ಲಂಡನ್‌ನ ಮಡೇಮ್ ಟು ಸ್ಯಾಡ್ಸ್ ಮ್ಯೂಸಿಯಂನಲ್ಲಿ ವಿಶ್ವದ ಅತ್ಯಂತ ಗಣ್ಯಾತಿಗಣ್ಯರ ಪುತ್ಥಳಿಗಳನ್ನು ಅರಗಿನಲ್ಲಿ ಮಾಡಿ ಇರಿಸುವುದು ಸರ್ವೇ ಸಾಮಾನ್ಯ. ಅದರಲ್ಲಿ ಎಲ್ಲ ಕ್ಷೇತ್ರಗಳ ಸೆಲೆಬ್ರಿಟಿಗಳೂ ಇರುತ್ತಾರೆ. ಕಳೆದ ಬಾರಿ ಆ ಮ್ಯೂಸಿಯಂನಲ್ಲಿ ಬಾಲಿವುಡ್ ನಟ ಸಲ್ಮಾನ್‌ಖಾನ್‌ನ ಪ್ರತಿಮೆ ಮಾಡಿಬಿಟ್ಟಿದ್ದರು. ಈ ಬಾರಿಗೆ ಇನ್ನೊಬ್ಬಳು ಬಾಲಿವುಡ್ ನಟಿಗೆ ಈ ಅದೃಷ್ಟ ಒಲಿದಿದೆ. ಅಂದಹಾಗೆ ಅವಳಾರು ಗೊತ್ತೆ..? ಆ ನಟಿ ಬೇರಾರೂ ಅಲ್ಲ. ಬಾಲಿವುಡ್‌ನ ಹಾಟ್ ಬೆಡಗಿ ಕತ್ರೀನಾ ಕೈಫ್..! ಹೌದು ಕತ್ರಿನಾ ಕೈಫ್‌ಳ ಅರಗಿನ ಪುತ್ಥಳಿ ತಯಾರಿ ಭರದಿಂದ ನಡೆದಿದೆಯಂತೆ.
ಈ ಬೆಡಗಿಯ ಪ್ರತಿಕೃತಿಯನ್ನು ಅರಗಿನಲ್ಲಿ 20 ಜನ ಕಲಾವಿದರು ಮಾಡುತ್ತಿದ್ದಾರಂತೆ. ಈಗಾಗಲೇ ಮಡೇಮ್ ಟು ಸ್ಯಾಡ್ ಮ್ಯೂಸಿಯಂನಲ್ಲಿ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಐಶ್ವರ್ಯ ರೈ, ಹೃತಿಕ್ ರೋಷನ್, ಸಲ್ಮಾನ್ ಖಾನ್ ಅವರ ಪ್ರತಿಕೃತಿಗಳು ಕಂಗೊಳಿಸುತ್ತಿವೆ. ಆ ಸಾಲಿಗೆ ಈಗ ಕತ್ರಿನಾಳೂ ಸೇರ್ಪಡೆಯಾಗುತ್ತಿದ್ದಾಳೆ. ಬರುವ ಸ್ಪ್ರಿಂಗ್ ಸೀಸನ್ (ವಸಂತ ಮಾಸ)ನಲ್ಲಿ ಪ್ರತಿಕೃತಿ ಅನಾವರಣಗೊಳ್ಳಲಿದೆಯಂತೆ. ಅಂದಹಾಗೆ ಇನ್ನೊಂದು ವಿಷಯ ಗಮನಿಸಬೇಕು. ಈ ಬ್ಯೂಟಿಯ ಪುತ್ಥಳಿ ಬೆಲೆ ಬರೋಬ್ಬರಿ 1.50 ಲಕ್ಷ ಪೌಂಡ್‌ಗಳು ಅಂದರೆ ಸುಮಾರು 1,36,50,000 ರೂಪಾಯಿಗಳು..!!
