ಮನೋರಂಜನೆ

ಗಗನ ಸಖಿಯಾಗ್ತಾಳಂತೆ ಸೋನಂ !

Pinterest LinkedIn Tumblr

3999Sonam-Kapoor-in-Bikini-287x300

ತಮ್ಮ ಅಭಿನಯದ ಮೂಲಕ ಸಿನಿಮಾ ಪ್ರಿಯರನ್ನು ಸೆಳೆದಿರುವ ಸೋನಂ ಕಪೂರ್ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಗಮನಸೆಳೆಯಲು ಮುಂದಾಗಿದ್ದಾರೆ.

ಹೌದು. 1986ರ ಸೆಪ್ಟೆಂಬರ್ 5ರಂದು ಪ್ಯಾನ್ ​ಆಮ್​ವಿಮಾನ ಅಪಹರಣವಾದಾಗ, ಅದರೊಳಗಿದ್ದ ಪ್ರಯಾಣಿಕರನ್ನು ರಕ್ಷಿಸಲಿಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗಗನಸಖಿ ನೀರಜಾ ಭಾನೊಟ್ ಅವರ ಜೀವನ ಕರ್ಥೆಯನ್ನು ಆಧರಿಸಿ ಚಿತ್ರವೊಂದು ನಿರ್ಮಾಣವಾಗುತ್ತಿದ್ದು ಈ ಚಿತ್ರದಲ್ಲಿ ಸೋನಂ ಗಗನಸಖಿಯ ಪಾತ್ರದಲ್ಲಿ ಮಿಂಚಲಿದ್ದಾರಂತೆ.

ಸೋನಂ ಗೆ ಈ ವಿಭಿನ್ನ ಪಾತ್ರ ನಿಜವಾಗಿಯೂ ಸಂತಸ ತಂದುಕೊಟ್ಟಿದ್ದು ಅದಕ್ಕಾಗಿಯೇ  ಗಗನಸಖಿಯ ಸಮವಸ್ತ್ರದಲ್ಲಿರುವ ​ ತಮ್ಮ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲ ತಾಣಗಳಲ್ಲಿ  ಹರಿಬಿಟ್ಟಿದ್ದು ಭಾರತದ ಅತಿಚಿಕ್ಕ ವಯಸ್ಸಿನ ಅಶೋಕ ಚಕ್ರ ಪ್ರಶಸ್ತಿ ವಿಜೇತೆಯ ಪಾತ್ರ ನಿಭಾಯಿಸುವ ಸುವರ್ಣಾವಕಾಶ ಸಿಕ್ಕಿದೆ. ಅದೃಷ್ಟ, ಹೆಮ್ಮೆ, ಗೌರವ ಭಾವದಲ್ಲಿದ್ದೇನೆ ಎಂದು ತಮ್ಮ ಮನಸ್ಸಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

Write A Comment