ರಾಷ್ಟ್ರೀಯ

ದೇಶದಲ್ಲಿ ಇಡೀ ದಿನವನ್ನು ಜನ ಹೇಗೆ ಕಳೆಯುತ್ತಾರೆ?

Pinterest LinkedIn Tumblr

life

ಹೊಸದಿಲ್ಲಿ: ದೇಶದಲ್ಲಿ ಜನ 24 ತಾಸುಗಳನ್ನು ಹೇಗೆ ಕಳೆಯು ತ್ತಾರೆ ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಅಂಕಿ ಅಂಶ ಸಹಿತವಾಗಿ ಉತ್ತರ ದೊರೆಯಲಿದೆ. ಸರಕಾರ ಸದ್ಯದಲ್ಲೇ ಈ ಕುರಿತು ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಲಿದೆ. ಮಕ್ಕಳು ಇಡೀ ದಿನ ಏನು ಮಾಡುತ್ತಿರು ತ್ತಾರೆ, ಪೋಷಕರು ಹೇಗೆ ಸಮಯ ಕಳೆಯುತ್ತಾರೆ, ಮಹಿಳೆಯರ ದಿನಚರಿ ಏನು ಎಂಬ ವಿಷಯಗಳ ಮೇಲೆ ಸಮೀಕ್ಷೆ ಬೆಳಕು ಚೆಲ್ಲಲಿದೆ.

ಕಲಿಕೆ ಅಭ್ಯಾಸದಲ್ಲಿ ಮಕ್ಕಳು ಎಷ್ಟು ತಾಸು ತೊಡ ಗಿ ಕೊಳ್ಳುತ್ತಾರೆ? ಟಿವಿ, ಇಂಟೆರ್ನೆಟ್, ಫೋನ್‌ನಲ್ಲೇ ಎಷ್ಟು ಹೊತ್ತು ಮುಳುಗಿರುತ್ತಾರೆ ಎಂಬ ಮಾಹಿತಿ ದೊರೆಯ ಲಿದೆ. ಇದರಿಂದ ಈ ಕುರಿತ ಚರ್ಚೆಗೆ ಮತ್ತಷ್ಟು ಪೂರಕ ಮಾಹಿತಿ ಒದಗಲಿದೆ.

ಕೇಂದ್ರೀಯ ಅಂಕಿ ಅಂಶ ಕಚೇರಿಯ ಸಮೀಕ್ಷೆಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಅಡುಗೆ, ಮನೆ ಸ್ವಚ್ಛತೆ, ಮಕ್ಕಳ ಹೋಂವರ್ಕ್, ಪತಿಯ ಬಟ್ಟೆ ಇಸ್ತ್ರಿ ಮಾಡುತ್ತಾ ದಿನ ಕಳೆಯುವ ಮಹಿಳೆಯರ ಕೆಲಸ ಕಾರ್ಯಗಳನ್ನು ಅನೇಕ ಅಧ್ಯಯನಗಳು ಕಡೆಗಣಿಸುವುದರಿಂದ ಈ ವಿಷಯಗಳ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ಕಲೆ ಹಾಕಲಾಗುವುದು. ”ಮಕ್ಕಳನ್ನು ಶಾಲೆಯಿಂದ ಕರೆತರಲು ವಾಹನ ಚಾಲನೆ, ಅಡುಗೆ, ಹೊಲಿಗೆ ಮುಂತಾದ ನಾನಾ ಕೆಲಸಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರ ಕೆಲಸ ಒಟ್ಟು ಆಂತರಿಕ ಉತ್ಪನ್ನದ ಲೆಕ್ಕಾಚಾರಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ” ಎಂದು ಅರ್ಥ ಶಾಸ್ತ್ರಜ್ಞ ಎಸ್.ಆರ್. ಹಶೀಮ್ ಹೇಳಿದ್ದಾರೆ. ಜೂಜು, ಸಿನಿಮಾ ವೀಕ್ಷಣೆ, ಸಂದರ್ಶನಕ್ಕಾಗಿ ಸಿದ್ಧತೆ, ಯೋಗ, ಪೆಗ್ ಏರಿಸುವುದು ಸೇರಿದಂತೆ ಸಮೀಕ್ಷೆಗಾಗಿ 1000 ಕ್ಕೂ ಹೆಚ್ಚು ಚಟುವಟಿಕೆಗಳನ್ನು ಗುರುತಿಸಿರುವ ಸಮಿತಿಯ ನೇತೃತ್ವ ವಹಿಸಿರುವ ಹಶೀಮ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಮೀಕ್ಷೆ ಏಕೆ? ಅಭಿವೃದ್ಧಿಯ ಗುಣಮಟ್ಟವನ್ನು ತಿಳಿಯುವ ಉದ್ದೇಶದಿಂದ ದೇಶದಲ್ಲಿ ಜನ 24 ತಾಸು ಹೇಗೆ ಕಳೆಯುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆ (ಎನ್‌ಎಸ್‌ಎಸ್‌ಓ) ಅಥವಾ ಹೊರಗಿನ ಸಂಸ್ಥೆ ಸಮೀಕ್ಷೆ ನಡೆಸಲಿದೆ. ಸಮಯದ ಬಳಕೆಯ ಸಮೀಕ್ಷೆಯಿಂದ ಜೀವನಮಟ್ಟ ಹಾಗೂ ಸಾಮಾಜಿಕ ಭದ್ರತೆ, ಕೆಲಸದ ಹಂಚಿಕೆ, ಮನೆ ಕೆಲಸಗಳಿಗೆ ಮೀಸ ಲಿಡುವ ಸಮಯ, ಸಾರಿಗೆ, ವಿಶ್ರಾಂತಿ, ಮನ ರಂಜನೆ, ಪಿಂಚಣಿ ಯೋಜನೆ, ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ದೊರೆ ಯ ಲಿದೆ. ”ಗುಜರಾತ್ ಹಾಗೂ ಬಿಹಾರದಲ್ಲಿ ಪ್ರಾಯೋ ಗಿಕವಾಗಿ ನಡೆಸಿದ ಸಮೀಕ್ಷೆಯನ್ನು ಆಧ ರಿಸಿ ಪ್ರಶ್ನಾವಳಿಗಳನ್ನು ಸಿದ್ಧ ಪಡಿಸಲಾಗಿದೆ. ಈ ಸಮೀಕ್ಷೆ ಹಲವು ಅಧ್ಯಯನಗಳಿಗೆ ಆಧಾರವಾಗ ಲಿದ್ದು, ಹಲವು ವಿದ್ಯಮಾನಗಳ
ಮೇಲೆ ಬೆಳಕು ಚೆಲ್ಲುವ ಜತೆಗೆ ಹಲವು ತಪ್ಪು ಕಲ್ಪನೆಗಳನ್ನು ಹೋಗಲಾ ಡಿಸಲಿವೆ,” ಎಂದು ಹಶೀಮ್ ತಿಳಿಸಿದ್ದಾರೆ.

ನಾನಾ ಮಾಹಿತಿಗಳು ಬಹಿರಂಗ: ಸಹಜವಾಗಿ ಸಾಮಾಜಿಕ ಮಾಧ್ಯಮಗಳ ಬಳಕೆ ಸಮಯವೂ ಪ್ರಶ್ನಾವ ಳಿಯ ಭಾಗವಾಗಿರಲಿದೆ. ದಿನದಲ್ಲಿ ಎಷ್ಟು ತಾಸು ವಾಟ್ಸ್ ಅಪ್ ಅಥವಾ ಫೇಸ್‌ಬುಕ್ ಬಳಕೆಗೆ ಮೀಸಲಿಡುತ್ತಾರೆ ಎಂಬ ಮಾಹಿತಿ ತಿಳಿಯಲಿದೆ. ಉಳಿದ ಉತ್ತರಗಳಿಂದ ಸ್ತ್ರೀ ಪುರುಷರ ನಡುವಿನ ವ್ಯತ್ಯಾಸ ಹಾಗೂ ಸಾಮ್ಯತೆಯೂ ತಿಳಿಯಲಿದೆ. ಅಂದರೆ ಶಾಪಿಂಗ್‌ನಲ್ಲಿ ಪುರುಷರು ಹೆಚ್ಚು ಕಾಲ ಕಳೆಯುವರೋ ಅಥವಾ ಮಹಿಳೆಯರಂತೆ ದೇಹ ಪೋಷಣೆಗೆ ಹೆಚ್ಚು ಸಮಯ ಮೀಸಲಿಡುವರೋ ಎಂದು ತಿಳಿಯಲಿದೆ. ಏನೂ ಮಾಡದೇ ಸುಮ್ಮನೆ ಎಷ್ಟು ಹೊತ್ತು ಕಳೆಯತ್ತಾರೆ? ಎಂಬ ಬಗ್ಗೆಯೂ ಸಮೀಕ್ಷೆ ಬೆಳಕು ಚೆಲ್ಲಲಿದೆ.

Write A Comment