ಮನೋರಂಜನೆ

ಮದುವೆ ಮನೆಯಲ್ಲಿ ಕುಣಿಯಲು ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್‌ಗೆ 4 ಕೋಟಿ ಸಂಭಾವನೆ !

Pinterest LinkedIn Tumblr

jacknew1

ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಅವರು ಲಂಡನ್‌ನಲ್ಲಿ ನಡೆಯುವ ಎನ್‌ಆರ್‌ಐ ಒಬ್ಬರ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಬರೋಬ್ಬರಿ ನಾಲ್ಕು ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಪುತ್ರನ ಮದುವೆಯನ್ನು ಮೇ ಅಂತ್ಯಕ್ಕೆ ಲಂಡನ್‌ನಲ್ಲಿ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ಕೆಲವು ಬಾಲಿವುಡ್ ನಟಿಯರನ್ನು ಸಂಪರ್ಕಿಸಿದ್ದರು. ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಜಾಕ್ವಲಿನ್ ಒಪ್ಪಿಕೊಂಡಿದ್ದು, ತನ್ನ ಚಿತ್ರಗಳ ಹಾಗೂ ಕೆಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬಾಲಿವುಡ್ ನಟಿ ಎರಡು ದಿನಗಳ ಕಾಲ ಲಂಡನ್‌ನಲ್ಲಿ ತಂಗಲಿದ್ದು, ಉದ್ಯಮಿಯ ಕುಟುಂಬ ನಟಿಯ ವಸತಿ ಹಾಗೂ ಇತರೆ ಸೌಲಭ್ಯಗಳ ವ್ಯವಸ್ಥೆ ಮಾಡಿದೆ.ಉದ್ಯಮಿಯ ಕುಟುಂಬ ಸಹ ಜಾಕ್ವಲಿನ್ ಡ್ಯಾನ್ಸ್‌ಗಾಗಿ 4 ಕೋಟಿ ರುಪಾಯಿ ಸಂಭಾವನೆ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಬಾಲಿವುಡ್ ನಟಿಯ ವಕ್ತಾರರು ಖಚಿತಪಡಿಸಿದ್ದಾರೆ.

ಈ ಹಿಂದೆ ಖ್ಯಾತ ವಾಣಿಜ್ಯೋದ್ಯಮಿ ಜಿವಿಕೆ ರೆಡ್ಡಿ ಅವರ ಮೊಮ್ಮಗಳ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದ ಬಾಲಿವುಡ್ ಬಾದಷಾ ಶಾರುಕ್ ಖಾನ್ ಎರಡು ಕೋಟಿ ರುಪಾ.ಯಿ ಸಂಭಾವನೆ ಪಡೆದಿದ್ದರು.

Write A Comment