ಮನೋರಂಜನೆ

ನನ್ನ ಇಮೇಜ್ ಚೇಂಜ್ ಮಾಡೋಕಾಗುತ್ತಾ ಎಂದ ಸನ್ನಿ!

Pinterest LinkedIn Tumblr

3894sunny-leone-website-292x242

ನೀಲಿ ಚಿತ್ರಗಳ ರಾಣಿ  ಸನ್ನಿ ಲಿಯೋನ್ ಇದೀಗ ತಮ್ಮ ಇಮೇಜ್ ಬಗೆಗೆ ಮಾತನಾಡುವ ಮೂಲಕ ತಮ್ಮ ಅಂತರಾಳದ ನೋವನ್ನು ಬಿಚ್ಚಿಟ್ಟಿದ್ದಾಳೆ.

ನೀಲಿ ಚಿತ್ರಗಳಿಗೆ ಬೈ ಹೇಳಿ ಬಾಲಿವುಡ್ ನಲ್ಲಿಯೇ ತನ್ನ ಹಾಟ್ ಅಭಿನಯದ ಮೂಲಕ ನೆಲೆ ಕಂಡುಕೊಂಡ ಈ ಬೆಡಗಿ  ಸಿನಿಪ್ರಿಯರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವ ಯಾವುದೇ ಪಾತ್ರದಲ್ಲಿ ನನ್ನನ್ನು ಮೂರ್ಖಳಂತೆ ತೋರಿಸಿದರೂ ನಾನು ಅಂಜಿಕೆ ಇಲ್ಲದೆ ಮಾಡುತ್ತೇನೆ ಎಂದು ವಿವರಿಸಿದ್ದಾರೆ.

ತಮ್ಮ ಅಭಿನಯದ ‘ಕುಚ್ ಕುಚ್ ಲೋಚಾಯೆ’ ಕೂಡ ಕಾಮಿಡಿ ಚಿತ್ರವಾಗಿದ್ದು, ನನಗೆ ತಮಾಷೆ ಮಾಡೋದು ಅಂದರೆ ಇಷ್ಟ. ಹೀಗಾಗಿ ನನಗೆ ಹಾಸ್ಯ ಪ್ರಜ್ಞೆ ಇದೆ ಎಂದಿರುವ ಸನ್ನಿ, ಪಾತ್ರ ಬಯಸಿದರೆ ತೆರೆಯ ಮೇಲೆ ನನ್ನನ್ನು ಲೇವಡಿ ಮಾಡಿದರೂ ಕಿರಿಕಿರಿ ಆಗುವುದಿಲ್ಲ ಆದರೆ ಜನರು ನನ್ನ ಬಗೆಗೆ ಆಡುವ ಮಾತು ಕೆಲವೊಮ್ಮೆ ಬೇಸರ ತರಿಸುತ್ತದೆ.

ಆದರೆ ನನ್ನ ಬಗ್ಗೆ ಇರುವ ಇಮೇಜ್ ಅಳಿಸಲು ಅಥವಾ ಹೊಸ ಇಮೇಜ್ ಹುಟ್ಟು ಹಾಕಲು ನನ್ನಿಂದ ಸಾಧ್ಯವಿಲ್ಲ. ನನ್ನ ಅಭಿನಯದ ಮೂಲಕ ನನ್ನ ಅಭಿಮಾನಿಗಳ ಮನಗೆಲ್ಲಲು ಮಾತ್ರ ನಾನು ಚಿಂತಿಸುತ್ತೇನೆ ಅಷ್ಟೇ ಎಂದು ತಿಳಿಸಿದ್ದಾರೆ.

Write A Comment