ಮನೋರಂಜನೆ

ಅಜಯ್ ರಾವ್ – ರಾಧಿಕಾ ಜೋಡಿಯ ‘ಎಂದೆಂದಿಗೂ’ ಚಿತ್ರವಿಮರ್ಶೆ

Pinterest LinkedIn Tumblr

Ajay-Roa-Endendigoo

ನೈಜ ಪ್ರೀತಿ,  ಆ ಪ್ರೀತಿಗೆ ದೈವಬಲ ಇದ್ದರೆ ಸಾವನ್ನೂ ಗೆಲ್ಲಬಹುದೇ? ಈ ಪ್ರಶ್ನೆಗೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ತಮ್ಮ ಹಾರರ್ ಮಿಶಿತ್ರ ಪ್ರೇಮ ಕಥೆ ಎಂದೆಂದಿಗೂ  ಚಿತ್ರದ ಮೂಲಕ ಉತ್ತರ ಹುಡಕಲು ಪ್ರಯತ್ನ ಮಾಡಿದ್ದಾರೆ.  ಹೊಸತನವಿಲ್ಲದ ಎಂದೆಂದಿಗೂ ಮೊದಲರ್ಧ ಭಾಗ ನಿಧಾನಗತಿಯಲ್ಲಿ ಸಾಗಿದರೂ ಇಂಪಾದ ಹಾಡುಗಳು, ಸಂಗೀತ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.  ಕೊರಿಯೋಗ್ರಾಫರ್ ಆಗಿದ್ದ ಇಮ್ರಾನ್ ಸರ್ದಾರಿಯಾ ಗಂಡ-ಹೆಂಡತಿಯ ನಡುವಿನ ಗಾಢ ಪ್ರೇಮವನ್ನು ಪ್ರೇಕ್ಷಕರಿಗೆ ಥ್ರಿಲ್ ಅನುಭವ ಕೊಡುವಂತೆ ನಿರೂಪಿಸಲು

ಬಳಸಿಕೊಂಡಿರುವ ತಂತ್ರ ಜೋತಿಷ್ಯದಲ್ಲಿನ ನಂಬಿಕೆ, ದೈವಶಕ್ತಿ ಹಾಗೂ ತೀವ್ರವಾದ ಕನಸುಗಳನ್ನು ಮಾತ್ರ.  ಸ್ವೀಡನ್  ದೇಶದ ಸುಂದರ ತಾಣಗಳ ದೃಶ್ಯಗಳನ್ನು ಚಿತ್ರಿಸುವಲ್ಲಿ ಕ್ಯಾಮೆರಾಮ್ಯಾನ್ ಸಾಕಷ್ಟು ಕೆಲಸ ಮಾಡಿದ್ದಾರೆ.

ನಾಯಕಿ ಪಾತ್ರದ ಜ್ಯೋತಿ (ರಾಧಿಕಾ ಪಂಡಿತ್)ಗೆ ಬಾಲ್ಯದಲ್ಲೇ ನಡೆದ ಘಟನೆ ಬದುಕಿನಲ್ಲಿ ಮತ್ತೊಂದು ಪವಾಡವನ್ನು ಸೃಷ್ಟಿಸುತ್ತದೆ. ನಾಯಕ ಕೃಷ್ಣ(ಅಜಯ್ ರಾವ್) ರೈತರ ಬಗ್ಗೆ ಕಾಳಜಿಯಿಂದ ಪ್ರಪಂಚದ ಗಮನ ಸೆಳೆಯುವ ಪ್ರಯತ್ನದಲ್ಲಿ ತೊಡಗುತ್ತಾನೆ. ಮನೆಯವರು  ಇಬ್ಬರಿಗೂ ಮದುವೆ ಮಾಡಿ ವಿದೇಶಕ್ಕೆ ಕಳುಹಿಸುತ್ತಾರೆ.  ಸ್ವೀಡನ್‌ನಲ್ಲಿ ನಡೆಯುವ ಅವಘಡಗಳು ಹಾಗೂ ನಾಯಕಿಗೆ ಕನಸಿನ ಮೂಲಕ ತಿಳಿಯುವ ಅಗೋಚರ ವಿಚಾರಗಳಿಂದ ಆಕೆಯ ಮನಸ್ಸಿನಲ್ಲಾಗುವ ತೊಳಲಾಟಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ದಂಪತಿಗಳ ಪ್ರೀತಿ ಹಾಗೂ ನಾಯಕನ ವೃತ್ತಿ ಎರಡು ದೈವ ಬಲದಿಂದ ಗಂಡಾಂತರಗಳಿಂದ ಪಾರು ಮಾಡುತ್ತವೆಯೇ ಇಲ್ಲವೇ? ಎಂಬ ಅಂಶ ಚಿತ್ರ ನೋಡಿದರೆ ತಿಳಿಯುತ್ತದೆ.  ನಿರ್ಮಾಪಕರು ಚಿತ್ರಕ್ಕಾಗಿ ಅದ್ಧೂರಿಯಾಗಿ ಖರ್ಚು ಮಾಡಿದ್ದಾರೆ. ಚಿತ್ರ ವೇಗವನ್ನು ಪಡೆದುಕೊಂಡು ಲವಲವಿಕೆಯಿಂದ ಸಾಗಿದ್ದರೆ ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯಬಹುದಿತ್ತು. ನಿರ್ದೇಶಕ- ಇಮ್ರಾನ್ ಸರ್ದಾರಿಯಾ, ಸಂಗೀತ-ವಿ. ಹರಿಕೃಷ್ಣ, ನಿರ್ಮಾಣ -ಎಸ್.ವಿ.ಬಾಬು, ತಾರಾಂಗಣ: ಅಜಯ್ ರಾವ್, ರಾಧಿಕಾ ಪಂಡಿತ್, ಅಶೋಕ, ಪವಿತ್ರ ಲೋಕೇಶ್ ಮೊದಲಾದವರು.
– ಈ ಸಂಜೆ

Write A Comment