ದುಬೈ, ಫೆ.18: ಅಲ್ ಇಸ್ಲಾಮಿಯ್ಯಾ ಯೂತ್ ಫೆಡರೇಷನ್ ದುಬೈ ಇದರ ಆಶ್ರಯದಲ್ಲಿ ಶುಕ್ರವಾರದಂದು(ಫೆ.13ರಂದು) ಮಮ್ಝಾರ್ ಗ್ರೌಂಡ್‌ನಲ್ಲಿ ನಡೆದ ‘ಅಲಿಫ್ ಟ್ರೋಫಿ-2015’ ಕ್ರಿಕೆಟ್ ಪಂದ್ಯಾಟದಲ್ಲಿ ಶನನ್ ಸ್ಟಾರ್ ದುಬೈ ತಂಡವು ಸೌಹಾರ್ದ ಮಂಗಳೂರು ತಂಡವನ್ನು ಸೋಲಿಸುವ ಮೂಲಕ ವಿಜಯಿತಂಡವಾಗಿ ಹೊರಹೊಮ್ಮಿದೆ.
ಎರಡನೆ ಬಾರಿ ಆಯೋಜಿಸಿದ್ದ ‘ಅಲಿಫ್ ಟ್ರೋಫಿ-2015’ರಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಶನನ್ ಸ್ಟಾರ್ ತಂಡದ ಕಪ್ತಾನ ಅಲ್ತಾಫ್, ಬೆಸ್ಟ್ ಬೌಲರ್ ಶನನ್ ಸ್ಟಾರ್‌ನ ಇಜಾಝ್, ಬೆಸ್ಟ್ ಬ್ಯಾಟ್ಸ್‌ಮೆನ್ ಇಮ್ರಾನ್ ಕನ್ನಂಗಾರ್ ಸೌಹಾರ್ದ ಇವರ ಪಾಲಾಯಿತು.
ಒಟ್ಟು 16 ತಂಡಗಳು ಪಂದ್ಯಾಕೂಟದಲ್ಲಿ ಸೆಣಸಾಟ ನಡೆಸಿದವು. ಪಂದ್ಯಾಟವನ್ನು ಅಬ್ದುಲ್ ಅಕ್ಬರ್ ಎಂ.ಬಿ.ಮಠ ಉದ್ಘಾಟಿಸಿದರು. ಇಸ್ಮಾಯೀಲ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ನಿರ್ಗತಿಕ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಹಾಗೂ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಪಂದ್ಯಾಕೂಟವನ್ನು ಆಯೋಜಿಸಲಾಗಿತ್ತು. ಪಂದ್ಯಾಕೂಟದಿಂದ ಬರುವ ಹಣವನ್ನೆಲ್ಲ ಸದುದ್ದೇಶಕ್ಕೆ ಹಾಗೂ ನಿರ್ಗತಿಕರ ಕಲ್ಯಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಅಲ್ ಇಸ್ಲಾಮಿಯ್ಯಾ ಯೂತ್ ಫೆಡರೇಷನ್ ದುಬೈ ಇದರ ಅಧ್ಯಕ್ಷ ಅಬ್ದುಲ್ ಸಮದ್ ಬಿರಾಲಿ ವಿವರಿಸಿದರು.ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಎಂ.ಸ್ವಾಗತಿಸಿದರು.
ಸಮಾರೋಪ ಸಮಾರಂಭವು ಅಬ್ದುಲ್ ಸಮದ್ ಬಿರಾಲಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಹ್ಮದ್ ಮುಂಬೈ, ಸೆಲಿಕತ್ ಎ.ಕೆ.ದೇವಾ, ತವಕ್ಕಲ್ ಓವರ್‌ಸೀಸ್ ದುಬೈ ಇದರ ಅಧ್ಯಕ್ಷರಾದ ಸಮೀರ್ ಎ.ಕೆ., ಕಾರ್ಯದರ್ಶಿ ಇಲಿಯಾಸ್ ವೈ.ಎಸ್., ಕೋಶಾಧಿಕಾರಿ ಅಬ್ದುರ್ರಝಾಕ್ ವೈ., ಮೊಹಮ್ಮದ್ ದಾವೂದ್, ಇಬ್ರಾಹೀಂ ದಾವೂದ್, ಅಬ್ದುರ್ರಹ್ಮಾನ್ ಶೇಖ್ ವೈ., ದುಬೈ ಇಂಡಿಯನ್ ಕಲ್ಚರಲ್ ಸೊಸೈಟಿಯ ಉಪಾಧ್ಯಕ್ಷ ಅಬ್ದುರ್ರಝಾಕ್ ವೈ.ಎಸ್., ಅಲ್‌ಅಮೀನ್ ಫಾರ್ಮಸಿಯ ಸುಲೇಮಾನ್, ಅಲ್‌ಕಮರ್ ವೆಲ್‌ಫೇರ್ ಅಸೇಸಿಯೇಶನ್‌ನ ಅಧ್ಯಕ್ಷರಾದ ರಫೀಕ್ ಕಾಪು, ಹೊಟೇಲ್ ಉದ್ಯಮಿ ಸೊಹಿಲ್ ಖಾದರ್ ಮುಂಬೈ, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಾವಾ ಅಬ್ದುಲ್ ಖಾದರ್ ಎಸ್.ಕೆ., ಅಬ್ದುಲ್ ಅಕ್ಬರ್ ಎಂ.ಬಿ., ಸಂಸ್ಥೆಯ ಗೌರವಾಧ್ಯಕ್ಷರಾದ ಸುಲೇಮಾನ್ ಎಂ.ಅರಫಾ, ಉಪಾಧ್ಯಕ್ಷರಾದ ಸಾದಿಕ್ ಸಾಬಾನ್ ಪೊಲ, ಕೋಶಾಧಿಕಾರಿ ಆಸಿಫ್ ಸಾಬನ್, ಕ್ರಿಕೆಟ್ ಪಂದ್ಯಾಟದ ಸಂಚಾಲಕರಾದ ಅಬ್ದುಲ್ ಗಫೂರ್ ಪರಂಗಿಪೇಟೆ, ಮುಝಮ್ಮಿಲ್ ಮಂಗಳೂರು ವಿಜಯಿ ತಂಡಕ್ಕೆ ಬಹುಮಾನ ನೀಡಿ ಗೌರವಿಸಿದರು. ತೀರ್ಪುಗಾರರಾಗಿ ರಫೀಕ್ ಮೂಲ್ಕಿ ಬಿಸಿಎಫ್ ಸಹಕರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ಹಾಗೂ ಆಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.