ಕಿಚ್ಚ ಸುದೀಪ್ ಅಭಿನಯದ ನಿರ್ದೇಶಕ ನಂದ ಕಿಶೋರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ರನ್ನ ಇದೀಗ ಮತ್ತೆ ಸುದ್ದಿಯಲ್ಲಿದೆ.
ರನ್ನ ಚಿತ್ರಕ್ಕಾಗಿ ಖ್ಯಾತ ಟಾಲಿವುಡ್ ಸಂಗೀತ ನಿರ್ದೇಶಕ, ಸಿಂಗರ್ ದೇವಿ ಶ್ರೀಪ್ರಸಾದ್ ಅವರನ್ನು ಕರೆ ತಂದಿದ್ದು, ಅವರ ಕಂಠದಲ್ಲಿ ಜಂಗಲ್ ಮೇ ಸಿಂಗಲ್ ಶೇರ್ ಮತ್ತು ವಾಟು ಡು, ವಾಟ್ ನಾಟ್ ಟು ಡು ಎಂಬ ಎರಡು ಹಾಡುಗಳನ್ನು ಹಾಡಿಸಿದ್ದು ವಿಶೇಷವಾದರೆ. ಇದೀಗ ಚಿತ್ರದ ಹಾಡೊಂದಕ್ಕೆ 100 ಸಹ ನಟಿಯರೊಂದಿಗೆ ಕಿಚ್ಚ ಸುದೀಪ್ ರನ್ನು ಕುಣಿಸಲಿದ್ದಾರೆ.
ನಿರ್ದೇಶಕರ ಪ್ರಕಾರ, ಈ ಹಾಡಿನ ನೃತ್ಯ ಸಂಯೋಜನೆ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಸನ್ನಿವೇಶಕ್ಕೆ ಅಗತ್ಯವಾಗಿರುವುದರಿಂದ 100 ಸಹನಟಿಯರನ್ನು ಚಿತ್ರದಲ್ಲಿ ಕುಣಿಸಲಾಗುತ್ತಿದೆ. ಸುದೀಪ್ ನಟಿಸಿರುವ ಚಿತ್ರಗಳಲ್ಲಿ ಅವರೊಂದಿಗೆ ಇಲ್ಲಿಯವರೆಗೂ ಕಾಣಿಸಿಕೊಂಡಿರುವ ನಟಿಯರು ಸಹ ಈ ಹಾಡಿನಲ್ಲಿ ಕುಣಿಯಲಿದ್ದಾರೆ ಎಂದರು.
ಈ ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸುಮಧುರ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಟಿಪಿಕಲ್ ಹಾಡುಗಳ ಸೃಷ್ಠಿಕರ್ತ ನಿರ್ದೇಶಕ ಯೋಗರಾಜ್ ಭಟ್ ಹಾಡನ್ನು ಬರೆದಿದ್ದು, ಈ ಹಾಡಿಗೆ ಗಣೇಶ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಚಿತ್ರದ ಪೋಸ್ಟ್ ಪ್ರೋಡಕ್ಷನ್ ಬಹುತೇಕ ಮುಕ್ತಾಯಗೊಳಿಸಿರುವ ನಿರ್ದೇಶಕರು. ಮುಂದಿನ ನಾಲ್ಕೈದು ದಿನಗಳೊಳಗಾಗಿ ಮೊದಲ ಕಾಪಿ ಕೈಸೇರಲಿದೆ ಎಂದರು. ಇದೇ ವಾರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ನಂದ ಕಿಶೋರ್ ಅವರು ರನ್ನ ಚಿತ್ರವನ್ನು ಏಪ್ರಿಲ್ ಮಧ್ಯದಲ್ಲಿ ಅಥವಾ ಮೇ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಮಾಡಲು ಸಿದ್ಥತೆ ನಡೆಸಿದ್ದಾರೆ.