ರಾಷ್ಟ್ರೀಯ

ಸಿಬ್ಬಂದಿಯ ಮೇಲೆ ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ವೈದ್ಯರಿಂದ ಲೈಂಗಿಕ ಶೋಷಣೆ

Pinterest LinkedIn Tumblr

rape

ನವದೆಹಲಿ: ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಸಪ್ಧರಜಂಗ್‌ನ ಕ್ರೀಡಾ ಗಾಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳಾ ಸಿಬ್ಬಂದಿಯ ಮೇಲೆ ಹಿರಿಯ ವೈದ್ಯರೊಬ್ಬರು ಲೈಂಗಿಕ ಶೋಷಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಹೆಸರಾಂತ ಮನೋವೈದ್ಯರ ಮೇಲೆ ಈ ಆರೋಪ ಕೇಳಿ ಬಂದಿದ್ದು, ಅವರು ಆಕೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
.
ಆಸ್ಪತ್ರೆಯಲ್ಲಿ ಡಾಟಾ- ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿ, “ವೈದ್ಯರು ನನಗೆ ಫಿಜಿಯೋಥೆರಪಿ ಮತ್ತು ಹಿಪ್ ಸರ್ಜರಿಯನ್ನು ಹೇಳಿ ಕೊಡುತ್ತೇನೆ ಎಂದು ಪುಸಲಾಯಿಸಿದ್ದರು. ಏಪ್ರಿಲ್ 7 ರಂದು ಈ ತರಬೇತಿ ನೀಡುತ್ತಿದ್ದ ಸಮಯದಲ್ಲಿ ಅವರು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದರು”, ಎಂದು ದೂರು ನೀಡಿದ್ದಾಳೆ.

ಎಪ್ರಿಲ್ 25 ರಂದು ಪೀಡಿತ ಯುವಕಿ ಸಪ್ಧರ್‌ಜಂಗ್ ಎನ್ಕ್ಲೇವ್‌ನಲ್ಲಿ ದೂರು ದಾಖಲಿಸಿದ್ದು, ವೈದ್ಯರು ತನ್ನ ಬಳಿ ಪುರುಷ ರೋಗಿಗಳ ಗುಪ್ತಾಂಗಗಳನ್ನು ಸ್ಪರ್ಶಿಸುವಂತೆ ಒತ್ತಾಯಿಸುತ್ತಿದ್ದರು ಅದಕ್ಕೆ ಒಪ್ಪದಿದ್ದಾಗ ಕೆಲಸದಿಂದ ಕಿತ್ತು ಹಾಕುವುದಾಗಿ  ಬೆದರಿಕೆ ಒಡ್ಡಿದರು ಎಂದು ಪೀಡಿತೆ ದೂರಿನಲ್ಲಿ ವಿವರಿಸಿದ್ದಾಳೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಇನ್ನುವರೆಗೂ ವೈದ್ಯನನ್ನು ಬಂಧಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
-ಕೃಪೆ: ವೆಬ್ ದುನಿಯಾ

Write A Comment