ಸಿಡ್ನಿ, ಜ.12: ಭಾರತದ ಕ್ರಿಕೆಟ್ ತಂಡದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಸೋಮವಾರ ಇಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್ರನ್ನು ಭೇಟಿಯಾದರು. ನಾನು ಈ ದಿನವನ್ನು ಮರೆಯಲಾರೆ. ರೋಜರ್ ಫೆಡರರ್ ಸ್ಪಷ್ಟವಾಗಿ ಓರ್ವ ದಂತಕತೆ ಎಂದು 17 ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ವಿಜೇತ ಫೆಡರರ್ರನ್ನು ಭೇಟಿಯಾದ ನಂತರ ಕೊಹ್ಲಿ ಟ್ವೀಟ್ ಮಾಡಿದರು.
ಕೊಹ್ಲಿ ಅವರು ಫೆಡರರ್ರನ್ನು ಭೇಟಿಯಾಗಿದ್ದಲ್ಲದೆ ಅವರೊಂದಿಗೆ ಫೋಟೊಕ್ಕೆ ಪೋಸ್ ನೀಡಿದರು. ಕೊಹ್ಲಿ ಆಸ್ಟ್ರೇಲಿಯದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ 4 ಪಂದ್ಯಗಳಲ್ಲಿ 700 ಕ್ಕೂ ಅಧಿಕ ರನ್ ಗಳಿಸಿದ್ದರು. ಫೆಡರರ್ ರವಿವಾರ ಬ್ರಿಸ್ಬೇನ್ನಲ್ಲಿ 1000ನೆ ಜಯ ಸಾಧಿಸಿ ಹೊಸ ಮೈಲುಗಲ್ಲು ಸ್ಥಾಪಿಸಿ ಪ್ರಶಸ್ತಿ ಗೆದ್ದುಕೊಂಡಿದ್ದರು.
