ಮನೋರಂಜನೆ

ಬಾಂಗ್ಲಾದೇಶ ತಂಡದ ಶುಭಾರಂಭ: ಮಿಂಚಿದ ಶಕೀಬ್‌, ಮುಷ್ಫಿಕರ್‌ ರಹೀಮ್‌; ಆಫ್ಘನ್‌ಗೆ ನಿರಾಸೆ

Pinterest LinkedIn Tumblr

pvec19xbangla

ಕ್ಯಾನ್‌ಬೆರಾ: ಯಾವುದೇ ಅಚ್ಚರಿಗೆ ಆಸ್ಪದ ನೀಡದ ಬಾಂಗ್ಲಾದೇಶ ತಂಡ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಸುಲಭ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.

ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ 105 ರನ್‌ಗಳಿಂದ ಆಫ್ಘಾನಿಸ್ತಾನ ತಂಡವನ್ನು ಮಣಿಸಿತು. ಇದೇ ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಆಫ್ಘನ್‌ ಅಚ್ಚರಿ ಉಂಟು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಬಾಂಗ್ಲಾ ಅದಕ್ಕೆ ಅವಕಾಶ ನೀಡಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ಮಶ್ರಫೆ ಮೊರ್ತಜಾ ಬಳಗ 50 ಓವರ್‌ಗಳಲ್ಲಿ 267 ರನ್ ಗಳಿಸಿತು. ಆಫ್ಘನ್‌ 42.5 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟಾಯಿತು. ಶಕೀಬ್‌ ಉಲ್‌ ಹಸನ್‌ (63 ಮತ್ತು 43ಕ್ಕೆ2) ತೋರಿದ ಆಲ್‌ರೌಂಡ್‌ ಆಟ ಹಾಗೂ ಮುಷ್ಫಿಕರ್‌ ರಹೀಮ್‌ (71) ಗಳಿಸಿದ ಅರ್ಧಶತಕ ಬಾಂಗ್ಲಾ ಗೆಲುವಿಗೆ ಕಾರಣವಾಯಿತು.

ನಿಧಾನಗತಿ ಆರಂಭ
ಟಾಸ್‌ ಗೆದ್ದ ಬಾಂಗ್ಲಾ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತು. ತಂಡಕ್ಕೆ ಬಿರುಸಿನ ಆರಂಭ ಲಭಿಸಲಿಲ್ಲ. ಆಫ್ಘನ್‌ ವೇಗಿಗಳು ಶಿಸ್ತಿನ
ಶಕೀಬ್‌ 4 ಸಾವಿರ ರನ್‌
ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಏಕದಿನ ಕ್ರಿಕೆಟ್‌ನಲ್ಲಿ 4000 ರನ್‌ ಪೂರೈಸಿದರು. ಈ ಸಾಧನೆ ಮಾಡಿದ ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು.
ಶಕೀಬ್‌ಗೆ ಇದು 142ನೇ ಏಕದಿನ ಪಂದ್ಯ. ಆಫ್ಘನ್ ವಿರುದ್ಧ 23 ರನ್‌ ಗಳಿಸಿದಾಗ ಈ ಸಾಧನೆ ಮಾಡಿದರು. 136 ಪಂದ್ಯಗಳಿಂದ 3,990 ರನ್‌ ಗಳಿಸಿರುವ ತಮೀಮ್‌ ಇಕ್ಬಾಲ್‌ ಎರಡನೇ ಸ್ಥಾನದಲ್ಲಿದ್ದಾರೆ.

ದಾಳಿ ನಡೆಸಿದ್ದು ಇದಕ್ಕೆ ಕಾರಣ. ಅನಾಮುಲ್‌ ಹಕ್‌ (29, 55 ಎಸೆತ) ಮತ್ತು ತಮೀಮ್‌ ಇಕ್ಬಾಲ್‌ (19, 42) ಮೊದಲ ವಿಕೆಟ್‌ಗೆ 47 ರನ್‌ ಸೇರಿಸಿದರು. ಆದರೆ ಇದಕ್ಕಾಗಿ 87 ಎಸೆತಗಳನ್ನು ತೆಗೆದುಕೊಂಡರು. ಮಿರ್‌ವೈಸ್‌ ಅಶ್ರಫ್‌ ಐದು ರನ್‌ಗಳ ಅಂತರದಲ್ಲಿ ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದರು.

ಸೌಮ್ಯ ಸರ್ಕಾರ್‌ (28) ಮತ್ತು ಮಹಮೂದುಲ್ಲಾ (23) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. 30ನೇ ಓವರ್‌ಗೆ ಬಾಂಗ್ಲಾ ನಾಲ್ಕು ವಿಕೆಟ್‌ಗೆ 119 ರನ್‌ ಗಳಿಸಿತ್ತು.

ಇವರಿಬ್ಬರು ಐದನೇ ವಿಕೆಟ್‌ಗೆ 114 ರನ್‌ಗಳ ಜತೆಯಾಟ ನೀಡಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು. ಬಿರುಸಿನ ಆಟವಾಡಿದ ಶಕೀಬ್‌ 51 ಎಸೆತಗಳನ್ನು ಎದುರಿಸಿದರು. 56 ಎಸೆತಗಳನ್ನು ಎದುರಿಸಿದ ಮುಷ್ಫಿಕರ್‌ ಕೆಲವೊಂದು ಮನಮೋಹಕ ಹೊಡೆತಗಳ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಇಬ್ಬರೂ ತಲಾ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಗಳಿಸಿದರು.

ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್‌ರೇಟ್‌ ಹೆಚ್ಚಿಸುವ ಭರದಲ್ಲಿ ಬೇಗನೇ ವಿಕೆಟ್‌ ಒಪ್ಪಿಸಿದರು. ಆಫ್ಘನ್‌ ಪರ ಹಮೀದ್‌ ಹಸನ್, ಶಾಪೂರ್‌ ಜದ್ರಾನ್‌, ಅಫ್ತಾಬ್‌ ಆಲಂ ಮತ್ತು ಮಿರ್‌ವೈಸ್‌ ಅಶ್ರಫ್‌ ತಲಾ ಎರಡು ವಿಕೆಟ್‌ ಪಡೆದರು.

ಆರಂಭದಲ್ಲೇ ಆಘಾತ: ಬಾಂಗ್ಲಾ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಆಫ್ಘನ್‌ಗೆ ಆರಂಭದಲ್ಲೇ ಆಘಾತ ಕಾದಿತ್ತು. ಮೂರು ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳು ಬಿದ್ದವು.

ಮಶ್ರಫೆ ಮೊರ್ತಜಾ (20ಕ್ಕೆ 3) ಆರಂಭದಲ್ಲೇ ಎದುರಾಳಿ ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದರು. ಜಾವೇದ್‌ ಅಹ್ಮದಿ, ಅಫ್ಸರ್‌ ಜಜಾಯ್‌ ಮತ್ತು ಅಸ್ಗರ್‌ ಸ್ಟಾನಿಕ್‌ಜಾಯ್‌ ತಲಾ ಒಂದು ರನ್‌ ಗಳಿಸಿ ಔಟಾದರು. 78 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡ ತಂಡ ಸೋಲಿನ ಹಾದಿ ಹಿಡಿಯಿತು.

ಸಮೀವುಲ್ಲಾ ಶೆನ್ವರಿ (42, 75 ಎಸೆತಮ 2 ಬೌಂ) ಮತ್ತು ಮೊಹಮ್ಮದ್‌ ನಬಿ (44, 43 ಎಸೆತ, 5 ಬೌಂ) ಅಲ್ಪ ಹೋರಾಟ ತೋರಿದರು. ಆದರೆ ಬಾಂಗ್ಲಾ ಬೌಲರ್‌ಗಳ ಮೇಲೆ ಒತ್ತಡ ಹೇರುವಷ್ಟು ಶಕ್ತಿ ಈ ಇನಿಂಗ್ಸ್‌ಗೆ ಇರಲಿಲ್ಲ. ಇವರು ಪ್ರತಿ ರನ್‌ ಗಳಿಸಲೂ ಸಾಕಷ್ಟು ಪರಿಶ್ರಮಪಟ್ಟರು.

ನಜೀಬುಲ್ಲಾ ಜದ್ರಾನ್‌ (17), ಮಿರ್‌ವೈಸ್‌ ಅಶ್ರಫ್‌ (10) ಮತ್ತು ಅಫ್ತಾಬ್‌ ಆಲಂ (14) ಬಾಂಗ್ಲಾ ತಂಡದ ಗೆಲುವನ್ನು ಅಲ್ಪ ತಡವಾಗಿಸಿದರು.

ಮೊರ್ತಜಾ ಮತ್ತು ಶಕೀಬ್‌ಗೆ ಉತ್ತಮ ಬೆಂಬಲ ನೀಡಿದ ರೂಬೆಲ್‌ ಹೊಸೇನ್‌, ತಸ್ಕಿನ್‌ ಅಹ್ಮದ್ ಹಾಗೂ ಮಹಮೂದುಲ್ಲಾ ತಲಾ ಒಂದು ವಿಕೆಟ್‌ ಪಡೆದರು.

ಬಾಂಗ್ಲಾದೇಶ: 50 ಓವರ್‌ಗಳಲ್ಲಿ 267

ಅನಾಮುಲ್‌ ಹಕ್‌ ಎಲ್‌ಬಿಡಬ್ಲ್ಯು ಬಿ ಮಿರ್‌ವೈಸ್‌ ಅಶ್ರಫ್‌  29
ತಮೀಮ್‌ ಇಕ್ಬಾಲ್‌ ಸಿ ಅಫ್ಸರ್‌ ಬಿ ಮಿರ್‌ವೈಸ್‌ ಅಶ್ರಫ್‌  19
ಸೌಮ್ಯ ಸರ್ಕಾರ್‌ ಎಲ್‌ಬಿಡಬ್ಲ್ಯು ಬಿ ಶಾಪೂರ್‌ ಜದ್ರಾನ್‌  28
ಮಹಮೂದುಲ್ಲಾ ಸಿ ಅಫ್ಸರ್‌ ಬಿ ಶಾಪೂರ್‌ ಜದ್ರಾನ್‌  23
ಶಕೀಬ್‌ ಅಲ್‌ ಹಸನ್‌ ಬಿ ಹಮೀದ್‌ ಹಸನ್‌  63
ಮುಷ್ಫಿಕರ್‌ ರಹೀಮ್‌ ಸಿ ಶೆನ್ವರಿ ಬಿ ಮೊಹಮ್ಮದ್‌ ನಬಿ  71
ಶಬ್ಬಿರ್‌ ರಹಮಾನ್‌ ಬಿ ಹಮೀದ್‌ ಹಸನ್‌  03
ಮಶ್ರಫೆ ಮೊರ್ತಜಾ ಬಿ ಅಫ್ತಾಬ್‌ ಆಲಂ  14
ಮೋಮಿನುಲ್‌ ಹಕ್‌ ರನೌಟ್‌  03
ರೂಬೆಲ್‌ ಹೊಸೇನ್‌ ಔಟಾಗದೆ  00
ತಸ್ಕಿನ್‌ ಅಹ್ಮದ್‌ ಬಿ ಅಫ್ತಾಬ್‌ ಆಲಂ  01
ಇತರೆ: (ಬೈ–3, ಲೆಗ್‌ಬೈ–4, ವೈಡ್‌–6)  13
ವಿಕೆಟ್‌ ಪತನ: 1–47 (ತಮೀಮ್‌; 14.3), 2–52 (ಅನಾಮುಲ್‌; 16.4),
3–102 (ಸರ್ಕಾರ್‌; 25.5), 4–119 (ಮಹಮೂದುಲ್ಲಾ; 29.1), 5–233 (ಶಕೀಬ್‌; 44.4), 6–241 (ಶಬ್ಬಿರ್‌; 46.5), 7–247 (ಮುಷ್ಫಿಕರ್‌; 47.3), 8–263 (ಮೋಮಿನುಲ್‌; 48.6), 9–263 (ಮೊರ್ತಜಾ; 49.1), 10–267 (ತಸ್ಕಿನ್‌; 49.6)
ಬೌಲಿಂಗ್‌: ಹಮೀದ್‌ ಹಸನ್ 10–0–61–2, ಶಾಪೂರ್‌ ಜದ್ರಾನ್‌ 7–1–20–2, ಅಫ್ತಾಬ್‌ ಆಲಂ 9–0–55–2, ಮಿರ್‌ವೈಸ್‌ ಅಶ್ರಫ್‌ 9–3–32–2, ಮೊಹಮ್ಮದ್‌ ನಬಿ 9–0–58–1, ಜಾವೇದ್‌ ಅಹ್ಮದಿ 4.5–0–32–0, ಸಮೀವುಲ್ಲಾ ಶೆನ್ವರಿ 1.1–0–2–0

ಆಫ್ಘಾನಿಸ್ತಾನ: 42.5 ಓವರ್‌ಗಳಲ್ಲಿ 162
ಜಾವೇದ್‌ ಅಹ್ಮದಿ ಸಿ ಮತ್ತು ಬಿ ಮಶ್ರಫೆ ಮೊರ್ತಜಾ  01
ಅಫ್ಸರ್‌ ಜಜಾಯ್‌ ಎಲ್‌ಬಿಡಬ್ಲ್ಯು ಬಿ ರೂಬೆಲ್‌ ಹೊಸೇನ್‌  01
ನೌರೋಜ್‌ ಮಂಗಲ್‌ ಸಿ ರೂಬೆಲ್‌ ಬಿ ಮಹಮೂದುಲ್ಲಾ  27
ಅಸ್ಗರ್‌ ಸ್ಟಾನಿಕ್‌ಜಾಯ್‌ ಸಿ ಮಹಮೂದುಲ್ಲಾ ಬಿ ಮಶ್ರಫೆ ಮೊರ್ತಜಾ  01
ಸಮೀವುಲ್ಲಾ ಶೆನ್ವರಿ ರನೌಟ್‌  42
ಮೊಹಮ್ಮದ್‌ ನಬಿ ಸಿ ಸರ್ಕಾರ್‌ ಬಿ ಮಶ್ರಫೆ ಮೊರ್ತಜಾ  44
ನಜೀಬುಲ್ಲಾ ಜದ್ರಾನ್‌ ಎಲ್‌ಬಿಡಬ್ಲ್ಯು ಬಿ ಶಕೀಬ್‌ ಅಲ್‌ ಹಸನ್‌  17
ಮಿರ್‌ವೈಸ್‌ ಅಶ್ರಫ್‌ ಸಿ ಶಬ್ಬಿರ್‌ ಬಿ ಶಕೀಬ್‌ ಅಲ್‌ ಹಸನ್‌  10
ಅಫ್ತಾಬ್‌ ಆಲಂ ರನೌಟ್‌  14
ಹಮೀದ್‌ ಹಸನ್‌ ಸಿ ಅನಾಮುಲ್‌ ಬಿ ತಸ್ಕಿನ್‌ ಅಹ್ಮದ್‌  00
ಶಾಪೂರ್‌ ಜದ್ರಾನ್‌ ಔಟಾಗದೆ  02
ಇತರೆ: (ಲೆಗ್‌ಬೈ–1, ವೈಡ್‌–2)  03
ವಿಕೆಟ್‌ ಪತನ: 1–2 (ಜಾವೇದ್‌ ಅಹ್ಮದಿ; 0.6), 2–2 (ಅಫ್ಸರ್‌; 1.1), 3–3 (ಸ್ಟಾನಿಕ್‌ಜಾಯ್‌; 2.6), 4–65 (ಮಂಗಲ್‌; 22.4), 5–78 (ಶೆನ್ವರಿ; 25.4), 6–136 (ನಜೀಬುಲ್ಲಾ; 36.6), 7–136 (ನಬಿ; 37.1), 8–154 (ಅಶ್ರಫ್‌; 40.6), 9–154 (ಹಮೀದ್‌; 41.5), 10–162 (ಅಫ್ತಾಬ್‌; 42.5)
ಬೌಲಿಂಗ್‌: ಮಶ್ರಫೆ ಮೊರ್ತಜಾ 9–2–20–3, ರೂಬೆಲ್‌ ಹೊಸೇನ್‌ 6–0–27–1, ತಸ್ಕಿನ್‌ ಅಹ್ಮದ್‌ 7–0–23–1, ಶಕೀಬ್‌ ಅಲ್‌ ಹಸನ್‌ 8.5–0–43–2, ಮಹಮೂದುಲ್ಲಾ 8–1–31–1, ಸೌಮ್ಯ ಸರ್ಕಾರ್‌ 3–0–13–0, ಶಬ್ಬಿರ್‌ ರಹಮಾನ್‌ 1–0–4–0
ಫಲಿತಾಂಶ: ಬಾಂಗ್ಲಾದೇಶಕ್ಕೆ 105 ರನ್‌ ಗೆಲುವು ಹಾಗೂ ಎರಡು ಪಾಯಿಂಟ್‌
ಪಂದ್ಯಶ್ರೇಷ್ಠ: ಮುಷ್ಫಿಕರ್‌ ರಹೀಮ್‌

ಶಕೀಬ್‌, ಮುಷ್ಫಿಕರ್‌ ಆಸರೆ
ಆಫ್ಘನ್‌ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವ ಸೂಚನೆ ನೀಡಿದ್ದರು. ಆದರೆ ಬಾಂಗ್ಲಾದ ಅನುಭವಿ ಆಟಗಾರರಾದ ಶಕೀಬ್‌ ಮತ್ತು ಮುಷ್ಫಿಕರ್‌ ಅಂತಹ ಸಾಧ್ಯತೆಯನ್ನು ದೂರ ಮಾಡಿದರು.

Write A Comment