ಮನೋರಂಜನೆ

ಮೂರನೆ ಕ್ರಮಾಂಕದಲ್ಲೇ ಆಡಲಿಷ್ಟಪಡುತ್ತೇನೆ : ವಿರಾಟ್ ಕೊಹ್ಲಿ

Pinterest LinkedIn Tumblr

Virat-k0ohlii

ಮೆಲ್ಬೋರ್ನ್ ಫೆ.21: ವಿಶ್ವಕಪ್ ಪಂದ್ಯಾವಳಿಯಲ್ಲಿ ಮೂರನೆ ಕ್ರಮಾಂಕದಲ್ಲಿ ಆಡಲಿಳಿಯುತ್ತಿರುವುದು ನನ್ನಲ್ಲಿ ಹೊಸ ಸ್ಫೂರ್ತಿ ತಂದಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ತಂಡದ ಗೆಲುವಿನ ರೂವಾರಿಯಾಗಿದ್ದ ಕೊಹ್ಲಿ ಆಡಳಿತ ಮಂಡಳಿ ನನ್ನನ್ನು ಮೂರನೆ ಕ್ರಮಾಂಕದಲ್ಲಿ ಆಡಲು ಸೂಚಿಸಿರುವುದು ಸೂಕ್ತ ಎಂದಿದ್ದಾರೆ. ನಾನು ತಂಡದ ಯಶಸ್ಸಿಗಾಗಿ ವಿವಿಧ ಪಂದ್ಯಗಳಲ್ಲಿ ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದೇನೆ.

ಆದರೆ, ಮೂರನೆ ಕ್ರಮಾಂಕವೇ ನನಗೆ ಸೂಕ್ತ. ಹೀಗಾಗಿ ವಿಶ್ವಕಪ್‌ನಲ್ಲಿ ಅದೇ ಕ್ರಮಾಂಕದಲ್ಲಿ ಆಡಲಿಚ್ಚಿಸುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಜತೆಯಾಟಕ್ಕಾಗಿ ನಾವು ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಹೀಗಾಗಿ ಕೆಲವೊಂದು ಬಾರಿ ನಾನು ಬೇರೆ ಕ್ರಮಾಂಕದಲ್ಲೂ ಆಡಬೇಕಾಗುತ್ತದೆ. ಇಂತಹ ಪ್ರಯತ್ನಕ್ಕೆ ಅಭಿಮಾನಿಗಳು ಸಹಕರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಇಂತಹ ಪ್ರಯತ್ನದಲ್ಲಿ ಕೆಲವೊಂದು ಬಾರಿ ಎಡವಿದರೂ ಅದರಿಂದ ಸಾಕಷ್ಟು ಪಾಠ ಕಲಿಯಲು ಅವಕಾಶವಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಉದ್ದೇಶದಿಂದ ಕೆಲವೊಂದು ಬದಲಾವಣೆಗೂ ಮುಂದಾಗಿದ್ದೇವೆ ಎಂದು ಕೊಹ್ಲಿ ವಿವರಿಸಿದರು. ಈ ರೀತಿಯ ಬದಲಾವಣೆಯಿಂದ ನನ್ನ ಬ್ಯಾಟಿಂಗ್ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಕೊಹ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರತಿ ಪಂದ್ಯದಲ್ಲೂ ಶತಕ ಬಾರಿಸಲು ಸಾಧ್ಯವಿಲ್ಲ. ಆದರೂ ಎಲ್ಲ ಪಂದ್ಯದಲ್ಲೂ ಉತ್ತಮ ಆಟ ಪ್ರದರ್ಶಿಸುವತ್ತ ಗಮನ ಕೇಂದ್ರೀಕರಿಸಿದ್ದೇನೆ ಎಂದು ಕೊಹ್ಲಿ ಹೇಳಿದರು. ನಾಳೆ ಬಲಿಷ್ಠ ತಂಡವನ್ನು ಎದುರಿಸುತ್ತಿದ್ದೀರಿ, ಇದು ಕಠಿಣ ಸವಾಲಲ್ಲವೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ವಿಶ್ವಕಪ್‌ನ ಎಲ್ಲ ಪಂದ್ಯಗಳನ್ನೂ ನಾವು ಪ್ರಬಲ ಸವಾಲು ಎಂದೇ ಪರಿಗಣಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

Write A Comment