ಅಂತರಾಷ್ಟ್ರೀಯ

ಮಹಿಳೆಯ ಪ್ರಸವ ವೇದನೆಯಿಂದ ಕೆಳಕ್ಕಿಳಿದ ವಿಮಾನ !

Pinterest LinkedIn Tumblr

3276pregnant

ಕತಾರ್‌ನಿಂದ ಥಾಯ್ಲಂಡ್‌ ಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳಿಗೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡ ಪರಿಣಾಮವಾಗಿ ಕತಾರ್‌ ಏರ್‌ ವೇಸ್‌ ವಿಮಾನವನ್ನು ಚೆನ್ನೈನಲ್ಲಿ ತುರ್ತಾಗಿ ಇಳಿಸಿದ ಘಟನೆ ನಡೆದಿದೆ.

ಕತಾರ್‌ ಏರ್‌ ವೇಸ್‌ನ ವಿಮಾನವು ಕತಾರ್‌ನಿಂದ ಥಾಯ್ಲಂಡ್‌ನ‌ ಫ‌ುಕೇ ಗೆ ತೆರಳುತ್ತಿದ್ದ ವಿಮಾನವು ಚೆನ್ನೈ ವಾಯು ಕ್ಷೇತ್ರದಲ್ಲಿ ಹಾರುತ್ತಿದ್ದ ಸಮಯದಲ್ಲಿ 36 ವರ್ಷ ಪ್ರಾಯದ ಫಿಲಿಪ್ಪೀನ್‌ ಮಹಿಳೆಗೆ ತೀವ್ರ ಪ್ರಸವ ವೇದನೆ ಉಂಟಾಗಿ ರಕ್ತ ಸ್ರಾವ ಆರಂಭವಾಯಿತು.

ತಕ್ಷಣ ಈ ವಿಷಯ ಅರಿತ ವಿಮಾನದ ಪೈಲಟ್‌ ಚೆನ್ನೈ ವಿಮಾನ ನಿಲ್ದಾಣದ ವಾಯುಸಾರಿಗೆ ನಿಯಂತ್ರಕರಿಗೆ ವಿಷಯವನ್ನು ತಿಳಿಸಿ ವಿಮಾನವನ್ನು ತುರ್ತಾಗಿ ಇಳಿಸಬೇಕಾದ ಅಗತ್ಯವನ್ನು ತಿಳಿಸಿದ್ದು ಕೂಡಲೇ ಅಧಿಕಾರಿಗಳು ವಿಮಾನದ ತುರ್ತು ಅವತರಣಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಅಲ್ಲದೇ ವಿಮಾನ ಇಳಿದೊಡನೆಯೇ ವೈದ್ಯಕೀಯ ತಂಡವೊಂದು ಮಹಿಳೆಯ ನೆರವಿಗೆ ಧಾವಿಸಿ ಆಕೆಯನ್ನು ತುರ್ತಾಗಿ ಆ್ಯಂಬುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ಮಹಿಳೆ ಸುರಕ್ಷಿತವಾಗಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

Write A Comment