ರಾಷ್ಟ್ರೀಯ

ಕಾಪಿ ಹೊಡೆದು ಡಿಬಾರ್ ಆದ ಹಿರಿಯ ಪೊಲೀಸ್ ಅಧಿಕಾರಿ!

Pinterest LinkedIn Tumblr

igpಎಸ್ ಎಸ್ ಎಲ್ ಸಿ, ಪಿಯೂಸಿ ಪರೀಕ್ಷೆಯಲ್ಲಿ ಪಾಪಿ ಹೊಡೆದು ಡಿಬಾರ್ ಆದವರನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಐಜಿಪಿ ಒಬ್ಬರು ಎಲ್ಎಲ್ಎಂ ಪರೀಕ್ಷೆ ತೆಗೆದುಕೊಂಡು ಎಕ್ಸಾಂ ಹಾಲ್ ನಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಹೊರಹಾಕಿಸಿಕೊಂದಿದ್ದಾರೆ.

ಹೌದು. ಕೇರಳ ಐಜಿಪಿ ಟಿ.ಜೆ.ಜೋಸೆಫ್ ಎಂಬುವವರು ಕೊಟ್ಟಾಯಂನ ಯೂನಿವರ್ಸಿಟಿ ಮ್ಯಾನತೆಯಿರುವ ಕಾಲೇಜಿನಲ್ಲಿ ಎಲ್ಎಲ್ಎಂ ಪರೀಕ್ಷೆ ತೆಗೆದುಕೊಂಡಿದ್ದರು.  ಕಲಾಮಾಸ್ಸೆರಿ ನಗರದಲ್ಲಿರುವ ಸೆಂಟ್ ಪೌಲ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷಾ ಕೇಂದ್ರದ ಮೇಲ್ವಿಚಾರಣಾಧಿಕಾರಿಗಳು ತಪಾಸಣೆಗೆ ಬಂದಾಗ ಈ ವೇಳೆ ನಕಲು ಚೀಟಿಯನ್ನು ಜೊತೆಯಲ್ಲೇ ಇರಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಜೋಸೆಫ್ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು ಹಿರಿಯ ಅಧಿಕಾರಿಯ  ಈ ವರ್ತನೆಯಿಂದ ಬೇಸತ್ತ ಮೇಲ್ವಿಚಾರಕರು ಎಕ್ಸಾಂ ಹಾಲ್ ನಿಂದ ಹೊರಹಾಕಿದ್ದಾರೆ.

ಆದರೆ ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಸಹಿತ ಸಿಕ್ಕಿಬಿದ್ದ ವ್ಯಕ್ತಿ ಹಿರಿಯ ಪೊಲೀಸ್ ಅಧಿಕಾರಿ ಎಂಬುದು ಮೇಲ್ವಿಚಾರಕರಿಗೆ ತಿಳಿದಿರಲಿಲ್ಲ ಎನ್ನಲಾಗಿದ್ದು, ಕಾಲೇಜು ಆಡಳಿತ ಮಂಡಳಿಯೂ ಸಹ ಕೊಟ್ಟಾಯಂ ಯೂನಿವರ್ಸಿಟಿಗೆ ಈ ಕುರಿತು ವರದಿ ನೀಡಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಕೇರಳ ಎಡಿಜಿಪಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-ಕನ್ನಡ ದುನಿಯಾ

Write A Comment