ಮನೋರಂಜನೆ

ಏಕದಿನ ಸರಣಿ; ಮೆಲ್ಬರ್ನ್‍ನಲ್ಲಿ ಟೀಂ ಇಂಡಿಯಾಗೆ ಸೋಲು

Pinterest LinkedIn Tumblr

astr

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ 4 ವಿಕೆಟ್‍ಗಳ ಜಯ ಸಾಧಿಸಿದೆ. ಸರಣಿಯಲ್ಲಿ ಭಾರತಕ್ಕೆ ಇದು ಮೊದಲ ಪಂದ್ಯವಾಗಿತ್ತು.

268 ರನ್‍ಗಳ ಟಾರ್ಗೆಟ್ ಬೆಂಬತ್ತಿದ ಕಾಂಗರೂಗಳು 49 ಓವರ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿ ಗುರಿ ತಲುಪಿದರು.

ಆಸ್ಟ್ರೇಲಿಯಾ ಪರವಾಗಿ ಆರಂಭಿಕ ಆಟಗಾರ ಫಿಂಚ್ ಶತಕ ವಂಚಿತರಾದರು. 127 ಎಸೆತಗಳಲ್ಲಿ 96 ರನ್ ಗಳಿಸಿದ ಫಿಂಚ್ 40ನೇ ಓವರ್‍ನಲ್ಲಿ ಔಟಾದರು. ವಾರ್ನರ್ 24, ವ್ಯಾಟ್ಸನ್ 41, ಸ್ಮಿತ್ 47, ಬೈಲಿ 5, ಮ್ಯಾಕ್ಸ್‍ವೆಲ್ 20, ಹ್ಯಾಡಿನ್ 13 ಹಾಗೂ ಫೌಲ್ಕನರ್ 9 ರನ್ ಗಳಿಸಿದರು.
ಭಾರತದ ಬೌಲರ್ ಉಮೇಶ್ ಯಾದವ್ 2 ವಿಕೆಟ್ ಗಳಿಸಿದರೆ, ಶಮಿ, ಅಕ್ಷರ್ ಪಟೇಲ್, ಅಶ್ವಿನ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಗಳಿಸಿದರು.

ಭಾರತದ 267 ರನ್‍ಗೆ ಪ್ರತಿಯಾಗಿ ಆಟ ಆರಂಭಿಸಿದ ಆಸ್ಟ್ರೇಲಿಯಾ ಮೊದಲ ವಿಕೆಟ್‍ಗೆ ವಾರ್ನರ್ ಹಾಗೂ ಫಿಂಚ್ 51 ರನ್‍ಗಳ ಜೊತೆಯಾಟ ನೀಡಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು. ಮೊದಲ 10 ಓವರ್‍ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 45 ರನ್ ಮಾತ್ರ ಗಳಿಸಿತ್ತು. ಆದರೆ ಪಂದ್ಯ ಸಾಗುತ್ತಿದ್ದಂತೆ ಬ್ಯಾಟಿಂಗ್ ಚುರುಕಾಗಿಸಿದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ 139 ಎಸೆತಗಳಲ್ಲಿ 138 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‍ಗಳು ಒಳಗೊಂಡಿದ್ದವು.

ರೋಹಿತ್‍ಗೆ ಸುರೇಶ್ ರೈನಾ ಉತ್ತಮ ಸಾಥ್ ನೀಡಿದರು. ರೈನಾ 63 ಎಸೆತಗಳಲ್ಲಿ 6 ಬೌಂಡರಿಗಳ ಜೊತೆ 51 ರನ್ ಗಳಿಸಿ ಅರ್ಧ ಶತಕ ಸಿಡಿಸಿದರು. 4ನೇ ವಿಕೆಟ್‍ಗೆ ಇಬ್ಬರೂ ಸೇರಿ 110 ಎಸೆತಗಳಲ್ಲಿ 100 ರನ್‍ಗಳ ಜೊತೆಯಾಟ ನೀಡಿದರು.

ಅಜಿಂಕ್ಯಾ ರಹಾನೆ 12 (22 ಎಸೆತ), ಧೋನಿ 19 (31), ಅಶ್ವಿನ್ 14 (20), ಶಮಿ 2 (3), ಶಿಖರ್ ಧವನ್ 2 (4) ರನ್ ಗಳಿಸಿದರು.
ಆಸ್ಟ್ರೇಲಿಯಾ ಪರವಾಗಿ ಸ್ಟಾರ್ಕ್ 6 ವಿಕೆಟ್ ಗಳಿಸಿದರು. ಜಿ.ಎಸ್. ಸಂಧು ಹಾಗೂ ಫೌಲ್ಕನರ್ ತಲಾ 1 ವಿಕೆಟ್ ಗಳಿಸಿದರು. ಜಿ.ಎಸ್.ಸಂಧು ಇಂದು ಭಾರತ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು.

Write A Comment