ಆಕ್ಲೆಂಡ್, ಮಾ.24: ಅದೊಂದು ಅಪೂರ್ವ ಪಂದ್ಯ. ಅಂತಹ ಕಠಿಣ ಪರೀಕ್ಷೆಯನ್ನು ನ್ಯೂಝಿಲೆಂಡ್ ಎಂದಿಗೂ ನೋಡಿರಲಿಲ್ಲ. ವಿಶ್ವಕಪ್‌ನ ಫೈನಲ್ ತಲುಪಲು ಕಿವೀಸ್ ನಡೆಸಿದ ಏಳನೆ ಪ್ರಯತ್ನ ಫಲ ನೀಡಿದೆ. ದಕ್ಷಿಣ ಆಫ್ರಿಕ ಮೂಲದ ಗ್ರಾಂಟ್ ಎಲಿಯಟ್ ಹೋರಾಟದ ಮೂಲಕ ಕಿವೀಸ್‌ನ್ನು ಫೈನಲ್‌ಗೆ ತಲುಪಿಸಿದ್ದಾರೆ. 37ರ ಹರೆಯದ ಗ್ರಾಂಟ್ ಎಲಿಯಟ್ ತನ್ನ ಚೊಚ್ಚಲ ವಿಶ್ವಕಪ್‌ನಲ್ಲಿ ನಡೆಸಿದ ಜೀವನ ಶ್ರೇಷ್ಠ ಬ್ಯಾಟಿಂಗ್ ನೆರವಿನಲ್ಲಿ ಆತಿಥೇಯ ನ್ಯೂಝಿಲೆಂಡ್ ತಂಡ ಮಂಗಳವಾರ ಇಲ್ಲಿ ನಡೆದ 11ನೆ ಆವೃತ್ತಿಯ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಗಳಿಸಿ ಮೊದಲ ಬಾರಿ ಫೈನಲ್‌ಗೆ ತೇರ್ಗಡೆಯಾಗಿ ಐತಿಹಾಸಿಕ ಸಾಧನೆ ಮಾಡಿದೆ.
‘ಎ’ ಗ್ರೂಪ್‌ನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ನ್ಯೂಝಿಲೆಂಡ್ ತಂಡ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನ್ನು ದಾಟಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.
ದಕ್ಷಿಣ ಆಫ್ರಿಕ ಫೈನಲ್‌ಗೆ ತಲುಪಲು ನಡೆಸಿದ ನಾಲ್ಕನೆ ಪ್ರಯತ್ನವೂ ವಿಫಲಗೊಂಡಿದೆ. ಅಂತಿಮ ಹಂತದಲ್ಲಿ ಒತ್ತಡಕ್ಕೆ ಸಿಲುಕಿ ಸೋತು ವಾಪಸಾಗುವ ದಕ್ಷಿಣ ಆಫ್ರಿಕದ ಹಣೆಬರಹ ಈ ಬಾರಿಯೂ ಬದಲಾಗಲಿಲ್ಲ. ಚೋಕರ್ಸ್ ಹಣೆಪಟ್ಟಿಯನ್ನು ಕಿತ್ತೊಗೆ ಯಲು ಸಾಧ್ಯವಾಗಿಲ್ಲ. ಈ ಬಾರಿ ಹಾಗೇನೂ ಇಲ್ಲ. ಚೋಕರ್ಸ್ ಪಟ್ಟಿಯಿಂದ ತಂಡ ಮುಕ್ತವಾಗುತ್ತದೆ ಎಂದು ನಾಯಕ ಎಬಿ ಡಿವಿಲಿಯರ್ಸ್ ಹೇಳಿದ್ದರು. ಆದರೆ ಅವರ ಮಾತು ಗಾಳಿಯಲ್ಲಿ ಲೀನವಾಗಿದೆ. ದಕ್ಷಿಣ ಆಫ್ರಿಕದ ಸೋಲು ತಪ್ಪಲಿಲ್ಲ. ಮಳೆಗೂ ದಕ್ಷಿಣ ಆಫ್ರಿಕ ತಂಡಕ್ಕೂ ಅದೇನೋ ನಂಟು ಗೊತ್ತಿಲ್ಲ. ನಿರ್ಣಾಯಕ ಹಂತದಲ್ಲಿ ಆಫ್ರಿಕ ತಂಡದ ಗೆಲುವಿನ ಹೋರಾಟ ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ಈ ಬಾರಿಯೂ ಬದಲಾಗಲಿಲ್ಲ. ಮಳೆಯಿಂದಾಗಿ ಡಿಎಲ್ ನಿಯಮದಂತೆ ಗೆಲುವಿಗೆ 43 ಓವರ್‌ಗಳಲ್ಲಿ 298 ರನ್‌ಗಳ ಸವಾಲನ್ನು ಪಡೆದಿದ್ದ ನ್ಯೂಝಿಲೆಂಡ್ ತಂಡ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕ ಸಂಜಾತ ಗ್ರಾಂಟ್ ಎಲಿಯಟ್ ಅಜೇಯ 84 ರನ್ (132ನಿ,73ಎ,7ಬೌ,3ಸಿ) ಗಳಿಸಿ ನ್ಯೂಝಿ ಲೆಂಡ್‌ನ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರು ವರ್ಷಗಳ ಹಿಂದೆ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಎಲಿಯಟ್ ಅಜೇಯ 75 ರನ್ ಗಳಿಸಿ ನ್ಯೂಝಿಲೆಂಡ್‌ನ್ನು ಫೈನಲ್‌ಗೆ ತಲುಪಿಸಿದ್ದರು. ಎಲಿಯೆಟ್ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಅದೇ ಹೋರಾಟವನ್ನು ನೆನಪಿಸುವಂತೆ ಆಡಿದರು. ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ನ್ಯೂಝಿಲೆಂಡ್‌ನ ಗೆಲುವಿಗೆ 5 ರನ್‌ಗಳ ಆವಶ್ಯಕತೆ ಇತ್ತು. ಗಾಯಾಳು ಡೇಲ್ ಸ್ಟೇಯ್ನೆರ ಕೊನೆಯ ಓವರ್‌ನ ಐದನೆ ಎಸೆತದಲ್ಲಿ ಚೆಂಡನ್ನು ಗ್ರಾಂಟ್ ಮಿಡ್‌ಆನ್ ಮೂಲಕ ಸಿಕ್ಸರ್‌ಗೆ ಎತ್ತಿ ಐತಿಹಾಸಿಕ ಫೈನಲ್ ಪ್ರವೇಶಿಸುವ ತನಗೆ ಆಶ್ರಯ ನೀಡಿದ ನ್ಯೂಝಿಲೆಂಡ್‌ನ ಕನಸನ್ನು ನನಸಾಗಿಸಿದರು. ಇದೇ ವೇಳೆ ತನಗೆ ಜನ್ಮ ನೀಡಿದ ದಕ್ಷಿಣ ಆಫ್ರಿಕದ ಕನಸನ್ನು ಮಣ್ಣುಪಾಲು ಮಾಡಿದರು.
ಚೆಂಡು ಸಿಕ್ಸರ್‌ಗೆ ಸಾಗುತ್ತಿದ್ದಂತೆ ಬೌಲರ್ ಸ್ಟೇಯ್ನಿ ಕ್ರೀಸ್ ಬಳಿ ಆಘಾತದಿಂದ ಕುಸಿದು ಬಿದ್ದರು. ಎಲಿಯಟ್ ಅವರಿಗೆ ಎದ್ದು ನಿಲ್ಲಲು ಸಹಾಯ ಹಸ್ತ ಚಾಚಿದರು. ಇಷ್ಟರ ತನಕ ತವರಿನಲ್ಲಿ ಹನ್ನೊಂದನೆ ವಿಶ್ವಕಪ್‌ನಲ್ಲಿ ವಿಜಯದ ಅಜೇಯ ಓಟ ಮುಂದುವ ರಿಸಿರುವ ನ್ಯೂಝಿಲೆಂಡ್ ಮಾ.29ರಂದು ಮೆಲ್ಬ್ಬೊರ್ನ್ ನಲ್ಲಿ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಭಾರತ ಅಥವಾ ಆಸ್ಟ್ರೇಲಿಯ ತಂಡ ಫೈನಲ್‌ನಲ್ಲಿ ನ್ಯೂಝಿಲೆಂಡ್‌ಗೆ ಎದುರಾಳಿಯಾಗಲಿದೆ. ಆಫ್ರಿಕ 43 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್ ಮಾಡಿತ್ತು. ಆದರೆ ಮಳೆ
ಯಿಂದಾಗಿ ಡಕ್‌ವರ್ತ್ ಮತ್ತು ಲೂವಿಸ್ ನಿಯಮದಂತೆ ನ್ಯೂಝಿಲೆಂಡ್ ತಂಡ ಗೆಲ್ಲಲು ಹೆಚ್ಚುವರಿಯಾಗಿ 17 ರನ್ ಮಾಡಬೇಕಿತ್ತು. ಕಠಿಣ ಪರಿಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಮಾರ್ಟಿನ್ ಗಪ್ಟಿ
ಲ್(34) ಮತ್ತು ನಾಯಕ ಬ್ರೆಂಡನ್ ಮೆಕಲಮ್ 6 ಓವರ್‌ಗಳಲ್ಲಿ 71 ರನ್ ಸೇರಿಸಿದರು.ಏಳನೆ ಓವರ್‌ನ ಮೊದಲ ಎಸೆತದಲ್ಲಿ ಮೆಕಲಮ್ ಔಟಾದರು. ಮೆಕಲಮ್ ಔಟಾಗುವ ಮೊದಲು 59 ರನ್ (26ಎ, 8ಬೌ,4ಸಿ) ಗಳಿಸಿದರು. ಕೇನ್‌ವಿಲಿಯಮ್ಸನ್ (6) ಬೇಗನೆ ಮೊರ್ಕೆಲ್‌ಗೆ ವಿಕೆಟ್ ಒಪ್ಪಿಸಿದರು. ಅನಂತರ ರಾಸ್ ಟೇಲರ್ ಮತ್ತು ಗಪ್ಟಿಲ್ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಆದರೆ ನಿಧಾನವಾಗಿ ಆಡುತ್ತಿದ್ದ ಗಪ್ಟಿಲ್ ಅವರು 17.1 ಓವರ್‌ನಲ್ಲಿ ರಾಸ್ ಟೇಲರ್ ಜೊತೆ ರನ್ ಕದಿಯಲು ಹೋಗಿ ರನೌಟಾದರು. ರಾಸ್ ಟೇಲರ್ (30) ತಂಡದ ಮೊತ್ತ 21.4 ಓವರ್‌ಗಳಲ್ಲಿ 149ಕ್ಕೆ ತಲುಪುವ ತನಕ ನಿಂತರು. ಕೋರಿ ಆ್ಯಂಡರ್ಸನ್ ಮತ್ತು ಗ್ರಾಂಟ್ ಎಲಿ ಯಟ್ 103 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಆ್ಯಂಡರ್ಸನ್ 33 ರನ್ ಗಳಿಸಿದ್ದಾಗ ರನೌಟಾಗುವ ಅವಕಾಶದಿಂದ ಪಾರಾದರು. ತಂಡದ ಗೆಲುವಿಗೆ 31 ಎಸೆತಗಳಲ್ಲಿ 46 ರನ್‌ಗಳ ಆವಶ್ಯಕತೆ ಇದ್ದಾಗ ಆ್ಯಂಡರ್ಸನ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈ ಸುಟ್ಟುಕೊಂಡರು.
ಲ್ಯುಕ್ ರೋಂಚಿ ಅವರು ಗ್ರಾಂಟ್‌ಗೆ ಜೊತೆ ಯಾದರು. ರೋಂಚಿ (8) ತಂಡದ ಗೆಲುವಿಗೆ 17 ಎಸೆತಗಳಲ್ಲಿ 29 ರನ್‌ಗಳ ಆವಶ್ಯಕತೆ ಇದ್ದಾಗ ಪೆವಿಲಿ ಯನ್ ಸೇರಿದರು. ಈ ಹಂತದಲ್ಲಿ ಎಲಿಯಟ್‌ಗೆ ಕೊನೆಯ ವಿಶ್ವಕಪ್ ಆಡುತ್ತಿರುವ ಹಿರಿಯ ಆಟಗಾರ ವೆಟೋರಿ ಜೊತೆಯಾದರು. ಇವರು 30 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಜೀವದಾನ: 41.6ನೆ ಓವರ್‌ನಲ್ಲಿ ಎಲಿಯಟ್ ಅವರು ಮೊರ್ಕೆಲ್ ಎಸೆತದಲ್ಲಿ ಔಟಾಗುವ ಸಾಧ್ಯತೆ ಇತ್ತು. ಆದರೆ ಬೆಹಾರ್ದಿನ್ ಮತ್ತು ಡುಮಿನಿ ಪರಸ್ಪರ ಢಿಕ್ಕಿಯಾಗಿ ನೆಲಕ್ಕೆ ಬಿದ್ದ ಹಿನ್ನೆಲೆಯಲ್ಲಿ ಕ್ಯಾಚ್ ಪಡೆಯುವ ಅವಕಾಶ ತಪ್ಪಿತು. ರನೌಟ್ ಮಾಡಲು ಆಫ್ರಿಕದ ಆಟಗಾರರಿಗೆ ಸಾಧ್ಯವಾಗಲಿಲ್ಲ.
ಕೈಕೊಟ್ಟ ಅದೃಷ್ಟ: ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಅಯ್ದುಕೊಂಡ ದಕ್ಷಿಣ ಆಫ್ರಿಕ ತಂಡ ಮಳೆಯ ಅಡಚಣೆಯ ನಡುವೆಯೂ ಚೆನ್ನಾಗಿ ಆಡಿತು. 6.53 ಸರಾಸರಿಯಂತೆ 43 ಓವರ್‌ಗಳಲ್ಲಿ 5 ವಿಕೆಟ್‌ಗೆ 281 ರನ್ ಮಾಡಿತು. ಆರಂಭಿಕ ದಾಂಡಿಗರಾದ ಹಾಶೀಮ್ ಅಮ್ಲ (10) ಮತ್ತು ಕ್ವಿಂಟನ್ ಡಿ ಕಾಕ್(14) ಅವರನ್ನು ಬೇಗನೆ ಕಳೆದುಕೊಂಡಿದ್ದರೂ ಎಫ್ ಡು ಪ್ಲೆಸಿಸ್ ಮತ್ತು ರಿಲೀ ರೊಸ್ಸಾವ್ ಮೂರನೆ ವಿಕೆಟ್‌ಗೆ 81 ರನ್‌ಗಳ ಕೊಡುಗೆ ನೀಡಿದರು. ಇವರ ಹೋರಾಟದ ಫಲವಾಗಿ ತಂಡದ ಸ್ಕೋರ್ 26 ಓವರ್‌ಗಳಲ್ಲಿ 114ಕ್ಕೆ ತಲುಪಿತು. 103 ರನ್ ಜೊತೆಯಾಟ:
27ನೆ ಓವರ್‌ನ ಮೊದಲ ಎಸೆತದಲ್ಲಿ ರೊಸ್ಸಾವ್‌ಗೆ ಆ್ಯಂಡರ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಪ್ಲೆಸಿಸ್‌ಮತ್ತು ಎಬಿ ಡಿವಿಲಿಯರ್ಸ್ ಹೋರಾಟ ಮುಂದು ವರಿಸಿದರು. ಇವರ ಜೊತೆಯಾಟದಲ್ಲಿ 103 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು.ಪ್ಲೆಸಿಸ್ 155 ನಿಮಿಷಗಳ ಬ್ಯಾಟಿಂಗ್‌ನಲ್ಲಿ 82 ರನ್(107ಎ, 7ಬೌ, 1ಸಿ) ಗಳಿಸಿ ಕೋರಿ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು.
ಮಿಲ್ಲರ್ ಮತ್ತು ಡಿವಿಲಿಯರ್ಸ್ ಜೊತೆಯಾಗಿ 45 ರನ್ ಸೇರಿಸಿದರು. ಮಿಲ್ಲರ್ ವೇಗವಾಗಿ 49 ರನ್(18ಎ, 6ಬೌ, 3ಸಿ) ಮತ್ತು ಡಿವಿಲಿಯರ್ಸ್ ಔಟಾ ಗದೆ 65 ರನ್(45ಎ, 8ಬೌ,1ಸಿ), ಜೆಪಿ ಡುಮಿನಿ ಔಟಾಗದೆ 8 ರನ್ ಗಳಿಸಿ ತಂಡದ ಮೊತ್ತವನ್ನು 281ಕ್ಕೆ ತಲುಪಿಸಿದ್ದರು. ಸೊ್ಕೀರ್ ವಿವರ
ದ.ಆಫ್ರಿಕ 43 ಓವರ್‌ಗಳಲ್ಲಿ 281/5
ಹಾಶೀಮ್ ಅಮ್ಲ ಬಿ ಬೌಲ್ಟ್ 10
ಕ್ವಿಂಟನ್ ಡಿ ಕಾಕ್ ಸಿ ಸೌಥಿ ಬಿ ಬೌಲ್ಟ್ 14
ಎಫ್ ಡು ಪ್ಲೆಸಿಸ್ ಸಿ ರೊಂಚಿ ಬಿ ಆ್ಯಂಡರ್ಸನ್ 82
ರೊಸ್ಸಾವ್ ಸಿ ಗಪ್ಟಿಲ್ ಬಿ ಆ್ಯಂಡರ್ಸನ್ 39
ಎಬಿ ಡಿವಿಲಿಯರ್ಸ್ ಔಟಾಗದೆ 65
ಡೇವಿಡ್ ಮಿಲ್ಲರ್ ಸಿ ರೋಂಚಿ ಬಿ ಆ್ಯಂಡರ್ಸನ್ 49
ಜೆಪಿ ಡುಮಿನಿ ಔಟಾಗದೆ 8
ಇತರ 14
ವಿಕೆಟ್ ಪತನ: 1-21, 2-31, 3-114, 4-217, 5-272.
ಬೌಲಿಂಗ್ ವಿವರ
ಟಿಮ್ ಸೌಥಿ 9-1-55-0
ಟ್ರೆಂಟ್ ಬೌಲ್ಟ್ 9-0-53-2
ಮ್ಯಾಟ್ ಹೆನ್ರಿ 8-2-40-0
ಡೇನಿಯೆಲ್ ವೆಟೋರಿ 9-0-46-0
ವಿಲಿಯಮ್ಸನ್ 1-0-5-0
ಎಲಿಯಟ್ 1-0-9-0
ಆ್ಯಂಡರ್ಸನ್ 6-0-72-3
ನ್ಯೂಝಿಲೆಂಡ್ 42.5 ಓವರ್‌ಗಳಲ್ಲಿ 299/6 (ಪರಿಷ್ಕೃತ ಗುರಿ 298)
ಮಾರ್ಟಿನ್ ಗಪ್ಟಿಲ್ ರನೌಟ್ (ಅಮ್ಲ/ಡೆ ಕಾಕ್) 34
ಬ್ರೆಂಡನ್ ಮೆಕಲಮ್ ಸಿ ಸ್ಟೇಯ್ನೆ ಬಿ ಮೊರ್ಕೆಲ್ 59
ವಿಲಿಯಮ್ಸನ್ ಬಿ ಮೊರ್ಕೆಲ್ 6
ರಾಸ್ ಟೇಲರ್ ಸಿ ಡಿ ಕಾಕ್ ಬಿ ಡುಮಿನಿ 30
ಗ್ರಾಂಟ್ ಎಲಿಯಟ್ ಔಟಾಗದೆ 84
ಕೋರಿ ಆ್ಯಂಡರ್ಸನ್ ಡು ಪ್ಲೆಸಿಸ್ ಬಿ ಮೊರ್ಕೆಲ್ 58
ಎಲ್.ರೋಂಚಿ ಸಿ ರೊಸ್ಸಾವ್ ಬಿ ಸ್ಟೇಯ್ನಾ 8
ಡೇನಿಯೆಲ್ ವೆಟೋರಿ ಔಟಾಗದೆ 7
ಇತರ 13
ವಿಕೆಟ್ ಪತನ: 1-71, 2-81, 3-128, 4-149, 5-252, 6-269.
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ 8.5-0-76-1
ಫಿಲ್ಯಾಂಡರ್ 8-0-52-0
ಮೊರ್ನೆ ಮೊರ್ಕೆಲ್ 9-0-59-3
ಇಮ್ರಾನ್ ತಾಹಿರ್ 9-1-40-0
ಜೆಪಿ ಡುಮಿನಿ 5-0-43-1
ಎಬಿಡಿವಿಲಿಯರ್ಸ್ 3-0-21-0
