ಮನೋರಂಜನೆ

‘ದ್ವಿಪಾತ್ರದಲ್ಲಿ ನಟನೆ ಸವಾಲಿನ ಕೆಲಸ’: ಕಂಗನಾ ರನೋಟ್‌

Pinterest LinkedIn Tumblr

25Kangana-CUTNEW

‘ಗ್ಯಾಂಗ್‌ಸ್ಟರ್‌’, ‘ಫ್ಯಾಷನ್‌’ ಮತ್ತು ‘ಕ್ವೀನ್‌’ ಚಿತ್ರಗಳಲ್ಲಿ ಸಂಕೀರ್ಣ ಪಾತ್ರಗಳನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ಕಂಗನಾ ರನೋಟ್‌ ಅವರಿಗೆ ದ್ವಿಪಾತ್ರದಲ್ಲಿ ಅಭಿನಯಿಸುವುದು ಎಂದರೆ ಕಷ್ಟದ ವಿಷಯವಂತೆ!

‘ಕ್ವೀನ್‌’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕಂಗನಾ ಖುದ್ದು ಈ ವಿಷಯವನ್ನು ಹೇಳಿಕೊಂಡಿದ್ದಾರೆ. ‘ತನು ವೆಡ್ಸ್‌ ಮನು’ ಚಿತ್ರದ ಸರಣಿ ಸಿನಿಮಾ ‘ತನು ವೆಡ್ಸ್‌ ಮನು ರಿಟರ್ನ್ಸ್‌’ನಲ್ಲಿ ನಾನು ದ್ವಿಪಾತ್ರದಲ್ಲಿ ನಟಿಸಿದ ನಂತರ ಈ  ಅನುಭವವಾಗಿದೆ ಎಂದಿದ್ದಾರೆ.

‘ಸರಣಿ ಚಿತ್ರಗಳಲ್ಲಿ ನನ್ನ ಪಾತ್ರಗಳು ಸಂಪೂರ್ಣ ಭಿನ್ನವಾಗಿದ್ದವು, ಸವಾಲಿನಿಂದ ಕೂಡಿದ್ದವು. ಕೆಲವೊಮ್ಮೆ ಒಂದು ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಎರಡೂ ಪಾತ್ರಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಎಂದರೆ ಇನ್ನು ಕಷ್ಟದ ಕೆಲಸ. ಎರಡೂ ಪಾತ್ರಗಳು ಒಂದೇ ವೇಳೆ ಎದುರುಬದುರಾಗುವ ಸನ್ನಿವೇಶ ನಿರ್ವಹಿಸುವುದು ಅದಕ್ಕಿಂತಲೂ ದೊಡ್ಡ ಸವಾಲಿನದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರದಲ್ಲಿ ಕಂಗನಾ ಅವರು ತನು ಮತ್ತು ದತ್ತೂ ಪಾತ್ರಗಳಲ್ಲಿ ನಟಿಸಿದ್ದಾರೆ. ಆನಂದ್‌ ಎಲ್‌. ರೈ ನಿರ್ದೇಶನದ ಈ ಚಿತ್ರ 2015ರ ಮೇ 31ರಂದು ತೆರೆ ಕಾಣಲಿದೆ. ಚಿತ್ರದಲ್ಲಿ ಕಂಗನಾ ಜೊತೆಗೆ ಆರ್‌. ಮಾಧವನ್‌ ನಟಿಸಿದ್ದಾರೆ.

Write A Comment