ಮನೋರಂಜನೆ

ಮಲಗಿದ್ದ ನಟಿಯೊಬ್ಬಳ ಮೈಮೇಲೆ ಕೈ ಆಡಿಸಿದ ಹೋಟೆಲ್ ಸಿಬ್ಬಂದಿ !

Pinterest LinkedIn Tumblr

3874Khushi-Mukherjee-Sexy-Thigh-Show-14

ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿಯೊಬ್ಬಳು ಮಲಗಿದ್ದಾಗ ಹೋಟೆಲ್ ಸಿಬ್ಬಂದಿ ಬಂದು ಆಕೆಯ ಮೈಮೇಲೆ ಕೈ ಆಡಿಸಿದ ಘಟನೆ ನಡೆದಿದೆ ಎನ್ನಲಾಗಿದ್ದು ಈ ಕುರಿತಾಗಿ ನಟಿ ಪೊಲೀಸರಿಗೆ ದೂರು ದಾಖಲಿಸಿದ  ಮಾಹಿತಿ ಲಭ್ಯವಾಗಿದೆ.

ಭೋಪಾಲ್ ನ ಎಂಪಿನಗರದ ಅಮರ್ ವಿಲಾಸ್ ಹೋಟೆಲ್ ನಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಖುಷಿ ಮುಖರ್ಜಿ ವಾಸ್ತವ್ಯ ಹೂಡಿದ್ದಳು. ಅಲ್ಲದೇ ಆಕೆ ತಮ್ಮ ಹೋಟೆಲ್ ರೂಮಿನಲ್ಲಿ ಮಲಗಿದ್ದ ಸಮಯದಲ್ಲಿ ಹೋಟೆಲ್  ಸಿಬ್ಬಂದಿಯೊಬ್ಬ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು  ನಟಿ ಖುಷಿ ಶುಕ್ರವಾರವೇ ಪೊಲೀಸರಿಗೆ ದೂರು ನೀಡಿದ್ದಲ್ಲದೇ  ಟಿವಿ ಚಾನೆಲ್ ನಲ್ಲಿ ಕುಳಿತು ತನ್ನ ಗೋಳು ತೋಡಿಕೊಂಡಿದ್ದು ಇದೇ ಸಂದರ್ಭದಲ್ಲಿ ಆರೋಪಿ ಹುಡುಗನನ್ನು ಮಾಧ್ಯಮದ ಮುಂದೆ ತಂದು ನಿಲ್ಲಿಸಿದಾಗ ಸಿಟ್ಟಿಗೆದ್ದ ನಟಿ ಆತನ ಕೆನ್ನೆಗೆ ಬಾರಿಸುವ ಮೂಲಕ ತನ್ನ ಆಕ್ರೋಶ ಹೊರಗೆಡವಿದ್ದಾರೆ.

ಆದರೆ ಹೋಟೆಲ್ ನ ಮಾಲೀಕ ಮಾತ್ರ ಇದನ್ನು ಅಲ್ಲಗಳೆದಿದ್ದು ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ತಂತ್ರವಷ್ಟೇ ಎಂದು ತಿಳಿಸಿದ್ದಾರೆ. ಈ ನಡುವೆ ಐಪಿಸಿ ಸೆಕ್ಷನ್ 354 ಹಾಗೂ 456 ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೋಟೆಲ್ ನ ಕಾರಿಡಾರ್, ನಟಿ ತಂಗಿದ್ದ ರೂಮ್ ನಂಬರ್ 602ರ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಹೋಟೆಲ್ ಸಿಬ್ಬಂದಿಗೆ ಸೂಚಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
-ಕನ್ನಡ ದುನಿಯಾ

Write A Comment