ಮನೋರಂಜನೆ

‘ಶಿವಂ’ ತಪ್ಪುಗಳಿಂದ ಕಲಿತ ರಾಜು

Pinterest LinkedIn Tumblr

Priyamani

ಬೆಂಗಳೂರು: ತಮ್ಮ ಕಳೆದ ಸಿನೆಮ ‘ಶಿವಂ’ ಅತಿ ಪ್ರಚಾರದ ಹೊರತಾಗಿಯೂ ನೆಲ ಕಚ್ಚಿದ ನಂತರ ತಮ್ಮ ತಪ್ಪುಗಳಿಂದ ಪಾಠ ಕಲಿತಿರುವ ನಿರ್ದೇಶಕ ಶ್ರೀನಿವಾಸ ರಾಜು, ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಪ್ಪು ಮಾಡುವದು ಮನುಷ್ಯನ ಸಹಜ ಗುಣ, ಅದರಿಂದ ಕಲಿಯುವುದ ದೈವತ್ವ ಗುಣ ಎನ್ನುವ ನಿರ್ದೇಶಕ ಇನ್ನೂ ಹೆಸರಿಡದ ಹಾರರ್-ಹಾಸ್ಯಚಿತ್ರಕ್ಕೆ ತಾವು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದಾರೆ.

ಮೊದಲನೆಯೆ ಪಾಠದ ಪ್ರಕಾರ ವರ್ಷಾನುಗಟ್ಟಲೆ ಯಾವುದೇ ಯೋಜನೆಗೆ ಅಂಟಿ ಕೂರಬಾರದೆಂಬುದು. ಈ ತಪ್ಪು ತಿದ್ದುಕೊಂಡಿರುವ ರಾಜು, ಪ್ರಿಯಾಮಣಿ ಮತ್ತು ಕೋಮಲ್ ನಟನೆಯ ಈ ಚಿತ್ರದ ಹಾಡುಗಳನ್ನೂ ಒಳಗೊಂಡಂತೆ ಚಿತ್ರೀಕರಣವನ್ನು ೨೭ ದಿನಗಳಲ್ಲಿ ಮುಗಿಸಿದ್ದಾರೆ. “ಇನ್ನು ಸ್ವಲ್ಪ ಕೆಲಸವಷ್ಟೇ ಉಳಿದಿದೆ. ನಂತರ ರೀ ರೆಕಾರ್ಡಿಂಗ್, ಸೆನ್ಸಾರ್ ಮತ್ತು ಮೇನಲ್ಲಿ ಬಿಡುಗಡೆಗೆ ಸಿದ್ಧವಾಗಲಿದೆ” ಎನ್ನುತ್ತಾರೆ ಶ್ರೀನಿವಾಸ್.

ಎರಡನೇ ಪಾಠ ಬಿಡುಗಡೆ ದಿನವನ್ನು ಮುಂದೂಡದೆ ಇರುವುದು. ‘ಶಿವಂ’ ಬಿಡುಗಡೆಗೆ ತಿಂಗಳುಗಟ್ಟಲೆ ಹಿಡಿದಿತ್ತು. ಈ ಬಾರಿ ಒಂದು ದಿನಕ್ಕೆ ಅಂಟಿಕೊಂಡು ಸರಿಯಾದ ದಿನ ಬಿಡುಗಡೆ ಮಾಡಲಿದ್ದಾರಂತೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾದಲ್ಲಿ ಪೂಜಾ ಗಾಂಧಿ ಅತಿಥಿ ನಟಿಯಾಗಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ಜೊತೆ ‘ನಾಟಿ ಕೋಳಿ’ ಮತ್ತು ಪೂಜಾ ಗಾಂಧಿಯವರ ಜೊತೆ ‘ದಂಡುಪಾಳ್ಯ-೨’ ರಾಜು ಅವರ ಮುಂದಿನ ಯೋಜನೆಗಳು.

Write A Comment