ಮನೋರಂಜನೆ

ಸಿಂಕ್ ಸೌಂಡ್ ತಂತ್ರಜ್ಞಾನದಲ್ಲಿ ಹೆಚ್ಚಿನ ಸಿನೆಮಾಗಳನ್ನು ಮಾಡುತ್ತೇನೆ: ಮಣಿರತ್ನಂ

Pinterest LinkedIn Tumblr

OK-Kanmani

ಚೆನ್ನೈ: ತಮ್ಮ ಇತ್ತೀಚಿನ ತಮಿಳು ಚಿತ್ರ ‘ಓ ಕಾದಲ್ ಕಣ್ಮಣಿ’ ಯನ್ನು ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿ ನಿರ್ದೇಶಿರುವುದು ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಸಂತಸ ತಂದಿದೆ. ಇದೇ ತಂತ್ರಜ್ಞಾನದಲ್ಲಿ ಇನ್ನೂ ಹೆಚ್ಚಿನ ಸಿನೆಮಾಗಳನ್ನು ಮಾಡುವ ಇರಾದೆ ತೋರಿದ್ದಾರೆ ಮಣಿರತ್ನಂ.

ಸಿನೆಮಾ ಚಿತ್ರೀಕರಣದ ವೇಳೆಯಲ್ಲೇ ಶಬ್ದ ಮತ್ತು ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದೇ ಸಿಂಕ್ ಸೌಂಡ್. ಡಬ್ಬಿಂಗ್ ಬಹಳ ನಿಯಮಿತವಾಗಿರುತ್ತದೆ.

“ಸಿಂಕ್ ಸೌಂಡ್ ನಲ್ಲಿ ಸಿನೆಮಾ ಚಿತ್ರೀಕರಿಸಲು ನನಗೆ ಬಹಳ ಸಂತಸವಾಯಿತು. ಅದು ಸಿನೆಮಾಗೆ ಜೀವ ತುಂಬುತ್ತದೆ ಅದರಲ್ಲೂ ನಟರು ನೀವು ಸಿನೆಮಾ ಮಾಡೂತ್ತಿರುವ ಭಾಷೆಯಲ್ಲೇ ನಟರು ಮಾತನಾಡುವಾಗಂತಲೂ ಅದಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ಬರುತ್ತದೆ. ಇದು ನನಗೆ ಒಳ್ಳೆಯ ಅನುಭವವಾಗಿತ್ತು. ಸಿಂಕ್ ಸೌಂಡ್ ತಂತ್ರಜ್ಞಾನದಲ್ಲಿ ಇನ್ನು ಹೆಚ್ಚಿನ ಸಿನೆಮಾಗಳನ್ನು ಮಾಡುತ್ತೇನೆ” ಎಂದಿದ್ದಾರೆ ಮಣಿರತ್ನಂ.

ದಲ್ಕ್ವೆರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಮುಖ್ಯ ಪಾತ್ರದಲ್ಲಿರುವ ಓ ಕಾದಲ್ ಕಣ್ಮಣಿ ಸಂಪೂರ್ಣವಾಗಿ ಸಿಂಕ್ ಸೌಂಡ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೀಗೆ ಚಿತ್ರೀಕರಣ ಮಾಡುವಾಗ ಹೆಚ್ಚಿನ ಶ್ರಮ ಅವಶ್ಯಕ ಎಂದು ಮಣಿರತ್ನಂ ಹೇಳುತ್ತಾರೆ.

ಈ ಹಿಂದೆ ‘ಲಗಾನ್’, ‘ದಿಲ್ ಚಾಹ್ತಾ ಹೈ ಮತ್ತು ‘ರಾಕ್ ಆನ್!’ ಸಿನೆಮಾಗಳನ್ನು ಹಾಗು ಬಹಳಷ್ಟು ಪ್ರಯೋಗಾತ್ಮಕ ಪ್ಯಾರಲಲ್ ಸಿನೆಮಾಗಳನ್ನು ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದೆ.

Write A Comment