ಮನೋರಂಜನೆ

ಲಂಡನ್‌ನಲ್ಲಿ ಅಭಿಷೇಕ್ ಬಚ್ಚನ್ ಚುನಾವಣಾ ಪ್ರಚಾರ.. !

Pinterest LinkedIn Tumblr

Abhishek-bachchann

ಭಾರತೀಯ ಚಿತ್ರರಂಗ ಕಂಡ ಮೇರುನಟ, ಬಾಲಿವುಡ್‌ನ ಅನಭಿಷಕ್ತ ದೊರೆ ಅಮಿತಾಬ್ ಬಚ್ಚನ್ ಪುತ್ರ, ಮಾಜಿ ವಿಶ್ವಸುಂದರಿ ಐಶ್ವರ್ಯಾರೈ ಪತಿ, ಬಾಲಿವುಡ್ ನಟ  ಅಭಿಷೇಕ್ ಬಚ್ಚನ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ… ಲಂಡನ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಗೆಳೆಯ, ಭಾರತ ಮೂಲದ ಸಂಸದ ಕೇತ್‌ವಾಜ್ ಅವರ ಪರ ಪ್ರಚಾರ ಮಾಡಲು ತೆರಳಿದ್ದಾರಂತೆ. ಕೇತ್ ಜೊತೆ ಅವರ ಕ್ಷೇತ್ರವಾದ ಲೀ ಸೆಸ್ಟರ್‌ನಲ್ಲಿ ಎಲ್ಲಿ ಹೋದರೂ ಅಭಿಷೇಕ್ ಬಚ್ಚನ್‌ಗೆ ಜನ ಮುಗಿಬೀಳ್ತಾರಂತಲ್ಲ… ತಮ್ಮ ನೆಚ್ಚಿನ ಬಾಲಿವುಡ್ ನಟನನ್ನು ಹತ್ತಿರದಿಂದ ನೋಡಲು ಜನ ನಾ ಮುಂದು,

ತಾ ಮುಂದು ಎಂದು ಮುತ್ತಿಕೊಳ್ತಾರಂತೆ. ಅನೇಕರು ಅಭಿಷೇಕ್ ಬಚ್ಚನ್ ನಟನೆ, ಸಿನಿಮಾ ಜೀವನ, ಬದುಕು ಕುರಿತಂತೆ ಅತ್ಯಂತ ಕುತೂಹಲದಿಂದ ಕೇಳ್ತಾರಂತೆ.  ಅಭಿಷೇಕ್ ಬಚ್ಚನ್ ಅವರ ಇನ್ನೂ ಒಂದು ಹೆಗ್ಗಳಿಕೆ ಅಂದ್ರೆ ಅವರ ಫುಟ್‌ಬಾಲ್ ಟೀಮ್‌ನ ಒಡೆತನ. ಇದರೊಂದಿಗೆ  ಅಭಿಷೇಕ್ ಲೀ ಸೆಸ್ಟರ್‌ನ ಫುಟ್‌ಬಾಲ್ ತಂಡದ ಟಿ ಶಟ್ ಗಳನ್ನು  ಅಭಿಮಾನಿಗಳು ಅಭಿಷೇಕ್ ಬಚ್ಚನ್‌ಗೆ ಕಾಣಿಕೆಯಾಗಿ ನೀಡಿ ಸಂತೋಷಪಟ್ಟರಂತೆ. ಬೆಲ್‌ಗ್ರೇವ್ ರೋಡ್, ಉಪ್ಪಿಂಗ್‌ಹಾಮ್ ರೋಡ್‌ಗಳಲ್ಲಿ ಬಚ್ಚನ್ ಕೇತ್ ರೋಡ್ ಶೋ ನಡೆಸಿದರಂತೆ.

Write A Comment