ಡರ್ಟಿ ಪೊಲಿಟಿಕ್ಸ್ ಯಶಸ್ಸಿನ ನಂತರ ಮಲ್ಲಿಕಾ ಕಾಲುಗಳು ಧರ್ತಿ ಮೇಲೆ ನಿಲ್ಲುತ್ತಿಲ್ಲವಂತೆ. ಬಹುವರ್ಷಗಳ ನಂತರ ಆಕೆಗೆ ಸಿಕ್ಕ ಯಶಸ್ಸಿದು.
ಓಂಪುರಿ ಜೊತೆ ಬಿಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದ ಡರ್ಟಿ ಪೊಲಿಟಿಕ್ಸ್ ಈಗಗಲೇ 50 ಕೋಟಿಗಳಿಸಿರುವ ವರದಿಗಳಿವೆ. ಇದರ ಬೆನ್ನಲ್ಲೇ ಮಲ್ಲಿಕಾ ಇನ್ನೊಂದು ಸಿನಿಮಾಗೆ ಸಹಿ ಮಾಡದ್ದಾಳಂತೆ.
ಚಿತ್ರದ ಹೆಸರೇ ಇಷ್ಕ್ ಆನ್ ಸೆನ್ಸಾರ್ಡ್! ಮಲ್ಲಿಕಾ ಶೆರಾವತ್ ಜೊತೆ ಸೆನ್ಸಾರಿಲ್ಲದ ಪ್ರೀತಿ ನಡೆಸುವುದು ಯಾರು ಎಂಬುದಿನ್ನೂ ಗೊತ್ತಿಲ್ಲವಾದರೂ, ಥ್ರೀ ಇಡಿಯಟ್ಸ್ ಖ್ಯಾತಿಯ ಶರ್ಮಾನ್ ಜೋಷಿ, ಈಕೆಯ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿರುವುದು ಖಚಿತವಾಗಿದೆ. ಈ ಮ್ಯೂಸಿಕಲ್ ರೊಮಾನ್ಸ್ ಚಿತ್ರದಲ್ಲಿ ಮಲ್ಲಿಕಾಗೆ ಯುವತಿಯ ಪಾತ್ರ. ಅದಕ್ಕಾಗಿ ಆಕೆ ಏನನ್ನೂ ಮಾಡಲು ಸಿದ್ಧವಿರುವಂಥವಳು. ಆಗ ಆಕೆಗೆ ರಂಗಭೂಮಿ ನಿರ್ದೇಶಕ ಶರ್ಮಾನ್ ಜೋಷಿ ಸಿಕ್ಕು ಅವನೊಂದಿಗೆ ಪ್ರೀತಿಯಾಗುವುದು ಚಿತ್ರದ ಒನ್ ಲೈನ್, ಅನುರಾಧಾ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಇದಿಷ್ಟೇ ಅಲ್ಲದೆ ನಾಲ್ಕು ಕಥೆಗಳನ್ನು ಪ್ಯಾರಲಲ್ಲಾಗಿ ಹೇಳುವ ಪ್ರಯತ್ನವಾಗುತ್ತಿದೆ.