ಅಂತರಾಷ್ಟ್ರೀಯ

ಸೆಲ್ಫಿ ತೆಗೆದುಕೊಳ್ಳೋವರ್ಗೂ ಬಿಡೋದಿಲ್ಲ ಈ ಮೊಬೈಲ್ ಆ್ಯಪ್..!

Pinterest LinkedIn Tumblr

3002snap-me-up-090515

ಬೆಳಿಗ್ಗೆ ಬೇಗ ಏಳಬೇಕೆನ್ನುವ ಕಾರಣಕ್ಕಾಗಿ ಹಲವರು ಆಲಾರಾಂ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಆಲಾರಾಂ ಹೊಡೆದುಕೊಂಡಾಗ ಅದನ್ನು ಆಫ್ ಮಾಡಿ ಮತ್ತೆ ಮಲಗಿಕೊಳ್ಳುತ್ತಾರೆ. ಇಂತವರಿಗೆಂದೇ ಈ ವಿಶೇಷ ಆ್ಯಪ್ ನ್ನು ಸಿದ್ದಪಡಿಸಲಾಗಿದೆ.

Snap Me Up app ಎಂಬ ಆ್ಯಪನ್ನು ನಿಮ್ಮ ಮೊಬೈಲಿಗೆ ಅಳವಡಿಸಿಕೊಂಡು ಇದರ ಮೂಲಕ ಆಲಾರಾಂ ಇಟ್ಟರೆ ಬೆಳಿಗ್ಗೆ ಆ ವೇಳೆಗೆ ಹೊಡೆದುಕೊಳ್ಳುವ ಇದು ನೀವು ಎದ್ದು ನಗುಮುಖದಲ್ಲಿ ಸೆಲ್ಫಿ ತೆಗೆದುಕೊಳ್ಳುವವರೆಗೂ ನಿರಂತರವಾಗಿ ಶಬ್ದ ಮಾಡುತ್ತಲೇ ಇರುತ್ತದೆ.

ನಿಮ್ಮ ಮುಖ ಮೊಬೈಲಿನಲ್ಲಿ ಸ್ಪಷ್ಟವಾಗಿ ಕಾಣುವವರೆಗೂ ಶಬ್ದ ಮಾಡುವ ಇದು ಸೆಲ್ಫಿ ಸ್ಪಷ್ಟವಾಗಿ ಬಂದ ಮೇಲೆಯೇ ತನ್ನ ಶಬ್ದವನ್ನು ನಿಲ್ಲಿಸುತ್ತದೆ. ಸೆಲ್ಫಿ ತೆಗೆದುಕೊಳ್ಳದೇ ಆಲಾರಾಂ ಶಬ್ದ ನಿಲ್ಲಿಸಲು ಮುಂದಾದರೆ ಸುತರಾಂ ಇದು ಮಾತನ್ನು ಕೇಳುವುದಿಲ್ಲ. ಈ ಆ್ಯಪ್ ಅಳವಡಿಸಿಕೊಳ್ಳಿ ಬೆಳ್ಳಂ ಬೆಳಿಗ್ಗೆಯೇ ಸುಂದರ ವದನದೊಂದಿಗೆ ಸೆಲ್ಫಿ ತೆಗೆದುಕೊಳ್ಳಿ. ಈ ಚಿತ್ರಗಳನ್ನು ಪೋಲ್ಡರ್ ನಲ್ಲಿ ಸುರಕ್ಷಿತವಾಗಿ ಇದು ಸಂರಕ್ಷಿಸಿಡಲಿದ್ದು, ಬೆಳಗಿನ ವೇಳೆ ನಮ್ಮ ಮುಖ ಹೇಗಿರುತ್ತದೆಂಬುದನ್ನು ಆಗಾಗ ನೋಡಿಕೊಳ್ಳುತ್ತಿರಬಹುದು.

Write A Comment