ಮನೋರಂಜನೆ

ಆಟದ ಮೈದಾನದಲ್ಲಿಯೇ ಪುಟ್ಬಾಲ್ ಆಟಗಾರನ ರಾಸಲೀಲೆ !!

Pinterest LinkedIn Tumblr

5063Jay-Hart

ಪುಟ್ಬಾಲ್ ಆಟಗಾರನೊಬ್ಬ ಆಟ ಮುಗಿದ ಬಳಿಕ ಮೈದಾನದಲ್ಲಿಯೇ ಪ್ರೇಕ್ಷಕಿಯೊಬ್ಬಳ ಜೊತೆ ರಾಸಲೀಲೆ ನಡೆಸಿ ಕ್ಲಬ್ ನಿಂದ ಹೊರಹಾಕಿಸಿಕೊಂಡ ಘಟನೆ ನಡೆದಿದೆ.

ಹೌದು. ಇಂಗ್ಲೆಂಡ್ ನ ಕ್ಲಿತೇರೋ ಫುಟ್ಬಾಲ್ ಕ್ಲಬ್ ನ ಆಟಗಾರ ಜೇ ಹಾರ್ಟ್ ಎಂಬಾತ ಪಂದ್ಯದ ಮುಗಿದ ಬಳಿಕ ಕ್ಲಬ್ ನ ಬಟ್ಟೆ ಧರಿಸಿಯೇ ಪ್ರೇಕ್ಷಕಿಯೊಂದಿಗೆ ಡಗ್’ಔಟ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದನ್ನು ನೋಡಿದ ಪ್ರೇಕ್ಷಕ ಮಹಾಶಯನೊಬ್ಬ ವಿಡಿಯೋ ಚಿತ್ರೀಕರಣ ಮಾಡಿ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಆತನನ್ನು ಇಟ್ಟುಕೊಂಡಿದ್ದ ಕ್ಲಬ್ ನ ಗಮನಕ್ಕೆ ಬಂದಿದ್ದು ಕ್ಲೆತೇರೋ ಕ್ಲಬ್ ಕೂಡಲೇ ಜೇ ಹಾರ್ಟ್ ನನ್ನು ಕ್ಲಬ್’ನಿಂದ ಹೊರಹಾಕಿದೆ.

ಈ ನಡುವೆ  ಜೇ ಹಾರ್ಟ್ ನ ಗರ್ಲ್ ಫ್ರೆಂಡ್  ಆದ ಬ್ರಿಯೋನಿ ಹಿಬ್ಬರ್ಟ್ ತನ್ನ ಬಾಯ್ ಫ್ರೆಂಡ್ ಮೈದಾನದಲ್ಲಿ ಲಜ್ಜೆ ಇಲ್ಲದೇ ಅಪರಿಚಿತ ಹುಡುಗಿಯನ್ನು ಕಾಮಿಸಿದ್ದಕ್ಕೆ ಕೋಪಿಸಿಕೊಳ್ಳುವುದನ್ನು ಬಿಟ್ಟು ಈ  ದೃಶ್ಯವನ್ನು ಚಿತ್ರೀಕರಿಸಿ ಇಂಟರ್ನೆಟ್’ನಲ್ಲಿ ಹಾಕಿದ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದಾಳೆ. ಇಂಥ ಅಶ್ಲೀಲ ದೃಶ್ಯಗಳನ್ನು ಹಾಕಲು ಆ ವಿಕೃತ ಮನಸ್ಸಿನವನಿಗೆ ಹೇಗಾದರೂ ಮನಸು ಬಂತು ಎಂದು ತನ್ನ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.

Write A Comment