ಮನೋರಂಜನೆ

ಪರೂಲ್ ಪಾರಾಯಣ ‘ಅಪ್ಲಿಕೇಷನ್’

Pinterest LinkedIn Tumblr

Parul

* ಪದ್ಮಾ ಶಿವಮೊಗ್ಗ

ಕನ್ನಡ ಚಿತ್ರೋದ್ಯಮದಲ್ಲಿ ಮಿಂಚುತ್ತಿರುವ ಬಾಲಿವುಡ್ ನಟಿ ಪರೂಲ್ ಯಾದವ್ ತಮ್ಮ ಹೆಸರಿನಲ್ಲಿ ಅಪ್ಲಿಕೇಷನ್ ಹೊರತರಲಿದ್ದಾರೆ. ಫೇಸ್ ಬುಕ್ ಮತ್ತು ಟ್ವಿಟರ್‌ಗಳಲ್ಲಿ ಮಾತ್ರ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದ ಇವರು, ಈಗ ಮೊಬೈಲ್ ಅಪ್ಲಿಕೇಷನ್ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ.

ಪರೂಲ್ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಈ ಅಪ್ಲಿಕೇಷನ್‌ನಲ್ಲಿ ಅವರ ಸಂಪೂರ್ಣ ವಿವರಗಳು ಇರುತ್ತವೆ. ಇದೆಲ್ಲದಕ್ಕಿಂತ ಪರೂಲ್ ಜತೆ ಅಭಿಮಾನಿಗಳು ನೇರವಾಗಿ ಮಾತಬಹುದು. ಮೆಸೇಜ್ ಮೂಲಕ ಅಲ್ಲದೆ, ವೀಡಿಯೋ ಚಾಟಿಂಗ್ ಕೂಡ ಮಾಡಬಹುದು. ‘ಮೈ ನೇಮ್ ಈಸ್ ಪರೂಲ್’ ಎಂದು ಟೈಪ್ ಮಾಡಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿರುವ ಪ್ಲೇ ಸ್ಟೋರ್ ಮೂಲಕ ಇದು ಸಾಧ್ಯ. ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು ಈ ಅಪ್ಲಿಕೇಷನ್‌ನ ವಿಶೇಷ.

‘ಅಪ್ಲಿಕೇಷನ್ ಡೌನ್ ಲೋಡ್ ಮಾಡಿದರೆ, ನನ್ನ ಫೋಟೊ, ನಟಿಸುತ್ತಿರುವ ಸಿನಿಮಾ ಹೀಗೆ ಎಲ್ಲ ವಿವರ ಸಿಗುತ್ತದೆ. ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ ಎಲ್ಲರೂ ಅಪ್ಲಿಕೇಷನ್ ಡಿಮ್ಯಾಂಡ್ ಮಾಡಿದರು. ಒಂದೇ ಸೂರಿನಡಿ ಎಲ್ಲ ವಿವರ ಸಿಕ್ಕರೆ ಒಳ್ಳೆಯದು ಅಂತ ನನಗೂ ಅನ್ನಿಸಿತು. ಏ.10ರಂದು ಅಪ್ಲಿಕೇಷನ್ ಸಾರ್ವಜನಿಕರಿಗೆ ಲಭ್ಯವಾಗಲಿದೆ’ ಅಂದಿದ್ದಾರೆ ಪರೂಲ್.

ಸದ್ಯ ಇವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿ. ಈಗಾಗಲೇ ಮೂರು ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಉಪೇಂದ್ರ ಅಭಿನಯದ ಚಿತ್ರದಲ್ಲಿ ಮೃದು ಸ್ವಭಾವದ ನಾಯಕಿ ಆಗಿ ನಟಿಸಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದ ‘ಆಟಗಾರ’ ಚಿತ್ರದಲ್ಲೂ ನಟಿಸಿದ್ದಾರೆ.

‘ಆಟಗಾರ ಚಿತ್ರ ಕ್ರೈಮ್ ಅಂಡ್ ಥ್ರಿಲ್ಲರ್ ಆಗಿದೆ. ಹಾಲಿವುಡ್ ಸ್ಟೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅಪರೂಪದ ಚಿತ್ರಗಳು ಬಿಡುಗಡೆಯಾಗಲಿವೆ’ ಎನ್ನುತ್ತಾರೆ ಪರೂಲ್.

ಇವಲ್ಲದೆ, ವಿಜಯ ಆದಿತ್ಯದಲ್ಲಿ ಧನಂಜಯ ಜತೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಸೂಪರ್ ಮಾಡೆಲ್ ಪಾತ್ರ. ತಿಂಗಳಲ್ಲಿ 25 ದಿನ ಬೆಂಗಳೂರಲ್ಲೇ ಕೆಲಸ ಇರುತ್ತದೆ. ಹಾಗಾಗಿ ಇವರು ಸದ್ಯಕ್ಕೆ ಬೆಂಗಳೂರಿನಲ್ಲೇ ನೆಲಸುವ ಬಗ್ಗೆ ಯೋಚಿಸುತ್ತಿದ್ದಾರಂತೆ.
—–

ಎಲ್ಲರಿಗೂ ತಕ್ಷಣ ಫೇಸ್ ಬುಕ್ ಅಥವಾ ಯೂ ಟ್ಯೂಬ್‌ಗೆ ಹೋಗಲು ಆಗುವುದಿಲ್ಲ. ನನ್ನ ಫ್ಯಾನ್ಸ್‌ಗೆ ದಿನವೂ ನಾನೇನು ಮಾಡುತ್ತಿದ್ದೇನೆ ಅನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅವರೆಲ್ಲರ ಒತ್ತಾಸೆಯಂತೆ ಈ ನಿರ್ಧಾರಕ್ಕೆ ಬಂದೆ.
* ಪರೂಲ್ ಯಾದವ್, ನಟಿ

Write A Comment