ಮನೋರಂಜನೆ

ನಿಮ್ಮನ್ನು ಕುಣಿಸುತ್ತೆ ಈ ಗೂಗಲ್ ಕನ್ನಡಕ !!

Pinterest LinkedIn Tumblr

8428GOOGLE_GLASS__2358020f

ತಂತ್ರಜ್ಞಾನದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೆರೆಯುತ್ತಿರುವ ಗೂಗಲ್ ಇದೀಗ ಡ್ಯಾನ್ಸ್ ಕಲಿಸುವ ಗ್ಲಾಸ್ ಅನ್ನು ಸಿದ್ದಪಡಿಸಿದ್ದು, ಇನ್ನು ಮುಂದೆ ಈ ಗೂಗಲ್ ಗ್ಲಾಸ್ ನಿಮಗೆ ನೃತ್ಯದ ಪಾಠ ಮಾಡಲಿದೆ.

ಹೌದು. ಬಹುಬಗೆಯ ವಿನ್ಯಾಸದೊಂದಿಗೆ ಗೂಗಲ್ ಈ ಗ್ಲಾಸ್ ತಯಾರಿಸಿದ್ದು ಅತ್ಯಂತ ಉತ್ಕೃಷ್ಟವಾದ ತಾಂತ್ರಿಕತೆಯನ್ನು ಒಳಗೊಂಡಿದೆ. ಅಲ್ಲದೇ ಡ್ಯಾನ್ಸ್ ಕಲಿಸುವ ಹೊಸ ಅಂಶವನ್ನು ಈ ಗ್ಲಾಸ್ ಒಳಗೊಳ್ಳಲಿದ್ದು, ಜನಪ್ರಿಯ ಇಂಟರಾಕ್ಟೀವ್ ವೀಡಿಯೊ ಗೇಮ್  ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಶನ್ ಗೆ ಹೆಜ್ಜೆ ಹಾಕುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಅಷ್ಟೇ ಅಲ್ಲ, ಈ ಗೂಗಲ್ ಕನ್ನಡಕ ನಿರ್ದಿಷ್ಟವಾದ  ಹಾಡಿನ ಸಂಯೋಜನೆಗೆ ಅನುಗುಣವಾಗಿ ನೃತ್ಯ ಚಲನೆಗಳನ್ನು ಹೊಂದಿದ್ದು ಹಾಡು ಮತ್ತು ನೃತ್ಯವನ್ನು ಗುರುತಿಸುವ ಸಾಮರ್ಥ್ಯವನ್ನೂ ಹೊಂದಿದೆಯಂತೆ. ಇನ್ನೊಂದು ವಿಶೇಷತೆಯೆಂದರೆ ಯಾವುದೇ ಹಾಡಿಗೆ ಅನುಗುಣವಾದ ನೃತ್ಯವನ್ನು ಇದು ಸಂಯೋಜಿಸುತ್ತದೆ ಇದಕ್ಕೆ ಸಂಬಂಧಿಸಿದ ಪರವಾನಗಿ ಹಕ್ಕನ್ನು ಕಂಪೆನಿ ಪಡೆದುಕೊಂಡಿದ್ದು 2016 ರ ವೇಳೆಯಲ್ಲಿ ಮಾರುಕಟ್ಟೆಯಲ್ಲಿರಲಿದೆ.

Write A Comment