ಮನೋರಂಜನೆ

ನಟಿ ಅನುಷ್ಕಾ ಬೆಂಬಲಕ್ಕೆ ನಿಂತ ಸಾನಿಯಾ..!

Pinterest LinkedIn Tumblr

3684IndiaTv13dca0_Sania-Anushka

ಭಾರತ ತಂಡದ ಉಪ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ದದ ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾಗಿದ್ದಕ್ಕೆ ಅನುಷ್ಕಾ ಶರ್ಮಾ ಕಾರಣವೆಂದು ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮಾಡಿರುವುದಕ್ಕೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಿಡಿ ಕಾರಿದ್ದಾರೆ.

ಅನುಷ್ಕಾ ಬೆಂಬಲಿಸಿ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿಕೆ ನೀಡಿದ ಬಳಿಕ ಅನುಷ್ಕಾ ಪರ ಬ್ಯಾಟಿಂಗ್ ಮಾಡಿರುವ ಸಾನಿಯಾ ಮಿರ್ಜಾ, ವಿರಾಟ್ ಕೊಹ್ಲಿ 1 ರನ್ ಗಳಿಸಲು ಅನುಷ್ಕಾ ಕಾರಣರಾದರೆ ಈ ಹಿಂದೆ ಅವರು ಸೆಂಚುರಿ ಗಳಿಸಿದ್ದಕ್ಕೆ ಯಾರು ಕಾರಣ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಯಾರೇ ಆಗಲಿ ಎಲ್ಲ ಪಂದ್ಯಗಳಲ್ಲೂ ಗೆಲ್ಲಲಾಗುವುದಿಲ್ಲ. ಒಂದು ತಂಡವಾಗಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆಂದು ಅಭಿನಂದಿಸಿರುವ ಸಾನಿಯಾ ಮಿರ್ಜಾ, ಮುಂದಿನ ದಿನಗಳಲ್ಲಿ ಯಶಸ್ಸು ಗಳಿಸಲೆಂದು ಹಾರೈಸೋಣಾ ಎಂದು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ರನ್ನು ವಿವಾಹವಾಗಿರುವ ಸಾನಿಯಾ ಮಿರ್ಜಾ ಕ್ರಿಕೆಟ್ ಅಭಿಮಾನಿಯೂ ಆಗಿದ್ದಾರೆ.

Write A Comment