ರಾಷ್ಟ್ರೀಯ

‘ಎನ್‌ಆರ್‌ಐ’ಗಳಿಗೆ ಅಂಚೆ ಮತದಾನ

Pinterest LinkedIn Tumblr

vp-postbox-art-18-03-2013

ನವದೆಹಲಿ: ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ)  ಅಂಚೆ ಮೂಲಕ ಮತ­ದಾನಕ್ಕೆ ಅವಕಾಶ ಕಲ್ಪಿಸಲು ಚುನಾ­ವಣಾ ಆಯೋಗ ಮಾಡಿದ್ದ ಸಲಹೆ­ಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಈ ಸಲಹೆ ಅನುಷ್ಠಾನ ಕುರಿತಂತೆ 8 ವಾರದಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌  ಸೂಚಿಸಿದೆ.

‘ಎನ್‌ಆರ್‌ಐ’ಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡ­ಬೇಕು ಎಂಬ ಆಯೋಗದ ಸಲಹೆಯನ್ನು ಯಥಾ­ವತ್ತಾಗಿ ಒಪ್ಪಿಕೊಳ್ಳಲಾಗಿದೆ. ಇದನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳ­ಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

‘ಆಯೋಗದ ಸಲಹೆಯನ್ನು ಸರ್ಕಾರ ಒಪ್ಪಿರುವುದರಿಂದ ಅದರ ಅನುಷ್ಠಾನಕ್ಕೆ ಶೀಘ್ರ ಮುಂದಾಗಬೇಕು. ಈ ಪ್ರಕ್ರಿಯೆ ಬಗ್ಗೆ ಮುಂದಿನ ವಿಚಾರಣೆಯಲ್ಲಿ ವೇಳೆ ವರದಿ ನೀಡಬೇಕು’ ಎಂದು ಹೇಳಿದ  ಮುಖ್ಯನ್ಯಾಯಮೂರ್ತಿ ಎಚ್‌. ಎಲ್. ದತ್ತು ಮತ್ತು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರ ಪೀಠ, ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿತು.

ಕೇಂದ್ರದ ನಿಲುವನ್ನು ನ್ಯಾಯಾಲ­ಯದ ಮುಂದೆ ಸ್ಪಷ್ಟಪಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಲ್‌. ನರಸಿಂಹ, ಚುನಾವಣಾ ಆಯೋಗದ ಸಲಹೆಯನ್ನು ಆಧರಿಸಿ ಸೂಕ್ತ ತಿದ್ದುಪಡಿ ತರಲು ಕಾನೂನು ಸಚಿವಾಲಯ ಕಾರ್ಯೋನ್ಮುಖವಾಗಿದೆ ಎಂದರು.

ಎನ್‌ಆರ್‌ಐಗಳು ವಾಸಿಸು­ತ್ತಿರುವ ಸ್ಥಳದಿಂದಲೇ ಮತ­ಚ­ಲಾಯಿ­ಸಲು ಅವಕಾಶ ಕಲ್ಪಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗಕ್ಕೆ  ಕೋರ್ಟ್‌ ನಿರ್ದೇಶಿಸಿತ್ತು. ಆಯೋಗ ವರದಿ ಸಲ್ಲಿ­ಸಿದ ನಂತರ, ಈ ಬಗ್ಗೆ ನಾಲ್ಕು ವಾರಗಳಲ್ಲಿ ನಿಲುವು ಸ್ಪಷ್ಟಪಡಿ­ಸು­ವಂತೆ ಕೋರ್ಟ್‌ ಕಳೆದ ನ.14ರಂದು ಕೇಂದ್ರಕ್ಕೆ ಸೂಚಿಸಿತ್ತು.

ಮತದಾನ ವಿಧಾನ: ಎನ್‌ಆರ್‌ಐಗಳಿಗೆ ಆನ್‌­ಲೈನ್‌ (ಇಂಟ­ರ್‌­ನೆಟ್‌) ಮೂಲಕ ಮತಪತ್ರ  ಕಳುಹಿಸಿ­ಕೊಡ­ಬೇಕು. ಮತ ಚಲಾಯಿಸಿದ ನಂತರ ಮತಪತ್ರವನ್ನು ಸಂಬಂಧ­ಪಟ್ಟ ಕ್ಷೇತ್ರದ ಚುನಾವಣಾ­ಧಿಕಾರಿಗೆ ಅಂಚೆ ಮೂಲಕ ಕಳುಹಿಸಿ­ಕೊಡುವ ಪದ್ಧತಿ ಜಾರಿಗೊಳಿಸ­ಬಹುದು ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿತ್ತು.

ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀ­ಯರು ಆ ರಾಷ್ಟ್ರದ ಪೌರತ್ವ ಪಡೆ­ಯದೇ ಇದ್ದ ಪಕ್ಷದಲ್ಲಿ ಭಾರತದ ತಮ್ಮೂರಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವ­ಕಾಶವಿದೆ. ಚುನಾವಣೆ ಸಮಯದಲ್ಲಿ ಅವರು ಖುದ್ದು ಹಾಜರಾಗಿ ಮತಚಲಾಯಿ­ಸಬಹುದು.

Write A Comment