ಮನೋರಂಜನೆ

ಮಾಡೆಲ್‌ ಇಶಾ ಗುಪ್ತಾ ನಾಟಕ ಪ್ರೀತಿ

Pinterest LinkedIn Tumblr

psmec11Esha Gupta (4)

‘ರಂಗಭೂಮಿಯಲ್ಲಿ ಅಭಿನಯಿಸಲು ನನಗೆ ತುಂಬಾ ಇಷ್ಟ. ಸಿನಿಮಾಗಳಲ್ಲಿ ಅಭಿನಯಿಸುವುದಕ್ಕಿಂತ ರಂಗಭೂಮಿ ಮೇಲೆ ಅಭಿನಯಿಸುವು ತುಂಬಾ ಕಷ್ಟ’ ಎಂದಿದ್ದಾರೆ ಬಿಟೌನ್ ನಟಿ ಹಾಗೂ ಮಾಡೆಲ್‌ ಇಶಾ ಗುಪ್ತಾ.
‘ರಾಝ್‌ 3’ ಚಿತ್ರದ ಮೂಲಕ ಬಿಟೌನ್‌ಗೆ ಕಾಲಿಟ್ಟ ಇಶಾ ಚಕ್ರವ್ಯೂಹ ಚಿತ್ರದಲ್ಲೂ ನಟಿಸಿದ್ದಾರೆ. ಅವರು ಇಲ್ಲಿಯವರೆಗೆ ರಂಗಭೂಮಿಯಲ್ಲಿ ಅಭಿನಯಿಸಿಲ್ಲ. ಹೀಗಾಗಿ ಅಲ್ಲಿ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ನಟ ಅನುಪಮ್‌ ಖೇರ್‌ ಅವರ ‘ಮೇರಾ ವೋ ಮತ್‌ಲಬ್‌ ನಹೀ ಥಾ’ ನಾಟಕ ಪ್ರದರ್ಶನವನ್ನು ಅವರು ವೀಕ್ಷಿಸಿದ್ದರು. ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘ನಾನು ಒಂದು ಉತ್ತಮ ನಾಟಕದಲ್ಲಿ ಅಭಿನಯಿಸಲು ಇಚ್ಛಿಸುತ್ತೇನೆ.
ನನ್ನ ಆಸೆಯ ಬಗ್ಗೆ ಅನುಪಮ್‌ ಖೇರ್‌ ಅವರ ಬಳಿಯೂ ಚರ್ಚಿಸಿದ್ದೇನೆ. ಅದು ಚಿಕ್ಕ ಅಥವಾ ದೊಡ್ಡ ಪಾತ್ರವಾಗಿರಬಹುದು. ನಾನು ನಾಟಕದಲ್ಲಿ ಅಭಿನಯಿಸುವುದಂತೂ ಖಚಿತ’ ಎಂದಿದ್ದಾರೆ 29 ವರ್ಷದ ನಟಿ.
‘ನಾಟಕದಲ್ಲಿ ರಿಟೇಕ್‌ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಆದರೆ ಸಿನಿಮಾಗಳಲ್ಲಿ ಸರಿಯಾಗಿ ನಟಿಸದಿದ್ದರೆ ಮತ್ತೊಮ್ಮೆ ಟೇಕ್‌ ತೆಗೆದುಕೊಳ್ಳಬಹುದು. ಆದರೆ ರಂಗಭೂಮಿ ಮೇಲೆ ಅಭಿನಯಿಸಲು ಅನುಭವ ಹಾಗೂ ಪ್ರತಿಭೆ ಇರಬೇಕು. ಹೀಗಾಗಿ ನಾಟಕಗಳಲ್ಲಿ ಅಭಿನಯಿಸುವುದು ಸ್ವಲ್ಪ ಕಷ್ಟ’ ಎನ್ನುವುದು ಇಶಾ ಅಭಿಮತ.

Write A Comment