ಮನೋರಂಜನೆ

ಕತ್ರೀನಾ ನೋಡಲು ಲಂಡನ್ ಗೆ ಹೋಗ್ತಾರಂತೆ ಸಲ್ಮಾನ್..!

Pinterest LinkedIn Tumblr

8723salman-khan

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ನಡುವೆ ಸಂಬಂಧ ಬಿರುಕು ಬಿಟ್ಟು ಬಹು ಕಾಲವಾದರೂ ಸಲ್ಮಾನ್ ಮಾತ್ರ ಕತ್ರೀನಾಳ ನೆನಪನ್ನು ಬಿಟ್ಟಂತೆ ಕಾಣುತ್ತಿಲ್ಲ. ಕತ್ರೀನಾ ನೋಡಲು ಸಲ್ಮಾನ್ ಲಂಡನ್ ಗೆ ಹೋಗುತ್ತಿರುವುದು ಬಾಲಿವುಡ್ ಮಂದಿಯನ್ನು ಹುಬ್ಬೇರುವಂತೆ ಮಾಡಿದೆ.

ಸಲ್ಮಾನ್ ಖಾನ್ ನೋಡಲು ಹೋಗುತ್ತಿರುವುದು ಕತ್ರೀನಾಳ ಮೇಣದ ಪ್ರತಿಮೆಯನ್ನು. ಲಂಡನ್ ನಲ್ಲಿರುವ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ಗೆ ಸಲ್ಮಾನ್ ಭೇಟಿ ನೀಡಲಿದ್ದಾರೆ. ಇಲ್ಲಿ ಕತ್ರೀನಾ ಕೈಫ್ ರ ಮೇಣದ ಪ್ರತಿಮೆ ಸಿದ್ದವಾಗಿದ್ದು, ಇದೇ ಮಾರ್ಚ್ 27 ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ. ತಮ್ಮ ಮೇಣದ ಪ್ರತಿಮೆಯೂ ಅಲ್ಲಿರಬೇಕೆಂದು ಬಯಸಿರುವ ಸಲ್ಮಾನ್, ಕತ್ರೀನಾ ಪ್ರತಿಮೆ ಹೇಗೆ ಮೂಡಿರಬಹುದೆಂಬ ಕುತೂಹಲದ ಕಾರಣಕ್ಕೆ ಅಲ್ಲಿಗೆ ತೆರಳುತ್ತಿದ್ದಾರೆನ್ನಲಾಗಿದೆ.

ಮತ್ತೊಂದು ಕುತೂಹಲಕರ ಸಂಗತಿಯೆಂದರೆ ಕತ್ರೀನಾಳನ್ನು ಸಮಯ ಸಿಕ್ಕಾಗಲೆಲ್ಲ ಕಾಲೆಳೆಯುತ್ತಿದ್ದ ರಣಬೀರ್ ಕಪೂರ್ ತಾಯಿ ನೀತೂ ಸಿಂಗ್ ಹಾಗೂ ತಂದೆ ರಿಷಿ ಕಪೂರ್ ಸಹ ಮಾರ್ಚ್ 27 ರಂದು ಲಂಡನ್ನಿಗೆ ತೆರಳುತ್ತಿರುವುದು. ಕತ್ರೀನಾ ಕೈಫ್ ಮಾರ್ಚ್ 27 ರ ಕಾರ್ಯಕ್ರಮ ಮುಗಿಸಿ ಭಾರತಕ್ಕೆ ಬಂದ ಬಳಿಕ ರಣಬೀರ್ ಕಪೂರ್, ಮುಂಬೈನಲ್ಲಿ ದೊಡ್ಡ ಸುದ್ದಿ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಬಹುಶಃ ಕತ್ರೀನಾ ಜೊತೆಗಿನ ವಿವಾಹದ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

Write A Comment