ಮನೋರಂಜನೆ

ಆನ್‌ಲೈನ್‌ ಶಾಪಿಂಗ್‌ ಪ್ರಿಯೆ… ಸ್ಯಾಂಡಲ್‌ವುಡ್ ನಟಿ ಸಿಂಧೂ ಲೋಕನಾಥ್

Pinterest LinkedIn Tumblr

shindu

ಸಿನಿಮಾದಲ್ಲಿ ಕಲರ್‌ಫುಲ್ ಆಗಿ ಕಾಣಿಸುತ್ತಾ, ರಿಯಲ್ ಲೈಫ್ನಲ್ಲಿ ಸೀದಾ ಸಾದಾ ಹುಡುಗಿಯಂತೆ ಕಾಣುವ ಲಿಸ್ಟ್‌ಗೆ ಸ್ಯಾಂಡಲ್‌ವುಡ್ ನಟಿ ಸಿಂಧೂ ಲೋಕನಾಥ್ ಸೇರುತ್ತಾರೆ.

ಈ ಜನರೇಷನ್‌ನ ಫ್ಯಾಷನ್ ಕಾನ್ಸೆಪ್ಟ್‌ಗೆ ಮ್ಯಾಚ್ ಆಗುವಂತೆ ಕಾಣುವ ಸಿಂಧೂ ಲೋಕನಾಥ್ ತೀರಾ ಸಿಂಪಲ್ ಹುಡುಗಿ. ವೆಸ್ಟರ್ನ್ ಔಟ್‌ಫಿಟ್ ಹಾಗೂ ಕ್ಯಾಶುವಲ್‌ಗಳಲ್ಲಿ ಸದಾ ನೋಡಬಹುದಾದ ಹುಡುಗಿ. ಮೇಕಪ್ ಇಲ್ಲದೇ ಇರುವ ಬೆಡಗಿ. ಹೌದು. ಸಿಂಧೂ ಲೋಕನಾಥ್ ಲೈಫ್‌ಸ್ಟೈಲ್ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ಗಳೇ ಹಾಗಿವೆ. ಹೆಚ್ಚಾಗಿ ಅಬ್ಬರವಿಲ್ಲದ ಡೈಲಿ ರೂಟಿನ್ ಇವರ ದಿನಚರಿಯಲ್ಲಿದೆ. ಅಂದಹಾಗೆ, ನಟಿ ಸಿಂಧೂಲೋಕನಾಥ್ ವಾರ್ಡ್‌ರೋಬ್ ಕಾಲಂಗಾಗಿ ಲವಲವಿಕೆಯೊಂದಿಗೆ ಚಾಟ್ ಮಾಡಿದರು. ತಮ್ಮ ಇಷ್ಟ-ಕಷ್ಟ ಹಾಗೂ ಫ್ಯಾಷನ್ ಪ್ಯಾಷನ್‌ಗಳ ಬಗ್ಗೆ ಮಾತನಾಡಿದರು.

ಆನ್‌ಲೈನ್ ಶಾಪಿಂಗ್ ಕ್ರೇಝ್
ಸಿಂಧೂ ಅವರಿಗೆ ಓಡಾಡುತ್ತಾ ಶಾಪಿಂಗ್ ಮಾಡುವುದು ಬೋರಂತೆ. ಇದು ವೇಸ್ಟ್ ಆಫ್ ಟೈಮ್ ಹಾಗೂ ಎನರ್ಜಿ ಲಾಸ್ ಎನ್ನುತ್ತಾರೆ ಅವರು. ಅವರ ಪ್ರಕಾರ, ಮನೆಯಲ್ಲೆ ಕುಳಿತು ಆನ್‌ಲೈನ್ ಶಾಪಿಂಗ್ ಮಾಡುವುದು ಗುಡ್ ಅಂತೆ. ‘ಬೇಕಾದ್ದು ಸೆಲೆಕ್ಟ್ ಮಾಡಬಹುದು. ತಿರುಗಾಡುವ ಜಂಜಾಟವಿಲ್ಲ. ಸೋ ಐ ಪ್ರಿಫರ್ ಆನ್‌ಲೈನ್ ಶಾಪಿಂಗ್. ನನಗೆ ಬೇಕಾದ್ದನ್ನು ಆನ್‌ಲೈನ್‌ನಿಂದಲೇ ತರಿಸಿಕೊಳ್ಳುತ್ತೇನೆ ಎನ್ನುತ್ತಾರೆ ಅವರು. ಟ್ರೆಂಡ್‌ನಲ್ಲಿರುವುದನ್ನು ಮೊದಲೇ ತಿಳಿದಿರುತ್ತೇನೆ. ಇನ್ನು ಆನ್‌ಲೈನ್‌ನಲ್ಲಿ ಟ್ರೆಂಡಿಯಾಗಿರುವುದೇ ಹೆಚ್ಚು ಡಿಸ್‌ಪ್ಲೇ ಇರುತ್ತದೆ. ಔಟ್ ಆಫ್ ಟ್ರೆಂಡ್ ಇರುವುದಿಲ್ಲ. ಇದು ಆನ್‌ಲೈನ್ ಶಾಪಿಂಗ್‌ನ ಪ್ಲಸ್ ಪಾಯಿಂಟ್ ಎನ್ನುತ್ತಾರೆ.

ರ‌್ಯಾಂಪ್‌ಗಿಂತ ಸಿನಿಮಾ ಬೆಸ್ಟ್
ಇದುವರೆಗೂ ಒಂದಷ್ಟು ಪ್ರಿಂಟ್ ಆ್ಯಡ್ಸ್ ಮಾಡಿದ್ದೇನೆ. ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ಒಮ್ಮೆ ರ‌್ಯಾಂಪ್ ತುಳಿದಿರುವ ಅನುಭವ ಇದೆ ಹೊರತು ಹೆಚ್ಚು ಅನುಭವವಿಲ್ಲ. ರ‌್ಯಾಂಪ್‌ಗಿಂತ ಸಿನಿಮಾ ಬೆಸ್ಟ್ ಎನ್ನುತ್ತಾರೆ ಅವರು. ರ‌್ಯಾಂಪ್‌ನಲ್ಲಿ ನಮ್ಮ ಮೇಲೆ ಎಕ್ಸ್‌ಪೇರಿಮೆಂಟ್ಸ್ ಮಾಡುತ್ತಾರೆಯೇ ಹೊರತು ನಮ್ಮ ಸ್ವಂತ ಪ್ರತಿಭೆ ಕೆಲಸ ಮಾಡುವುದಿಲ್ಲ. ಹಾಗಾಗಿ ನನಗೆ ಸಿನಿಮಾದಲ್ಲಿ ಆ್ಯಕ್ಟ್ ಮಾಡುವುದೇ ಖುಷಿ ನೀಡುತ್ತದೆ ಎನ್ನುತ್ತಾರೆ.

ಪಾರ್ಟಿವೇರ್ ವರ್ಸಸ್ ದೇಸಿ ಲುಕ್
ಇನ್ನು ಪಾರ್ಟಿವೇರ್‌ಗೆ ನಾನು ಪ್ರಿಫರ್ ಮಾಡುವುದು ಕಾಕ್‌ಟೇಲ್ ಡ್ರೆಸ್‌ಗಳನ್ನು. ಅದರಲ್ಲೂ ನನಗೆ ಪರ್ಪಲ್ ಶೇಡ್ಸ್ ತುಂಬಾ ಇಷ್ಟವಾಗುತ್ತದೆ. ಸ್ಯಾಂಡಲ್ಸ್ ಬಗ್ಗೆ ಅಷ್ಟಾಗಿ ಕ್ರೇಝ್ ಇಲ್ಲ. ಶೂ ಹಾಗೂ

ಜಾಕೆಟ್ಸ್ ಕಲೆಕ್ಷನ್ ನನ್ನ ಬಳಿ ಇದೆ ಎನ್ನುವ ಸಿಂಧೂ ಅವರಿಗೆ ಜುವೆಲ್ಸ್ ಬಗ್ಗೆ ಮೋಹವಿಲ್ಲ. ಕ್ಯೂಟ್ ಆಗಿರುವ ಪುಟ್ಟ ಪುಟ್ಟ ಸ್ಟಡ್ಸ್ ಅಂದ್ರೆ ಇಷ್ಟಪಡುತ್ತಾರಂತೆ.

ಇನ್ನು ದೇಸಿ ಲುಕ್ ಬಗ್ಗೆ ಕೇಳಿದರೇ, ಅವರ ಚಾಯ್ಸ್ ಹೀಗಿದೆ. ನನಗಂತೂ ಲೈಟ್ ವೇಟ್ ಹಾಗೂ ಕಾಟನ್ ಸೀರೆಗಳಿಷ್ಟ. ಹೆವ್ವಿ ಡಿಸೈನ್‌ಗಳದ್ದು ಇಷ್ಟವಾಗುವುದಿಲ್ಲ ಎನ್ನುತ್ತಾರೆ.

ಇನ್ನು ಸ್ಲಿಮ್ ಬ್ಯಾಗ್ ಕೂಡ ಅಷ್ಟೇ ನನಗಿಷ್ಟ ಎನ್ನುವ ಸಿಂಧೂ ಅವರ ಬಳಿ ಸಾಕಷ್ಟು ಕಲೆಕ್ಷನ್ ಇದೆಯಂತೆ. ಸದಾ ಇವನ್ನು ತಗುಲಿಹಾಕಿಕೊಂಡು ಓಡಾಡುತ್ತಾರೆ.

ಬ್ಯೂಟಿ ಸೀಕ್ರೇಟ್
ಸಿಂಧೂ ಲೋಕನಾಥ್ ಅವರ ಬ್ಯೂಟಿ ಸಿಕ್ರೇಟ್ ಏನು ಗೊತ್ತೇ! ಪಪ್ಪಾಯ ಪ್ಯಾಕ್. ಹೌದು. ಅವರು ಹೇಳೊದರಲ್ಲೂ ನಿಜವಿದೆ. ಪಪ್ಪಾಯ ಪ್ಯಾಕ್ ನಿಜಕ್ಕೂ ಅದ್ಭುತ ಎಫೆಕ್ಟ್ ನೀಡುತ್ತದೆ. ಸನ್ ಬರ್ನ್ ಕೂಡ ಮಾಯವಾಗುತ್ತದೆ. ಮುಖವನ್ನು ಕಾಂತಿಯುಕ್ತಗೊಳಿಸುತ್ತದೆ. ಸಿಂಧೂ ಸಮಯ ಸಿಕ್ಕಾಗಲೆಲ್ಲಾ ಪಪ್ಪಾಯ ಫೇಸ್‌ಸ್ಕ್ರಬ್ ಹಾಗೂ ಪ್ಯಾಕ್ ಹಾಕುತ್ತಾರಂತೆ. ಕೂದಲಿಗೆ ಹರಳೆಣ್ಣೆ ಹಾಗೂ ಕೊಬ್ಬರಿ ಎಣ್ಣೆ ಹಚ್ಚುತ್ತಾರಂತೆ.

ಫಿಟ್‌ನೆಸ್ ಮಂತ್ರ
ಅಮ್ಮ ಮಾಡುವ ವೆಜಿಟೆಬಲ್ ಜ್ಯೂಸ್ ಡಯಟ್ ಲಿಸ್ಟ್‌ನಲ್ಲಿದೆ. ಮನೆಯಲ್ಲಿರುವ ಥ್ರೆಡ್‌ಮಿಲ್ ಮೇಲೆ ಓಡುತ್ತೇನೆ ಹಾಗೂ ಟಮ್ಮಿ ಕರಗಿಸಲು ಉಪಯೋಗವಾಗುವಂತಂಹ ಕೆಲವು ಯೋಗದ ಆಸನಗಳನ್ನು ಮಾಡುತ್ತೇನೆ ಎನ್ನುವ ಸಿಂಧೂ ಅವರು ಸ್ಲಿಮ್ ಆಗಿರುವುದು ಗಾಡ್ ಗಿಫ್ಟ್ ಎಂದು ಖುದ್ದು ಪ್ರಶಂಸಿಕೊಳ್ಳುತ್ತಾರೆ.

Write A Comment