ಕುಂದಾಪುರ: ಬಹುನಿರೀಕ್ಷಿತ, ಕಳೆದ 35 ವರ್ಷಗಳ ಜಿಲ್ಲೆಯ ಜನರ ಕನಸು ಸೊಮವಾರ ಸಾಕಾರಗೊಂಡಿದೆ. ರೈತರ ಮುಖದಲ್ಲಿ ಮಂದಹಾಸ, ಜನಪ್ರತಿನಿಧಿಗಳಲ್ಲಿ ಸಾಧಿಸಿದ ಛಲ. ವಾರಾಹಿ ಕಾಲುವೆಯಲ್ಲಿ ಅಧಿಕ್ರತವಾಗಿ ನೀರು ಹರಿದೆ ಬಿಟ್ಟಿತ್ತು. ಕಾಲುವೆಯಲ್ಲಿ ನಿರು ಹರಿಯುವುದ ನೋಡಿದ ಜನರಂತೂ ಫುಲ್ ಖುಷ್ ಆಗಿದ್ದರು.
ಹೌದು… ಉಡುಪಿ ಜಿಲ್ಲೆಯ ರೈತರು ಹಾಗು ಜನರ ಬಹು ನಿರಿಕ್ಶೆಯಾಗಿದ್ದ ವಾರಾಹಿ ನೀರಾವರಿ ಯೊಜನೆಗೆ ಅಮ್ತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವ ಮೂಲಕ ಜನರಲ್ಲಿ ಉತ್ಸಾಹ ಮೂಡಿಸಿದ್ದಾರೆ. ಕುಂದಾಪುರ ತಾಲೂಕಿನ ಸಿದ್ಧಾಪುರದ ಹೊಳೆಶಂಕರನಾರಾಯಣದಲ್ಲಿ ಸಿದ್ದರಾಮಯ್ಯನವರು ಯಂತ್ರದ ಗುಂಡಿ ಅದುಮುವ ಮೂಲಕ ಚಾಲನೆಗೊಳಿಸಿದರು.
ಬಳಿಕ ಸಿದ್ದಾಪುರದ ಪ್ರೌಢಶಾಲೆ ಮೈದಾನದಲ್ಲಿ ಆಯೊಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾರಾಹಿ ಯೋಜನೆ ಈ ಭಾಗದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಬಹಳಷ್ಟು ಜನರ ಹೋರಾಟ, ಶ್ರಮ ಎಲ್ಲವೂ ರೈತರ ಹಿತದ್ರಷ್ಟಿಯಿಂದ ಆಗಿದೆ. 1979ರಲ್ಲಿ ಗೂಂಡುರಾಯರು ಮುಖ್ಯಮಂತ್ರಿಯಾಗಿದ್ದಾಗ ಶಿಲನ್ಯಾಸ ಮಾಡೀದ ಈ ಕಾಮಗಾರಿಗೆ ಸದ್ಯ ೩೫ ವರ್ಷಗಳಾಯಿತು. ಈ ಭಾಗದ ಜನರು ನಿರೀಕ್ಷೆ ಇಟ್ಟುಕೊಂಡು ಈ ಕಾಮಗಾರಿಗಾಗಿ ಸಹನೆಯಿಂದ ಕಾದಿದ್ದು ಇದು ಕರಾವಳಿ ಜನರ ಸಹನೆಗೆ ಮಾದರಿ.ವಾಸ್ತವಿಕವಾಗಿ 35 ವರ್ಷ ಈ ಕಾಮಗಾರಿಯಾದರೂ ಕೂಡ 2005 ರಿಂದ ಈ ಕಾಮಗಾರಿಗೆ ವೇಗಬಂತು. ಈ ಹತ್ತು ವರ್ಶಗಳಲ್ಲಿ ರಜೆ, ಮಲೆಗಾಲದ ಸಮಸ್ಯೆಯಿಂದ ಕೆಲಸ ಮಾಡಲು ಸಿಕ್ಕಿದ್ದು ಕೇವಲ 5 ವರ್ಷ ಮಾತ್ರ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಇ ಎರಡು ವರ್ಷದಲ್ಲಿ ಶೇಖಡಾ ೬೦ ರಷ್ಟು ಕಾಮಗಾರಿ ಮುಗಿದಿದೆ. ಇನ್ನು ೨ ವರ್ಷದಲ್ಲಿ ಎರಡನೇ ಹಂತದ ಕಾಮಗಾರಿ ಪುರ್ಣಗೊಳಿಸುವ ಬಗ್ಗೆ ಈಗಾಗಲೇ ಸಂಬಂದಪಟ್ಟವರಿಗೆ ಸೂಚಿಸಲಾಗಿದೆ ಎಂದರು. ವಾರಾಹಿ ಕಾಮಗಾರಿ ಬಗ್ಗೆ ಕೆಲವು ಠೀಕೆಗಳು, ಆರೊಪವಿದ್ದು ಕಾಮಗಾರಿ ಬಗ್ಗೆ ಯಾವ ಸಂಶಯ, ಆತಂಕ ಬೇಡ ಎಂದು ಸಿದ್ದರಾಮಯ್ಯ ಇದೇ ಸಂದರ್ಭ ಹೇಳಿದರು.
ಈ ಭಾಗದ ಜನರಿಗೆ ಇಂದಿನ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡಬೆಕಾದಂತಾಗಿದ್ದು, ಕಾರ್ಯಕ್ರಮದಲ್ಲಿ ವಿರೊಧ ಪಕ್ಶದವರು ಭಾಗವಹಿಸದ ಬಗ್ಗೆ ಅಸಮಧಾನವಿದೆ, ಇವರಿಗೆ ಇಂತಹ ಕಾರ್ಯಕ್ರಮದಲ್ಲಿ ಆಸಕ್ತಿಯಿಲ್ಲ, ಅವರದ್ದು ಕೆವಲ ಠೀಕೆ ಹಾಗು ಆರೋಪ ಮಾತ್ರ ಎಂದರು.
ಕಸ್ತುರಿ ರಂಗನ್ ವರದಿ ಬಗ್ಗೆ ಇಗಾಗಲೆ ಉಪಸಮಿತಿಯನ್ನು ಮಾದಿದ್ದು ಪಶ್ಚಿಮ ಘಟ್ಟಗಳಲ್ಲಿ ಪ್ರವಾಸ ಮಾಡಿ ಜನರನ್ನು ಸಂಘಸಂಸ್ಥೆಗಳನ್ನು , ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯವಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವಾಗಬೇಕೆಂಬುದು ನಮ್ಮ ಪನ. ಇದಕ್ಕೆ ಯಾರ ಟೀಕೆ-ಟಿಪ್ಪಣಿ ಬಂದರೂ ಹೆದರೊಲ್ಲ. ಬಡವರು ಈ ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಆರೊಗ್ಯವಂತರಾಗಿ ತಮ್ಮ ಹಕ್ಕುಗಳನ್ನು ಪಡೆದು ಬದುಕುವಂತಾಗಬೇಕು. ಯಾರದ್ದೊ ಬಣ್ಣದ ಮಾತುಗಳನ್ನು ಕೇಳುವುದು ಸರಿಯಲ್ಲ, ರೈತರ ಸಮಸ್ಯೆ ಕೇವಲ ಮಾತಿನಿಂದ ಪರಿಹಾರವಾಗೊಲ್ಲ, ಹೊತ್ತೆಯು ತುಂಬೊಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂದರ್ಭ ಸರ್ಕಾರೀ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಲಾಗಿದ್ದು, ನಾಲ್ಕು ಸಾವಿರ ಫಲಾನುಭವಿಗಳ ಪ್ರತಿನಿಧಿಯಾಗಿ ಸಿದ್ಧಾಪುರದ ಶಾರದಾ ಕುಲಾಲ್ ಅವರಿಗೆ 94ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಮತ್ತು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು. ಸುಧಾಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಆರ್ ಶೆಟ್ಟಿ, ಲಲಿತಾ ಆರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ವೆರೋನಿಕಾ ಕನರ್‌ೆಲಿಯೋ, ಉಪವಿಭಾಗಾಧಿಕಾರಿ ಚಾರುಲತಾ ಸೋಮಾಲ್, ತಹಸೀಲ್ದಾರ್ ಗಾಯತ್ರಿ ಎಸ್. ನಾಯಕ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮಾಜೀ ಶಾಸಕ ಬಸವರಾಜ್, ಮಾಜೀ ಶಾಸಕ ಯು.ಆರ್.ಸಭಾಪತಿ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ನೀರಾವರಿ ನಿಗಮದ ಆಡಳಿತ ನಿರ್ದೇಶಕ ರುದ್ರಯ್ಯ ಸ್ವಾಗತಿಸಿದರು. ಪತ್ರಕರ್ತ ಕೆ.ಸಿ,ರಾಜೇಶ್ ಸ್ವಾಗತಿಸಿದರು.