ಮನೋರಂಜನೆ

ಮೈ ಚಾಯ್ಸ್ ರಹಸ್ಯ ಬಿಚ್ಚಿಟ್ಟ ದೀಪಿಕಾ !

Pinterest LinkedIn Tumblr

3188Hot-deepika-padukone

ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ಮೈ ಚಾಯ್ಸ್ ಸಾಕ್ಷ್ಯಚಿತ್ರದ ಬಗೆಗೆ ಇದೀಗ ನಟಿ ದೀಪಿಕಾ ಪಡುಕೋಣೆ ತಮ್ಮ ಹೇಳಿಕೆ ನೀಡಿ ಜನ  ನನ್ನ ಬಗೆಗೆ ತಪ್ಪು ತಿಳಿದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ  ದೀಪಿಕಾ, ಸಾಕ್ಷ್ಯಚಿತ್ರದಲ್ಲಿನ ಕೆಲ ಸಾಲುಗಳ ನನ್ನ ಆಯ್ಕೆಯದ್ದಾಗಿರಲಿಲ್ಲ. ಆದರೆ ಚಿತ್ರವು ನೀಡುತ್ತಿದ್ದ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಆ ಸಾಲುಗಳನ್ನು ನಾನು ಹೇಳಿದ್ದೇನೆಯೇ ಹೊರತು ಇದರಲ್ಲಿ ಮತ್ತಾವುದೇ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೇ ಈ ಸಾಕ್ಷ್ಯ ಚಿತ್ರ ಉತ್ತಮ ಸಂದೇಶ ನೀಡಿದ್ದರೂ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಯಿತು.ಅಷ್ಟೇ ಅಲ್ಲ, ಕೆಲ ವಿಷಯಗಳ ಕುರಿತು ಅಪ ಪ್ರಚಾರ ಮಾಡಿ ನೈಜ ಸಂದೇಶ ಜನರಿಗೆ ತಲುಪಳು ಸಾಧ್ಯವೇ ಆಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಾನು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತೇನೆ ಅದು ಮದುವೆಗೂ ಮೊದಲೋ ಅಥವಾ ನಂತರವೋ ನನ್ನಿಷ್ಟ ಎನ್ನುವ ಮೂಲಕ ದೀಪಿಕಾ ವಿವಾದಕ್ಕೆ ಗುರಿಯಾಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.
-ಕನ್ನಡ ದುನಿಯಾ

Write A Comment