ಮನೋರಂಜನೆ

ಮಲೈಕಾಗೆ ಶಾಕ್ ನೀಡಿದ ಪೂಜಾ; ತನ್ನಂತೆಯೇ ತದ್ರೂಪಿಯನ್ನು ಕಂಡು ಅಚ್ಚರಿಗೊಂಡ ಮಲೈಕಾ

Pinterest LinkedIn Tumblr

malaika-arora-khan

ಇಂಡಿಯಾಸ್ ಗಾಟ್ ಟ್ಯಾಲೆಂಟ್’ಗೆ ಮೂರನೇ ಬಾರಿ ಜಡ್ಜ್ ಆಗಿದ್ದಾಳೆ ಮಲೈಕಾ ಅರೋರಾ. ಶೋಗೂ ಮುನ್ನ ಸ್ಪರ್ಧಾಳುಗಳೊಂದಿಗೆ ಮಾತನಾಡುವಾಗ ಆಕೆಗೆ ಕಾದಿತ್ತೊಂದು ಅಚ್ಚರಿ!

ಅವಳದ್ದೇ ತದ್ರೂಪಿ ಎನ್ನಬಹುದಾದ ಪೂಜಾ ಎನ್ನುವವಳು ಶೋನಲ್ಲಿದ್ದಳಂತೆ. ಮಾತನಾಡುವಾಗ ಆಕೆ ಈಕೆಯ ಆಂಗಿಕ ಭಾಷೆ, ನಡವಳಿಕೆಗಳೆಲ್ಲವನ್ನೂ ಫಾಲೋ ಮಾಡಿದ್ದೇನೆ ಎಂದಾಗ ಮಲೈಕಾ ಫುಲ್ ಖುಷ್. ಒಬ್ಬ ನಟಿಗೆ ಇದ್ದಕ್ಕಿದ್ದಂತೆ ಮೆಚ್ಚಿನ ಮೆಚ್ಚುಗೆ ಏನು ಬೇಕು? ಅವರಿಬ್ಬರ ಸಾಮ್ಯತೆಗೆ ಇದ್ಯಾವ ಎಕ್ಸ್ ಫ್ಯಾಕ್ಟರ್ ಕಾರಣ ವಿರಬಹುದೆಂದು ಮಲೈಕಾ ತಲೆ ಕೆಡಿಸಿಕೊಂಡಿದ್ದಾಳಂತೆ.

ಈ ಶೋನಲ್ಲಿ ಮೊದಲ ಬಾರಿ ಹೊಸತನ್ನು ಹುಡುಕಲು ಯತ್ನಿಸಿದ್ದರೆ, ಎರಡನೇ ಬಾರಿ ಶೋ ಬಗ್ಗೆ ಭಯ ಮಿಶ್ರಿತ ಗೌರವವಿತ್ತಂತೆ. ಈಗ ವಿಭಿನ್ನ ಭಾವನೆಯೊಂದು ಮೂಡುತ್ತಿದೆಯಂತೆ. ಯಾವ ಸ್ಪರ್ಧಿಯನ್ನೂ ರಿಜೆಕ್ಟ್ ಮಾಡ್ಲಿಕ್ಕೆ ಮನಸ್ಸೇ ಆಗೋಲ್ಲ. ಪ್ರತಿಯೊಬ್ಬರೂ ನೂರಾರು ಕನಸುಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಏನು ಮಾಡ್ಲಿಕ್ಕೂ ಆಗೋಲ್ಲ ಎಂದು ಮಲೈಕಾ ಅವಳಿಗೆ ಅವಳೇ ಸಮಾಧಾನಿಸಿಕೊಂಡಿದ್ದಾಳೆ.

Write A Comment