ಮನೋರಂಜನೆ

ಬುಕ್ಕಿ ಜತೆ ಕಾಣಿಸಿಕೊಂಡ ಯುವರಾಜ್ ಸಿಂಗ್ !

Pinterest LinkedIn Tumblr

7209yuvraj-gilhotra2804fb-630

ಭಾರತ ಕ್ರಿಕೆಟ್ ತಂಡದ ಬಿರುಸಿನ ಆಟಗಾರಎಂದೇ ಕರೆಯಿಸಿಕೊಳ್ಳುವ ಯುವರಾಜ್ ಸಿಂಗ್ ಅವರಿಗೆ ವಿವಾದವೊಂದು ಸುತ್ತಿಕೊಂಡಿದ್ದು ಯುವರಾಜ್ ಸಿಂಗ್ ಅವರ ಆಟದ ಬಗೆಗೆ ಅನುಮಾನ ಮೂಡಲು ಕಾರಣವಾಗಿದೆ.

ಹೌದು. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ​ಗೆ ಶಂಕಿತ ಬುಕ್ಕಿ ಕರಣ್ ಗಿಲ್ಹೋತ್ರ ಜತೆ ಸಂಪರ್ಕವಿದೆಯೆಂದು ಐಸಿಸಿ ಚೇರ್ಮನ್ ಎನ್. ಶ್ರೀನಿವಾಸನ್ ಆರೋಪಿಸಿದ್ದು ಈ ನಡುವೆಯೇ ಯುವರಾಜ್ ಸಿಂಗ್ ಅವರು  ಗಿಲ್ಹೋತ್ರ ಜತೆ ಪೋಸು ನೀಡಿರುವ ಚಿತ್ರ ವೆಬ್​ಸೈಟ್​ನಲ್ಲಿ ಹರಿದಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಆದರೆ ಗಿಲ್ಹೋತ್ರ  ಅವರ ಜತೆ, ಬಾಲಿವುಡ್ ನಟ ಸಲ್ಮಾನ್ ಖಾನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಟೀಮ್​ಇಂಡಿಯಾ ನಾಯಕ ಎಂ.ಎಸ್ ಧೋನಿ ಕೂಡ ಪೋಸ್ ನೀಡಿದ್ದು ಹಾಗಾಗಿ ಈ ಫೋಟೋಗಳಿಗೂ ಬೆಟ್ಟಿಂಗ್ ಗೂ ಯಾವುದೇ ಸಂಬಂಧವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಈಗಾಗಲೇ ತಮ್ಮ ಮೇಲೆ ಬಂದಿರುವ ಆರೋಪದ ಬಗೆಗೆ  ಗಿಲ್ಹೋತ್ರ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ವೇಳೆ ನಾನು ಕ್ರೀಡಾಂಗಣದಲ್ಲಿ ಹಾಜರಿದ್ದದ್ದು ಹೌದು. ಆದರೆ  ಬೆಟ್ಟಿಂಗ್-ಫಿಕ್ಸಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅನುರಾಗ್ ಹೆಸರು ಕೆಡಿಸಲು ಐಸಿಸಿ ಪ್ರಯತ್ನಿಸುತ್ತಿದ್ದು  ನನ್ನ ವಿರುದ್ಧ ಏನಾದರೂ ಸಾಕ್ಷ್ಯವಿದ್ದರೆ ಐಸಿಸಿ ನೀಡಲಿ ಎಂದು ಸವಾಲೆಸೆದಿದ್ದಾರೆ.
-ಕೃಪೆ: ಕನ್ನಡ ದುನಿಯಾ

Write A Comment