ಮನೋರಂಜನೆ

ಕಿರಿಕ್ ಮೂಲಕ ಸುದ್ದಿಯಾಗುವ ತಮಿಳು ನಟ ಸಿಂಬು: ನಯನತಾರ, ಹಂಸಿಕಾ ಮೋಟ್ವಾನಿ ಜೊತೆ ಪ್ರೇಮಲೋಕ ಸುತ್ತಿದ್ದ ರಸಿಕ

Pinterest LinkedIn Tumblr

simbu-್ಇನ಻ಲ

ಸದಾ ಒಂದಿಲ್ಲೊಂದು ಕಿರಿಕ್ ಮೂಲಕವೇ ಸುದ್ದಿಯಾಗುವುದು ನಟ ಸಿಂಬು ಗುಣವಿಶೇಷ. ನಯನತಾರ ಜತೆಗೆ ಪ್ರೀತಿ-ಪ್ರೇಮ ಅಂತ ಓಡಾಡಿಕೊಂಡಿದ್ದ ಈ ಬ್ಯಾಚುಲರ್ ನಟ ನಂತರ ಹಂಸಿಕಾ ಮೋಟ್ವಾನಿ ಜತೆಗೂ ಪ್ರೇಮಲೋಕ ಸುತ್ತುವ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಅಂತಿಮವಾಗಿ ಈ ಎರಡೂ ಪ್ರೇಮ ಪ್ರಕರಣಗಳಿಂದ ದೂರಾಗಿರುವ ‘ಯಂಗ್ ಸೂಪರ್ ಸ್ಟಾರ್’ ಸದ್ಯ ವೃತ್ತಿ ಜೀವನದ ಕಡೆಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಅವರ ನಟನೆಯ ‘ವಾಲು’ ಇನ್ನೇನು ಬಿಡುಗಡೆಗೆ ಕ್ಷಣಗಣನೆಯಲ್ಲಿದೆ. ಅದರೊಟ್ಟಿಗೆ ಮತ್ತೆರಡು ಸಿನಿಮಾಗಳು ಕೈಯಲ್ಲಿವೆ. ಈ ಎಲ್ಲದರ ಮಧ್ಯೆ ತಮಿಳಿನ ಸ್ಟಾರ್ ನಿರ್ದೇಶಕ ಗೌತಮ್​ವೆುನನ್ ನಿರ್ದೇಶನದ ‘ಅಚ್ಚಂ ಎಂಬಧು ಮಾಡಮೈಡಾ’ ಚಿತ್ರದಲ್ಲೂ ಸಿಂಬು ಈಗ ಹೀರೋ!

ಗೌತಮ್​ವುತ್ತು ಸಿಂಬು ಅವರದು ಯಶಸ್ವಿ ಜತೆಯಾಟ. ಈ ಹಿಂದೆ ‘ವಿನ್ನೈಥಾಂಡಿ ವರುವಾಯ’ ಮೂಲಕ ಸಕ್ಸಸ್ ಸವಿಯುಂಡ ಜೋಡಿ ಇದು. ಇದೀಗ ಮತ್ತೆ ಒಂದಾಗಿರುವ ಇವರಿಬ್ಬರು ಹೊಸ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗೌತಮ್​ಅಂತೂ ಸಿಂಬು ಮೇಲೆ ಹೊಗಳಿಕೆಯ ಮಳೆ ಸುರಿಸಿದ್ದಾರೆ. ‘ಈ ಹಿಂದೆ ನಾವಿಬ್ಬರು ಒಂದು ರೋಮ್ಯಾಂಟಿಕ್ ಪ್ರೇಮಕಥೆಯನ್ನು ಆಯ್ದುಕೊಂಡಿದ್ದೆವು. ಈ ಬಾರಿ ಆಕ್ಷನ್ ಚಿತ್ರದತ್ತ ಹೊರಳಿದ್ದೇವೆ. ಸಿಂಬು ಯಾವ ಪಾತ್ರಕ್ಕಾದರೂ ಸಲ್ಲುವ ನಟ. ಆತ ‘ದಕ್ಷಿಣ ಭಾರತದ ರಣಬೀರ್ ಕಪೂರ್’ ಅಂತ ಹೇಳಿದ್ದಾರೆ’ ಗೌತಮ್

ಗೌತಮ್​ಹೀಗೆ ಹೋಲಿಕೆ ಮಾಡಿದ್ದೇ, ಕೆಲ ಕುಹಕಿಗಳು, ‘ಪ್ರೀತಿ ಪ್ರೇಮದ ವಿಚಾರದಲ್ಲಿ ರಣಬೀರ್ ಹೆಸರು ಭಾರಿ ಸದ್ದು ಮಾಡುತ್ತಿದೆ. ಅಂತೆಯೇ ಸಿಂಬು ಅವರನ್ನು ರಣಬೀರ್​ಗೆ ಹೋಲಿಸಿದ್ದಾರೆ’ ಅಂತ ಕಾಲೆಳೆದಿದ್ದಾರೆ.

Write A Comment