ಮನೋರಂಜನೆ

ಪಾಕ್‌ಗೆ ಸೋಲು: ಆಟಗಾರರಿಗೆ ಅಣಕು ಶವಸಂಸ್ಕಾರ ಮಾಡಿದ ಪಾಕ್ ಅಭಿಮಾನಿಗಳು

Pinterest LinkedIn Tumblr

Pakistani cricket fans protest

ಮುಲ್ತಾನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿಂದು ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ತಂಡದ ವಿರುದ್ಧ ಪಾಕ್ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಭಾನುವಾರ ಭಾರತದ ವಿರುದ್ಧ ಪಾಕ್ ಪರಾಭವಗೊಂಡಾಗ ಬೇಸರಗೊಂಡ ಪಾಕ್ ಅಭಿಮಾನಿಗಳು ಟೀವಿಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇಂದು ಮುಲ್ತಾನ್‌ನಲ್ಲಿ ಪಾಕ್ ಅಭಿಮಾನಿಗಳು ಪಾಕ್ ತಂಡದ ಆಟಗಾರರ ಅಣಕು ಶವಸಂಸ್ಕಾರ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಶವಪೆಟ್ಟಿಗೆಯ ಮೇಲೆ ಬ್ಯಾಟ್ ಗಳನ್ನಿರಿಸಿ ಅಂತಿಮ ಯಾತ್ರೆಯ ಅಣಕು ಪ್ರದರ್ಶನ ಮಾಡಿ ತಮ್ಮೊಳಗಿನ ಸಿಟ್ಟನ್ನು ತೋರಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ 150 ರನ್ ಗಳ ಸೋಲು ಅನುಭವಿಸಿತ್ತು.
1992ರ ವಿಶ್ವಕಪ್ ವಿಜೇತ ತಂಡವಾದ ಪಾಕಿಸ್ತಾನ ಇದೀಗ ಬಿ ಗುಂಪಿನ ತಂಡಗಳಲ್ಲಿ ಪಾಯಿಂಟ್ ಆಧಾರದಲ್ಲಿ ಕೊನೆಯ ಸ್ಥಾನದಲ್ಲಿದ್ದು, ಮಾರ್ಚ್ 1 ರಂದು ಜಿಂಬಾಬ್ವೆ ವಿರುದ್ಧ ಬ್ರಿಸ್ಬೇನ್‌ನಲ್ಲಿ ಸೆಣಸಾಡಲಿದೆ.

Write A Comment