ಲಾಸ್-ಏಂಜಲೀಸ್‌ನಲ್ಲಿ ವಾಸವಾಗಿರುವ ದಂಪತಿಗಳಿಬ್ಬರು ತಮ್ಮ ಮದುವೆಯನ್ನು ವಿಶಿಷ್ಠ ರೀತಿಯಲ್ಲಿ ಮಾಡಿಕೊಳ್ಳ ಬಯಸಿದರು. ಇದಕ್ಕಾಗಿ ಅವರೇನು ಮಾಡಿದ್ದು ಗೊತ್ತಾ? ಕೇವಲ 83 ದಿನಗಳಲ್ಲಿ ವಿಶ್ವವನ್ನು ಸುತ್ತಿರುವ ಅವರು ವಿವಿಧ ಕಡೆಗಳಲ್ಲಿ ಪುನಃ ಪುನಃ ಮದುವೆಯಾಗಿದ್ದಾರೆ.
ವೃತ್ತಿಪರವಾಗಿ ನುರಿತ ಏರೋಬಾಟ್ಸ್ ಆಗಿರುವ ಚೀತಾ ಪ್ಲಾಟ್ ಮತ್ತು ರಿಯಾನ್ ವುಡ್ಯಾರ್ಡ್ 11 ದೇಶಗಳಲ್ಲಿ ಯೋಜಿತವಾಗಿ ಅನನ್ಯ ವಿವಾಹ ಸಮಾರಂಭಗಳನ್ನು ಆಯೋಜಿಸಿಕೊಂಡಿದ್ದರು. ತಾವು ದುಬಾರಿ ದೇಶದಲ್ಲಿದ್ದರೂ ಮದುವೆಯ ನೆಪದಲ್ಲಿ ಒಂದೇ ದಿನ ಲೆಕ್ಕವಿಲ್ಲದಷ್ಟು ಹಣ ಚೆಲ್ಲುವುದು ಅವರಿಬ್ಬರಿಗೆ ಇಷ್ಟವಿರಲಿಲ್ಲ. ವುಡ್ಯಾರ್ಡ್ ವಿಶ್ವದಾದ್ಯಂತ ಮದುವೆಯಾಗುವ ಹೊಸ ಯೋಜನೆಯನ್ನು ಸಂಗಾತಿಯೊಂದಿಗೆ ಬಿಚ್ಚಿಟ್ಟಳು.
ಈ ರೀತಿಯ ವಿವಾಹ ಕೇವಲ ಉಪಯುಕ್ತ ಮಾತ್ರವಲ್ಲ.ಕ್ಯಾಲಿಫೋರ್ನಿಯಾದಲ್ಲಿ ಒಂದು ದಿನ ನಡೆಸುವ ಮದುವೆಗೆ ತಗಲುವ ವೆಚ್ಚಕ್ಕಿಂತ ಕಡಿಮೆ ಖರ್ಚಿನದು ಎಂಬುದು ಜನರಿಗೆ ಅರಿವಾಗಬೇಕು ಎಂಬುದು ಸಹ ಪ್ಲಾಟ್ ಬಯಕೆಯಾಗಿತ್ತು.
ಇಲ್ಲಿಯವರೆಗೆ ಅವರಿಬ್ಬರು ಗಿಜಾದ ಪಿರಾಮಿಡ್ ಮುಂದೆ, ಠಾಣಾದ ಅಜಂತಾ ಗುಹೆಗಳು, ನೈರೋಬಿ, ಕೀನ್ಯಾದ ಮಸಾಯ್ ಗ್ರಾಮ, ಡಬ್ಲಿನ್, ಐರ್ಲೆಂಡ್ ಅಲ್ಲದೇ ಅನೇಕ ಐತಿಹಾಸಿಕ ಜಾಗತಿಕ ತಾಣಗಳಲ್ಲಿ ಮದುವೆಯಾದರು.
ಫೆಬ್ರವರಿ 8 ರಂದು ಪ್ರಾರಂಭವಾಗಿರುವ ಮದುವೆ ಎಪ್ರೀಲ್ 28 ರಂದು ಮುಕ್ತಾಯಗೊಳ್ಳುವಂತೆ ನಿಗದಿ ಮಾಡಲಾಗಿದೆ. ಜತೆಗೆ ಅವರಿಬ್ಬರು ಮೇ 2 ರಂದು ಲಾಸ್ ಏಂಜಲೀಸ್‌ನಲ್ಲಿ ನಿಕಟ ಸ್ನೇಹಿತರು ಮತ್ತು ಕುಟುಂಬದ ಮುಂದೆ ಕಾನೂನುಬದ್ಧವಾಗಿ ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ. ಅಂದು ಅಲ್ಲಿ ನಡೆಸಲಾಗುವ ರಿಸೆಪ್ಸನ್ ಮೂಲಕ ಅವರ ಮದುವೆ ಕೊನೆಗೊಳ್ಳುತ್ತದೆ ಎಂದು ವರದಿಯಾಗಿದೆ.