ಮನೋರಂಜನೆ

ಜಿಮ್‌ ಉದ್ಯಮದಲ್ಲಿ ವಿರಾಟ್ ಕೊಹ್ಲಿ 190ಕೋಟಿ ಬಂಡವಾಳ

Pinterest LinkedIn Tumblr

Virat-Ivenstment

ನವದೆಹಲಿ: ನಾಯಕ ಮಹೇಂದ್ರಸಿಂಗ್ ಧೋನಿ ಹಾದಿಯಲ್ಲೇ ಸಾಗುತ್ತಿರುವ ಭಾರತ ಕ್ರಿಕೆಟ್ ತಂಡದ ಉಪನಾಯಕ ವಿರಾಟ್‌ಕೊಹ್ಲಿ ಕೂಡ ಧೋನಿ ಮಾದರಿಯಲ್ಲೇ ಅಂತಾರಾಷ್ಟ್ರೀಯ ಮಟ್ಟದ ಜಿಮ್  ಉದ್ಯಮದಲ್ಲಿ  90 ಕೋಟಿ ರೂ. ಹಣ ಹೂಡಲು ಮುಂದಾಗಿದ್ದಾರೆ. ಮೂರು ವರ್ಷಗಳಲ್ಲಿ 190 ಕೋಟಿ ರೂ. ಹಣ ಹೂಡಿಕೆ ಮಾಡಿ ದೇಶದ 75 ಕೇಂದ್ರಗಳಲ್ಲಿ ಸ್ಥಾಪನೆಯಾಗಲಿರುವ ಚಿಸಲ್ ಫಿಟ್‌ನೆಸ್ ಮತ್ತು ಸಿಎಸ್‌ಇ ಕೇಂದ್ರಗಳ ಮೇಲೆ ಕೊಹ್ಲಿ ಕೋಟ್ಯಾಂತರ ರೂ. ಹಣ ಹೂಡಲು ಮುಂದಾಗಿರುವುದನ್ನು ಅವರ ಪಾಲುದಾರ ಸತ್ಯಸಿನ್ಹಾ ಬಹಿರಂಗಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಆಂಡ್ ಎಂಟರ್‌ಟೈನ್‌ಮೆಂಟ್‌ನ ಸಹೋದರ ಸಂಸ್ಥೆಯಾಗಿರುವ ಚಿಸಲ್ ಫಿಟ್‌ನೆಸ್ ಕೇಂದ್ರಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಆಧಾರಿತ ಫಿಟ್‌ನೆಸ್ ಪರಿಣಿತರಿಂದ ತರಬೇತಿ ಕೊಡಿಸಲು ತೀರ್ಮಾನಿಸಲಾಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಚಿಸಲ್ ಫಿಟ್‌ನೆಸ್ ಕೇಂದ್ರ ಮೊದಲು ಆರಂಭಗೊಳ್ಳುವುದು ಬೆಂಗಳೂರಿನಲ್ಲೇ ಎಂಬುದು ಇಲ್ಲಿ ಉಲ್ಲೇಖಾರ್ಹ. ನಂತರ ದೇಶದ ಇತರ ಹಲವಾರು ಭಾಗಗಳಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು ಹಾಗೂ ರಾಷ್ಟ್ರಕ್ಕೆ ಅಗತ್ಯವಾದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವುದೇ ಈ ಸಂಸ್ಥೆಯ ಉದ್ದೇಶ  ಎನ್ನುತ್ತಾರೆ ಮಾರ್ಕೆಟಿಂಗ್ ಪಾಲುದಾರ ಗೌರವ್ ಮಾರಿಯಾ. ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸ್ಪೋರ್ಟ್ಸ್ ಫಿಟ್ ಸಂಸ್ಥೆಯಲ್ಲಿ ಕೋಟ್ಯಾಂತರ ಹಣ ಹೂಡಿದ್ದಾರೆ. ಇದೇ ರೀತಿ ಐಪಿಎಲ್ ಮಹಾರಾಜನೆಂದೇ ಖ್ಯಾತಿಯಾಗಿರುವ  ಯುವರಾಜ್‌ಸಿಂಗ್ ವ್ಯೋಮೋ ಸಂಸ್ಥೆಯ ಮೇಲೆ ಭಾರೀ ಬಂಡವಾಳ ಹೂಡಿದ್ದಾರೆ. ಇನ್ನು ಕನ್ನಡಿಗ ರಾಬಿನ್ ಉತ್ತಪ್ಪ ಐ ಟಿಫಿನ್ ಸಂಸ್ಥೆ ಮೇಲೆ ಬಂಡವಾಳ ಹೂಡಿದ್ದಾರೆ. ಇದೀಗ ಕ್ರೀಡೆಯಿಂದ ವ್ಯವಹಾರದತ್ತ ಗಮನ ಹರಿಸಿರುವ ಆಟಗಾರರ ಪಟ್ಟಿಗೆ ಕೊಹ್ಲಿ ಕೂಡ ಸೇರ್ಪಡೆಯಾಗಿದ್ದಾರೆ.

Write A Comment