ಮನೋರಂಜನೆ

ಬಿಸಿಲ ಧಗೆಯಲ್ಲೂ ಬಿಂದಾಸ್ ಹುಡುಗ ಮಾಡೆಲ್ ದರ್ಶ್ ಚಂದ್ರಪ್ಪ

Pinterest LinkedIn Tumblr

darsh

ಎಲ್ಲೆಡೆ ಬಿಸಿಲ ಧಗೆ! ಸುಡು ಬಿಸಿಲಿನಲ್ಲಿ ಹೊರಗೆ ಬಂದರಂತೂ ಸನ್ ಟ್ಯಾನ್ ಆಗುವುದು ಗ್ಯಾರಂಟಿ. ಹಾಗೆಂದು ಹುಡುಗರು ಸದಾ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ ಎನ್ನುತ್ತಾರೆ ಮಾಡೆಲ್ ದರ್ಶ್ ಚಂದ್ರಪ್ಪ. ಅವರ ಪ್ರಕಾರ, ಹುಡುಗರು ಇಂದು ಸಖತ್ ಕಾನ್ಶಿಯಸ್ ಆಗಿದ್ದಾರೆ. ಮೊದಲಿಗಿಂತ ಹೆಚ್ಚಾಗಿ ತಮ್ಮ ಬಗ್ಗೆ ಕೇರ್ ತೆಗೆದುಕೊಳ್ಳಲಾರಂಭಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನೋಡಲು ರಫ್ ಅಂಡ್ ಟಫ್ ಎಂದನಿಸಿದರೂ ಕೂಡ ಸೀಸನ್‌ಗೆ ತಕ್ಕಂತೆ ಬದಲಾಗತೊಡಗಿದ್ದಾರೆ.

ಈ ಬಾರಿಯ ಸಮ್ಮರ್ ಸೆಲೆಬ್ರಿಟಿ ಕಾಲಂಗಾಗಿ ಮಾತನಾಡಿರುವ ದರ್ಶ್, ಹುಡುಗರಿಗೆ ಒಂದಿಷ್ಟು ಸ್ಟೈಲ್ ಸ್ಟೇಟ್‌ಮೆಂಟ್ ನೀಡಿದ್ದಾರೆ.

ಜಾಕೆಟ್‌ಗೆ ನೋ ಹೇಳಿ
ಬಿಸಿಲಲ್ಲಿ ಜಾಕೆಟ್ ಧರಿಸಿದರೋ ನೀವು ನಗೆಪಾಟಲಿಗೀಡಾಗುವಿರಿ. ಹುಡುಗರು ಯಾವುದೇ ಕಾರಣಕ್ಕೂ ಶೀರ್ ಮೆಟಿರೀಯಲ್‌ನ ಜಾಕೆಟ್‌ಗೆ ಮೊರೆ ಹೋಗಕೂಡದು. ತೀರಾ ದೂರ ಓಡಾಡುವುದಿದ್ದಲ್ಲಿ ಮಾತ್ರ ಧರಿಸಬಹುದು. ಹಾಗೆಂದು 24 ಗಂಟೆ ಹಾಕಿಕೊಂಡು ಓಡಾಡುವುದಲ್ಲ.

ಹೇರ್‌ಸ್ಟೈಲ್
ಹುಡುಗರು ಹೆಚ್ಚು ಬೆವರುತ್ತಾರೆ. ಹಾಗಾಗಿ, ಹೇರ್‌ಸ್ಟೈಲ್ ಬಗ್ಗೆ ಗಮನವಹಿಸುವುದು ಅಗತ್ಯ. ಅದರಲ್ಲೂ ಇದೀಗ ಟ್ರೆಂಡಿಯಾಗಿರುವ ಹೇರ್‌ಸ್ಟೈಲ್‌ಗಳತ್ತ ಗಮನಹರಿಸುವುದು ಉತ್ತಮ. ಲಾಂಗ್ ಹೇರ್‌ಸ್ಟೈಲ್‌ಗೆ ಬೈ ಬೈ ಹೇಳಿ. ಶಾಂಪೂ ಹೇರ್ ಸ್ಪಾ ಮಾಡಿದ ನಂತರ ನ್ಯಾಚುರಲ್ಲಾಗಿ ಒಣಗಿಸಿ. ಆದಷ್ಟೂ ಕೆಮಿಕಲ್ ರಹಿತ ಜೆಲ್ ಆವಾಯ್ಡ್ ಮಾಡಿ. ವೀಕೆಂಡ್‌ನಲ್ಲಿ ಸಾಧ್ಯವಾದಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಿ.

ಪಾದಗಳ ಕಾಳಜಿ
ಬಿಸಿಲಲ್ಲಿ ಸದಾ ಶೂ ಧರಿಸಿ ಓಡಾಡುವುದರಿಂದ ಕಾಲು ಬೆವರಬಹುದು. ಹತ್ತಿರದ ಸ್ಥಳಗಳಿಗೆ ಆದಷ್ಟೂ ಚಪ್ಪಲಿಗಳನ್ನೇ ಬಳಸಿ. ಈ ಸೀಸನ್‌ಗೆ ತಕ್ಕಂತೆ ಹುಡುಗರಿಗೆ ಸಾಕಷ್ಟು ವೈವಿಧ್ಯಮಯ ಸ್ಲಿಪರ್ಸ್‌ ಬಂದಿವೆ. ಟ್ರೈ ಮಾಡಿ ನೋಡಿ ಎನ್ನುತ್ತಾರೆ ಅವರು.

ತ್ವಚೆಯ ಆರೈಕೆ
ಹುಡುಗರೆಂದಾಕ್ಷಣ ತ್ವಚೆಯ ಆರೈಕೆ ಮಾಡಬಾರದು ಎಂಬ ರೂಲ್ಸ್ ಎಲ್ಲೂ ಇಲ್ಲ. ಹೊರಗೆ ಹೋಗಿ ಬಂದಾಕ್ಷಣ ಮುಖ ವಾಶ್ ಮಾಡಿ. ಹೊರಗೆ ಹೋಗುವಾಗ ಸನ್‌ಸ್ಕ್ರಿನ್ ಬಳಸಿ. ತೀರಾ ಬೆವರುವಿರಾದರೇ ಡಿಯೋಡ್ರೆಂಟ್ ಬಳಕೆ ಮಾಡಿ. ಕ್ಯಾಪ್ ಧರಿಸಿ ಎಂಬುದು ಅವರ ಸಲಹೆ.

ಸನ್ ಗ್ಲಾಸ್ ಬಳಕೆ
ನಿಮ್ಮ ಮುಖಕ್ಕೆ ಸೂಟ್ ಆಗುವಂತಹ ಸನ್‌ಗ್ಲಾಸ್ ಧರಿಸಿ. ಇದು ಕಣ್ಣುಗಳನ್ನು ಕಾಪಾಡುವುದರೊಂದಿಗೆ ನಿಮಗೆ ಗ್ಲಾಮರ್ ಲುಕ್ ನೀಡುತ್ತದೆ ಎನ್ನುತ್ತಾರೆ.

Write A Comment