ಆಕ್ಲೆಂಡ್, ಮಾ.7: ಪಾಕಿಸ್ತಾನ ತಂಡ ಕ್ವಾರ್ಟರ್ ಫೈನಲ್‌ಗೇರುವ ಅವಕಾಶವನ್ನು ಮತ್ತೆ ಜೀವಂತವಾಗಿರಿಸಿದ್ದು, ಶನಿವಾರ ನಡೆದ ವಿಶ್ವಕಪ್‌ನ ‘ ಬಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 29 ರನ್‌ಗಳ ಜಯ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಾಕಿಸ್ತಾನ ತಂಡ ನಾಯಕ ಮಿಸ್ಬಾವುಲ್ ಹಕ್ ಅರ್ಧಶತಕದ ಸಹಾಯದಿಂದ 46.4 ಓವರ್‌ಗಳಲ್ಲಿ 222 ರನ್ ಸೇರಿಸುವಷ್ಟರಲ್ಲಿ ಆಲೌಟಾಯಿತು.
ಮಳೆಯಿಂದಾಗಿ ಡಕ್‌ವರ್ತ್ ಮತ್ತು ಲೂವಿಸ್ ನಿಯಮದಂತೆ ಗೆಲುವಿಗೆ 232 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ 33.3 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಯಿತು. ನಾಯಕ ಎಬಿ ಡಿವಿಲಿಯರ್ಸ್ 77 ರನ್ ಗಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರೂ, ಸಹ ಆಟಗಾರರ ಸರಿಯಾದ ಬೆಂಬಲ ಅವರಿಗೆ ದೊರೆಯಲಿಲ್ಲ.
ಪಾಕ್‌ನ ವೇಗದ ಬೌಲರ್ ಮುಹಮ್ಮದ್ ಇರ್ಫಾನ್( 3-52), ಎಡಗೈ ವೇಗಿ ರಾಹತ್ ಅಲಿ(3-40) ಮತ್ತು ವಹಾಬ್ ರಿಯಾಝ್(3-45) ತಲಾ 3 ವಿಕೆಟ್ ಉಡಾಯಿಸಿದರು. ಸೊಹೈಲ್ ಖಾನ್(1-36) ಅವರು 33ನೆ ಓವರ್‌ನಲ್ಲಿ ನಾಯಕ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ದಕ್ಷಿಣ ಆಫ್ರಿಕ 19.4 ಓವರ್‌ಗಳಲ್ಲಿ 102 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಕಷ್ಟಕ್ಕೆ ಸಿಲುಕಿತ್ತು. ಬಳಿಕ ಡಿವಿಲಿಯರ್ಸ್ ಏಳನೆ ವಿಕೆಟ್‌ಗೆ ಡೇಲ್ ಸ್ಟೇಯ್ನೆ(16), , 8ನೆ ವಿಕೆಟ್‌ಗೆ ಕೈಲ್ ಅಬಾಟ್(12) ಮತ್ತು 9ನೆ ವಿಕೆಟ್‌ಗೆ ಮೊರ್ನೆ ಮೊರ್ಕೆಲ್(ಔಟಾಗದೆ 6) ಜೊತೆ ಹೋರಾಟ ನಡೆಸಿ ಸ್ಕೋರನ್ನು 200ಕ್ಕೆ ತಲುಪಿಸಿದ್ದರು. ಡಿವಿಲಿಯರ್ಸ್ ಔಟಾಗಿ ಪೆವಿಲಿಯನ್ ಸೇರುವ ಮೂಲಕ ದಕ್ಷಿಣ ಆಫ್ರಿಕದ ಹೋರಾಟ ಅಂತ್ಯಗೊಂಡಿತು.
ಪಾಕಿಸ್ತಾನದ ಇರ್ಫಾನ್ , ರಾಹತ್ ಮತ್ತು ರಿಯಾಝ್ ಅವರು ದಕ್ಷಿಣ ಆಫ್ರಿಕದ ಅಗ್ರ ಸರದಿಯ ದಾಂಡಿಗರಾದ ಕ್ವಿಂಟನ್ ಡೆ ಕಾಕ್(0), ಹಾಶೀಮ್ ಅಮ್ಲ(38) ಮತ್ತು ಎಫ್ ಡು ಪ್ಲೆಸಿಸ್(27) ಅವರಿಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸಿ ಒತ್ತಡಕ್ಕೆ ಸಿಲುಕಿಸಿದ್ದರು. ನಾಯಕ ಎಬಿಡಿ ವಿಲಿಯರ್ಸ್ ಹೋರಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರೂ ಅವರ ನಿರ್ಗಮನದ ಬಳಿಕ ಪಾಕ್ ಮೇಲುಗೈ ಸಾಧಿಸಿತು. ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಸರ್ಫ್ರಾಝ್ ಅಹ್ಮದ್ ಅವರು ದಕ್ಷಿಣ ಆಫ್ರಿಕವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರು ಕ್ಯಾಚ್‌ಗಳನ್ನು ಪಡೆದು ವಿಶ್ವಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಅವರು ಪಾಕ್‌ನ ಆರಂಭಿಕ ಬ್ಯಾಟ್ಸ್‌ಮನ್ ಆಗಿ 49 ರನ್‌ಗಳ ಕಾಣಿಕೆ ನೀಡಿದ್ದರು. ಅವರು 16ನೆ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿ ಬೌಲರ್ ಡುಮಿನಿಯ ಬೆವರಿಳಿಸಿದ್ದರು.
ಯೂನಿಸ್ ಖಾನ್(37) ಮತ್ತು ಶಾಹಿದ್ ಅಫ್ರಿದಿ(22) ಮತ್ತು ನಾಯಕ ಮಿಸ್ಬಾವುಲ್ ಹಕ್(56) ಸಹಾಯದಿಂದ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
ಪಾಕ್ ತಂಡದಿಂದ ಆರಂಭದಲ್ಲಿ ರನ್ ಚೆನ್ನಾಗಿ ಹರಿದು ಬರಲಿಲ್ಲ.ಡೇಲ್ ಸ್ಟೇಯ್ನಾ(3-30) ಅವರು ಪಾಕ್ ತಂಡದ ಬೆನ್ನಲುಬು ಮುರಿದಿದ್ದರು. ಆರಂಭಿಕ ದಾಂಡಿಗ ಅಹ್ಮದ್ ಶೆಹ್‌ಝಾದ್ (18) ಅವರು ಅಬಾಟ್ ಎಸೆತದಲ್ಲಿ ಸ್ಟೇಯ್ನಾಗೆ ಕ್ಯಾಚ್ ನೀಡುವುದರೊಂದಿಗೆ ಪಾಕ್‌ನ ಮೊದಲ ವಿಕೆಟ್ ಉರುಳಿತ್ತು. ಎರಡನೆ ವಿಕೆಟ್‌ಗೆ ಸರ್ಫ್ರಾಝ್ ಮತ್ತು ಯೂನಿಸ್ ಖಾನ್ 62 ರನ್‌ಗಳ ಜೊತೆಯಾಟ ನೀಡಿದರು. ಆಫ್ರಿಕದ ಸ್ಟೇಯ್ನಿ ಬಳಗವು ಪಾಕ್‌ನ ದಾಂಡಿಗರಿಗೆ ತಲೆನೋವುಂಟು ಮಾಡಿತು. ಸ್ಟೇಯ್ನಿಗೆ(3-30) ಅಬಾಟ್(2-45), ಮೊರ್ನೆ ಮೊರ್ಕೆಲ್(2-25) ಇರ್ಮಾನ್ ತಾಹಿರ್(1-38) ಮತ್ತು ಎಬಿ ಡಿವಿಲಿಯರ್ಸ್ (1-43) ಉತ್ತಮ ಬೆಂಬಲ ನೀಡಿದರು.
ಸ್ಕೋರ್ ಪಟ್ಟಿ
ಪಾಕ್ 46.4 ಓವರ್‌ಗಳಲ್ಲಿ ಆಲೌಟ್ 222
ಸರ್ಫ್ರಾಝ್ ರನೌಟ್(ಮಿಲ್ಲರ್/ಡೆ ಕಾಕ್) 49
ಅಹ್ಮದ್ ಶೆಹಝಾದ್ ಸಿ ಸ್ಟೇಯ್ನ ಬಿ ಅಬಾಟ್ 18
ಯೂನಿಸ್ ಸಿ ರೋಸೌವ್ ಬಿ ಎಬಿ ಡಿವಿಲಿಯರ್ಸ್ 37
ಮಿಸ್ಬಾವುಲ್ ಹಕ್ ಸಿ ಮೋರ್ಕೆಲ್ ಬಿ ಸ್ಟೇಯ್ನಾ 56
ಶುಐಬ್ ಮಕ್ಸೂದ್ ಸಿ ರೋಸೌವ್ ಬಿ ಅಬಾಟ್ 8
ಉ.ಅಕ್ಮಲ್ ಸಿ ಎಬಿಡಿವಿಲಿಯರ್ಸ್ ಬಿ ಮೊರ್ಕೆಲ್ 13
ಶಾಹಿದ್ ಅಫ್ರಿದಿ ಸಿ ಡುಮಿನಿ ಬಿ ಸ್ಟೇಯ್ನಿ 22
ವಹಾಬ್ ಎಲ್‌ಬಿಡಬ್ಲು ಬಿ ಇಮ್ರಾನ್ ತಾಹೀರ್ 0
ಸೊಹೈಲ್ ಖಾನ್ ಸಿ ಡುಮಿನಿ ಬಿ ಮೊರ್ಕೆಲ್ 3
ರಾಹತ್ ಅಲಿ ಸಿ ತಾಹೀರ್ ಬಿ ಸ್ಟೇಯ್ನ 1
ಮುಹಮ್ಮದ್ ಇರ್ಫಾನ್ ಔಟಾಗದೆ 1
ಇತರ 14
ವಿಕೆಟ್ ಪತನ 1-30(ಶೆಹ್‌ಝಾದ್, 8.4), 2-92( ಅಹ್ಮದ್, 16.4), 3-132(ಯೂನಿಸ್ ಖಾನ್, 26.4), 4-156(ಮಕ್ಸೂದ್, 31.6),5-175(ಉಮರ್ ಅಕ್ಮಲ್, 36.5), 6-212(ಅಫ್ರಿದಿ ,41.4), 7-212(ರಿಯಾಝ್, 42.1), 8-218(ಮಿಸ್ಬಾ, 43.5), 9-221(ರಾಹತ್ ,45.20), 10-222(ಸೊಹೈಲ್ ಖಾನ್, 46.4).
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ 10-3-30-3
ಕೈಲ್ ಅಬಾಟ್ 9-0-45-2
ಮೊರ್ನೆ ಮೊರ್ಕೆಲ್ 9.4-0-25-2
ಇಮ್ರಾನ್ ತಾಹೀರ್ 9-1-38-1
ಎಬಿಡಿ ವಿಲಿಯರ್ಸ್ 6-0-43-1
ಜೆಪಿ ಡುಮಿನಿ 3-0-34-0
ಆಫ್ರಿಕ 33.3 ಓವರ್‌ಗಳಲ್ಲಿ ಆಲೌಟ್ 202
ಕ್ವಿಂಟನ್ ಡೆ ಕಾಕ್ ಸಿ ಸರ್ಫ್ರಾಝ್ ಬಿ ಇರ್ಫಾನ್ 0
ಅಮ್ಲ ಸಿ ಸರ್ಫ್ರಾಝ್ ಬಿ ರಿಯಾಝ್ 38
ಪ್ಲೆಸಿಸ್ ಸಿ ಸರ್ಫ್ರಾಝ್ ಬಿ ರಾಹತ್ ಅಲಿ 27
ರೋಸೌವ್ ಸಿ ಸೊಹೈಲ್ ಖಾನ್ ಬಿ ರಿಯಾಝ್ 6
ಎಬಿ ಡಿವಿಲಿಯರ್ಸ್ ಸಿ ಸರ್ಫ್ರಾಝ್ ಬಿ ಸೊಹೈಲ್ 77
ಮಿಲ್ಲರ್ ಎಲ್‌ಬಿಡಬ್ಲು ಬಿ ರಾಹತ್ ಅಲಿ 0
ಜೆಪಿ ಡುಮಿನಿ ಸಿ ರಿಯಾಝ್ ಬಿ ಇರ್ಫಾನ್ 12
ಸ್ಟೇಯ್ನ ಸಿ ಸರ್ಫ್ರಾಝ್ ಬಿ ಇರ್ಫಾನ್ 16
ಅಬಾಟ್ ಸಿ ಯೂನಿಸ್ ಬಿ ರಾಹತ್ ಅಲಿ 12
ಮೊರ್ನೆ ಮೊರ್ಕೆಲ್ ಔಟಾಗದೆ 6
ಇಮ್ರಾನ್ ತಾಹೀರ್ ಸಿ ಸರ್ಫ್ರಾಝ್ ಬಿ ರಿಯಾಝ್ 0
ಇತರ: 8
ವಿಕೆಟ್ ಪತನ 1-0(ಡೆ ಕಾಕ್, 0.2), 2-67(ಪ್ಲೆಸಿಸ್, 9.3), 3-67( ಅಮ್ಲ, 10.1), 4-74( ರೋಸೌವ್, 12.2), 5-77(ಮಿಲ್ಲರ್, 15.5), 6-102(ಡುಮಿನಿ, 19.4), 7-138(ಸ್ಟೇಯ್ನೆ, 23.6), 8-172(ಅಬಾಟ್, 29.2), 9-200(ಡಿ ವಿಲಿಯರ್ಸ್ ,32.2), 10-202( ತಾಹೀರ್, 33.3).
ಬೌಲಿಂಗ್ ವಿವರ
ಮುಹಮ್ಮದ್ ಇರ್ಫಾನ್ 8-0-52-3
ಸೊಹೈಲ್ ಖಾನ್ 5-0-36-1
ರಾಹತ್ ಅಲಿ 8-1-40-3
ಶಾಹಿದ್ ಅಫ್ರಿದಿ 5-0-28-0
ವಹಾಬ್ ರಿಯಾಝ್ 7.3-2-45-3