ಮನೋರಂಜನೆ

ನಾನು ಇನ್ನೂ ಹೀರೋಯಿನ್ ಆಗಿಯೇ ಮುಂದುವರಿಯುವೆ: ಮಧುಬಾಲ

Pinterest LinkedIn Tumblr

madu

ಕಾದಲ್ ರೋಜಾ ಪೂ ಎಂದು ಹಾಡಿಸಿಕೊಂಡ ಮುದ್ದಾದ ನಟಿ ರೋಜ ಅಲಿಯಾಸ್ ಮಧುಬಾಲ . ಆಕೆ ನಟನೆಯ ರೋಜ ಚಿತ್ರ 1992 ರಲ್ಲಿ ಬಿಡುಗಡೆ ಆಗಿತ್ತು. ಆದರೆ ಈಗ ರೋಜಾ ಚಿತ್ರ ಬಂದು ಸಾಕಷ್ಟು ವರ್ಷಗಳು ಪೂರ್ಣವಾಗಿದೆ. ಆದರೂ ಸಹಿತ ತಾನಿನ್ನು ಹೀರೋಯಿನ್ ಆಗಿದ್ದೇನೆ. ನಾಯಕಿ ನಟಿ ಅಂದ್ರೆ 18 ರಿಂದ 20ರ ಒಳಗೆ ಇರಬೇಕು ಎಂದೇನೂ ಇಲ್ಲ. ಯಾರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೋ ಅವರೇ ಹೀರೋಯಿನ್ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.

ಸಾಮಾನ್ಯವಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ ಬಳಿಕ ಎಷ್ಟು ಬೇಗ ಮನೆಗೆ ಹೋಗೋದು ಎನ್ನುವ ಮನಸ್ಥಿತಿ ಇತ್ತು. ಆದರೆ ಈಗ ಕನ್ನಡದಲ್ಲಿ ನಟಿಸಿರುವ ರನ್ನ ಚಿತ್ರ ತನ್ನ ಈ ಮನೋಭಾವವನ್ನು ಬದಲಾಯಿಸಿದೆ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.ಎರಡನೇ ಇನ್ನಿಂಗ್ಸ್ ಆರಂಭ ಮಾಡಿರುವ ಮಧುಬಾಲ ಈಗಾಗಲೇ ಮೂರು ದಕ್ಷಿಣ ಭಾರತದ ಸಿನಿಮಾಗಳಲ್ಲಿ  ನಟಿಸಿದ್ದಾಳೆ.

ಎರಡು ವರ್ಷಗಳ ಬಳಿಕ ಈಗ ಚಿತ್ರಗಳಲ್ಲಿ ನಟಿಸುತ್ತಿರುವ ಮಧುಬಾಲ ಮಣಿರತ್ನಂ ಅವರ ಚಿತ್ರದಲ್ಲಿ ಎಂತಹ ಪಾತ್ರವಾದರೂ ಪರವಾಗಿಲ್ಲ ನಟಿಸುವುದಾಗಿ ಹೇಳಿದ್ದಾಳೆ. ಮಣಿರತ್ನಂ ತನಗೆ ಉತ್ತಮವಾದ ಪಾತ್ರವನ್ನೇ ನೀಡೋದು, ಅವಕಾಶ ಸಿಕ್ಕರೆ ತಾನು ನೆಗೆಟಿವ್ ರೋಲ್ ಮಾಡುವುದಾಗಿ ಈ ಸಮಯದಲ್ಲಿ ಹೇಳಿದ್ದಾಳೆ.

Write A Comment