್ಬಿಟ್ಟ ಐಪಿಎಲ್ ಚಿಯರ್ ಗರ್ಲ್

Pinterest LinkedIn Tumblr

8003IPLCHEERS-AFP

ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಆಟಗಾರರು ಸಿಕ್ಸ್, ಫೋರ್ ಬಾರಿಸಿದಾಗ ಕುಣಿಯುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಚಿಯರ್ ಗರ್ಲ್ಸ್ ಗಳ ಜೀವನ ಸುಖದ ಸುಪ್ಪತ್ತಿಗೆಯಲ್ಲ ಬದಲಾಗಿ ಮುಳ್ಳಿನ ಹಾಸಿಗೆ ಎಂಬುದನ್ನು ಐಪಿಎಲ್ ಚಿಯರ್ ಗರ್ಲ್ ಒಬ್ಬರು ತೆರೆದಿಟ್ಟಿದ್ದಾರೆ.

ಐಪಿಎಲ್ ಚಿಯರ್ ಗರ್ಲ್ ಗಳಾಗಿ ಕ್ರಿಕೆಟ್ ಮೈದಾನದಲ್ಲಿ ಕುಣಿದು ಕುಪ್ಪಳಿಸುವ ತಮ್ಮಗಳಿಗೆ ಮ್ಯಾನೇಜರ್, ಅತ್ಯಂತ ಕಡಿಮೆ ಹಣ ನೀಡುತ್ತಾನಲ್ಲದೇ ಈ ಮೊದಲು ಕೆಳ ದರ್ಜೆಯ ಹೋಟೆಲ್ ಗಳಲ್ಲಿ ತಮಗೆ ವಸತಿ ಸೌಕರ್ಯ ಕಲ್ಪಿಸುತ್ತಿದ್ದು, ಇದನ್ನು ಪ್ರತಿಭಟಿಸಿದ ಬಳಿಕ ಈಗ ಥ್ರೀ ಸ್ಟಾರ್ ಹೋಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದಾರೆಂದು ತಿಳಿಸಿದ್ದಾರೆ.

ಪಂದ್ಯಗಳ ವೇಳೆ ಕೆಲ ಪ್ರೇಕ್ಷಕರು ತಮ್ಮಗಳ ಕುರಿತು ಅಶ್ಲೀಲ ಕಮೆಂಟ್ ಮಾಡುತ್ತಾರೆ. ಅಲ್ಲದೇ ಕೆಲವೊಮ್ಮೆ ಹಿಂಬದಿಯಿಂದ ಕೈಗೆ ಸಿಕ್ಕದನ್ನು ಎಸೆಯುತ್ತಾರೆಂದು ತಮ್ಮ ನೋವು ತೋಡಿಕೊಂಡಿದ್ದಾರೆ. ತಮ್ಮಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಹಲವರು ಬಯಸುತ್ತಾರಾದರೂ ಮಹಿಳೆಯರು ಮತ್ತು ಮಕ್ಕಳನ್ನು ಹೊರತುಪಡಿಸಿ ಬೇರೆಯವರು ಫೋಟೋ ತೆಗೆಸಿಕೊಳ್ಳಲು ತಾವು ಅವಕಾಶ ನೀಡುವುದಿಲ್ಲವೆಂದು ಹೇಳಿದ್ದಾರೆ.

ಆಟಗಾರರು ಹಾಗೂ ತಮ್ಮ ನಡುವೆ ಯಾವುದೇ ಸಂಪರ್ಕವಿರುವುದಿಲ್ಲ. ಕೆಲವೊಮ್ಮೆ ಯಾವ ತಂಡದ ಪರವಾಗಿ ತಾವುಗಳು ಕುಣಿಯುತ್ತಿದ್ದೇವೆಂಬುದರ ಅರಿವೂ ಇರುವುದಿಲ್ಲವೆಂದಿದ್ದಾರೆ. ವಿದೇಶಿ ಯುವತಿಯರನ್ನೇ ಐಪಿಎಲ್ ಪಂದ್ಯಗಳಿಗೆ ಚಿಯರ್ ಗರ್ಲ್ಸ್ ಗಳಾಗಿ ಕರೆ ತರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಈಕೆ, ಭಾರತೀಯ ಯುವತಿಯರೂ ತಮ್ಮಗಳೊಂದಿಗೆ ಚಿಯರ್ ಗರ್ಲ್‍ ಗಳಾಗಿ ಬರುವುದನ್ನು ತಾವು ಬಯಸುವುದಾಗಿ ತಿಳಿಸಿದ್ದಾರೆ.

Write A Comment