ಮನೋರಂಜನೆ

ನಟಿ ತ್ರಿಶಾ -ವರುಣ್ ಮಣಿಯನ್ ಮದುವೆ ನಡೆಯುತ್ತಾ ?

Pinterest LinkedIn Tumblr

tris

ಚೆನ್ನೈ: ಇತ್ತೀಚೆಗಷ್ಟೇ ಬಹುಭಾಷ ನಟಿ ತ್ರಿಶಾ ಹಾಗೂ ಉದ್ಯಮಿ/ನಿರ್ಮಾಪಕ ವರುಣ್ ಮಣಿಯನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಈಗ ಇವರಿಬ್ಬರ ಮಧ್ಯೆ ಯಾವುದೂ ಸರಿಯಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ಇದೇ ವರ್ಷ ಜನವರಿ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ತ್ರಿಶಾ ಹಾಗೂ ವರುಣ್ ಈ ವರ್ಷದ ಕೊನೆಯಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ನಿಶ್ಚಿತಾರ್ಥದ ನಂತರ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಟ್ವಿಟ್ಟರ್‍ನಲ್ಲಿ ಹೇಳಿಕೊಳ್ಳುತ್ತಿದ್ದರು.

ಕಳೆದ ಒಂದು ತಿಂಗಳಿನಿಂದ ಇವರ ಮದುವೆ ಬಗ್ಗೆಯಾಗಲಿ ಯಾವುದೇ ಟ್ವೀಟ್ ಬಾರದಿರುವುದು ಅನುಮಾನಗಳು ಮೂಡುವಂತೆ ಮಾಡಿದೆ. ಅಲ್ಲದೇ ವರುಣ್ ಬಾಳ ಸಂಗಾತಿಯಾಗಬೇಕಿರುವ ತ್ರಿಶಾ ವರುಣ್ ಕುಟುಂಬದ ಮುಖ್ಯ ಕಾರ್ಯಕ್ರಮಕ್ಕೆ ಗೈರಾಗಿರುವುದು ಇವರ ಸಂಬಂಧಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ತ್ರಿಶಾ ವರುಣ್ ನಿರ್ಮಾಣದಲ್ಲಿ ಮೂಡಿಬರಲಿದ್ದ ಸಿನಿಮಾದಿಂದ ಹೊರಬಂದಿದ್ದಾಳೆ. ಆದರೆ ಈ ಬಗ್ಗೆ ತ್ರಿಶಾ ಮಾತ್ರ ಡೇಟ್ಸ್ ಸಿಗಲಿಲ್ಲವೆಂದು ಉತ್ತರಿಸಿದ್ದಾಳೆ. ತ್ರಿಶಾಳ ಗೆಳೆಯರು ಕೂಡ ತ್ರಿಶಾ ವರುಣ್ ಮಧ್ಯೆ ಯಾವುದೂ ಸರಿಯಿಲ್ಲವೆಂದು ತಿಳಿಸಿದ್ದಾರೆ.

ವೃತ್ತಿ ಜೀವನದಲ್ಲಿ ಹೆಚ್ಚು ಬ್ಯುಸಿಯಾಗಿರುವ ತ್ರಿಶಾ, ತಮ್ಮ ಮ್ಯಾನೇಜರ್ ನಿರ್ದೇಶಿಸುತ್ತಿರುವ ಹಾರರ್ ಸಿನಿಮಾ ಭೋಗಿಯಲ್ಲಿ ನಟಿಸುತ್ತಿದ್ದಾಳೆ. ಇದರ ಜೊತೆಗೆ ಕಮಲ್ ಹಾಸನ್ ಜೊತೆಗೆ ಒರೆ ಇರವು, ಹಾಲಿವುಡ್ ಸಿನಿಮಾದಲ್ಲೂ ನಟಿಸುವ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ತ್ರಿಶಾ ಹಾಗೂ ತಮ್ಮ ಸಂಬಂಧ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದ್ದ ವರುಣ್ ವಿದೇಶಕ್ಕೆ ಹಾರಿದ್ದಾರೆ.

Write A Comment