ಮನೋರಂಜನೆ

ಬಾಲಿವುಡ್‌ನಲ್ಲಿ ದುಬೈ ಹುಡುಗ: ತಹಾ ಶಾ

Pinterest LinkedIn Tumblr

du

ತಹಾ ಶಾ ದುಬೈ ಹುಡುಗ. ದುಬೈನಿಂದ ಮುಂಬಯಿಗೆ ಬಂದು ಬಾಲಿವುಡ್‌ಗೆ ಕಾಲಿಟ್ಟವನು. ಲವ್ ಕಾ ದಿ ಎಂಡ್ ಚಿತ್ರದ ಮೂಲಕ ಬಾಲಿವುಡ್‌ಗೆ ಡೆಬ್ಯೂ ಮಾಡಿದ ಹುಡುಗ. ಕೇವಲ 23 ವರ್ಷಕ್ಕೆ ಕುಟುಂಬದ ಸ್ಟೀಲ್ ಬಿಸ್ನೆಸ್‌ನಲ್ಲಿ ಬ್ಯುಸಿಯಾಗಿದ್ದವ. ಇದೀಗ ಬಾಲಿವುಡ್‌ನಲ್ಲಿ ತನ್ನ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾನೆ. ಮೊದಲ ಬಾರಿಗೆ ಆಂಟಿ ರೊಮ್ಯಾಂಟಿಕ್ ಹುಡುಗನ ಪಾತ್ರದಲ್ಲಿ ಮುಗ್ಧವಾಗಿ ನಟಿಸಿದ್ದು ಕೆಲವರಿಗೆ ಇಷ್ಟವಾಗಿದೆ.

ದೂರದ ಮುಂಬಯಿಯಿಂದಲೇ ಆನ್‌ಲೈನ್ ಚಾಟ್ ಮೂಲಕ ಮಾತನಾಡಿದ ತಹಾ ಶಾ ಹೇಳುವುದು ಹೀಗೆ. Unless you taste the floor you will never know the difference between the floor and the sky.

ಅಂದಹಾಗೆ, ತಹಾ ಶಾ ಹುಟ್ಟಿದ್ದು ಹಾಗೂ ಓದಿದ್ದೆಲ್ಲಾ ಅಬುದಾಬಿಯಲ್ಲಿ. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದು, ಬಾಲಿವುಡ್‌ನತ್ತ ತಿರುಗಲು ಕಾರಣವಾಯಿತಂತೆ. ಮುಂಬಯಿಯಲ್ಲಿ ಕೆಲಕಾಲ ತಿರುಗಾಡಿ ಕೊನೆಗೂ ಯಶ್‌ರಾಜ್ ಬ್ಯಾನರ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಹುಡುಗ. ವಿಪರ್ಯಾವೆಂದರೇ ಲವ್ ಕಾ ದಿ ಎಂಡ್‌ನಲ್ಲಿ ಪಾತ್ರ ದೊರಕಿತಾದರೂ ಹೆಸರೇನೂ ತಂದು ಕೊಡಲಿಲ್ಲ. ಬದಲಿಗೆ ಬಾಲಿವುಡ್ ಜನರು ಗುರುತಿಸುವಂತಾಯಿತು ಎನ್ನುತ್ತಾರೆ ತಹಾ ಶಾ.

* ದುಬೈನಿಂದ ಬಾಲಿವುಡ್‌ಗೆ ಕಾಲಿಡುವ ಮುನ್ನ ಆದ ಅನುಭವವೇನು?

ಮುಂಬಯಿಗೆ ಬಂದಾಗ ನನಗೆ ಒಂದೇ ಒಂದು ರಸ್ತೆ ಕೂಡ ಗೊತ್ತಿರಲಿಲ್ಲ. ಯಾರೂ ಪರಿಚಯವಿರಲಿಲ್ಲ. ಆಡಿಷನ್ ಎಂದೆಲ್ಲಾ ಆಟೋದಲ್ಲಿ ಓಡಾಡುತ್ತಿದ್ದೆ. ಮುಖದ ಮೇಲಿನ ಬೆವರು ಹಾಗೂ ಧೂಳು ಒರೆಸಿಕೊಂಡು ತಿರುಗಾಡುತ್ತಿದ್ದೆ.

* ಇದೀಗ ನೀವು ನಟಿಸಿದ ಜಿಪ್ಪಿ ಸಿನಿಮಾ ಮಕ್ಕಳ ಸಿನಿಮಾ ಎನ್ನುತ್ತಿದ್ದರಲ್ಲಾ?

ಇಲ್ಲ! ಇದು ಟೀನೇಜ್ ಹುಡುಗ-ಹುಡುಗಿಯರ ಸ್ಟೋರಿಲೈನ್ ಹೊಂದಿರುವ ಸಿನಿಮಾ. ನನ್ನ ರೋಲ್ ಕೂಡ ಚಿತ್ರಕ್ಕೆ ಹೊಂದುವಂತಿದೆ.

* ಉದ್ಯಮಿಯಾಗಿ ಬೆಳೆಯಬೇಕಾಗಿದ್ದ ನೀವು ಸಿನಿಮಾ ಇಂಡಸ್ಟ್ರಿ ಆರಿಸಿಕೊಂಡದ್ದಕ್ಕೆ ಸಂತಸವಿದೆಯೇ!

ಖಂಡಿತಾ. ದುಬೈನ ಅಂಟ್ಲಾಂಟಿಕ್ ರೆಸ್ಟೋರೆಂಟ್‌ನಲ್ಲಿ ಎಸಿ ರೂಮ್‌ನಲ್ಲಿ ಲಂಚ್-ಡಿನ್ನರ್ ಮಾಡುತ್ತಿದ್ದ ಹುಡುಗ ನಾನು. ನಮ್ಮಮ್ಮ ನಮ್ಮ ಬಿಸ್ನೆಸ್‌ನ ಟ್ರೈನಿಂಗ್ ಕ್ಯಾಂಪ್‌ಗೆಂದು ಕಳುಹಿಸಿದ್ದಾಗಲೇ ಹೈದಾರಬಾದ್‌ನ ಒಂದು ಹಳ್ಳಿಗೆ ವಿಸಿಟ್ ಹಾಕಿ ಅಲ್ಲಿಯೇ ಕೆಲಕಾಲ ಸಮಯ ಕಳೆದಿದ್ದೆ. ಬಿಸಿಲಲ್ಲಿ ಮರದ ಕೆಳಗೆ ಊಟ ಮಾಡಿದ್ದ ಅನುಭವ ಇಂದಿಗೂ ನೆನಪಿನಲ್ಲಿದೆ. ಕಷ್ಟಪಟ್ಟು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ನಮ್ಮಮ್ಮನ ಆಸೆ. ಪರಿಚಯವಿಲ್ಲದ ಸಿನಿಮಾ ರಂಗದಲ್ಲೂ ಆಡಿಷನ್ ಎಂದೆಲ್ಲಾ ತಿರುಗಾಡಿ ಕೊನೆಗೆ ಅವಕಾಶ ಪಡೆದೆ. ಈ ಬಗ್ಗೆ ನನಗೆ ಸಮಾಧಾನವಿದೆ.

* ಚೈನೀಸ್ ಮಾರ್ಷಲ್ ಆರ್ಟ್ ವುಷು ಎಕ್ಸ್‌ಪರ್ಟ್ ನೀವಂತೆ?

ಹೌದು, ಮೊದಲೇ ಈ ಬಗ್ಗೆ ಟ್ರೈನಿಂಗ್ ಪಡೆದಿದ್ದೆ. ಚಾಕೋಲೆಟ್ ಫೇಸ್ ನಿನ್ನದು ಎಂದು ನಿರ್ದೇಶಕರು ಮೊದಲಿಗೆ ಕಾಲೇಜು ಹುಡುಗನ ಪಾತ್ರ ನೀಡಿದರು. ಮುಂದೊಮ್ಮೆ ಆಕ್ಷನ್ ಪಾತ್ರ ಸಿಕ್ಕರೇ, ಮಾರ್ಷಲ್ ಆರ್ಟ್ ಪ್ರಯೋಗಿಸುವ ಇರಾದೆ ನನಗಿದೆ.

* ನೀವು ಆಕ್ಟರ್ ಆಗಿರದಿದ್ದರೇ, ಬಿಸ್ನೆಸ್‌ನಲ್ಲಿರುತ್ತಿದ್ದೀರಾ?ಇಲ್ಲ, ಏನಾಗಿರುತ್ತಿದ್ದೀರಿ?

ಜಿಮ್ ಆರಂಭಿಸಿ, ಜಿಮ್ ಒನರ್ ಆಗಿರುತ್ತಿದೆ.

* ನೀವು ಬಿಟ್ಟಿರಲಾಗದ ಮೂರು ವಸ್ತುಗಳು?

ಬ್ಯಾಗ್, ಮೊಬೈಲ್ ಹಾಗೂ ಫೈಲ್.

Write A Comment