ಮನೋರಂಜನೆ

ಐಟಿಎಫ್ ಟೂರ್ನಮೆಂಟ್: ಅಂಕಿತಾ ರೈನಾ ಸೆಮಿ ಫೈನಲ್‌ಗೆ

Pinterest LinkedIn Tumblr

ankith-raina

ಪುಣೆ, ಡಿ.25: ಭಾರತದ ನಾಲ್ಕನೆ ಶ್ರೇಯಾಂಕಿತೆ ಆಟಗಾರ್ತಿ ಅಂಕಿತಾ ರೈನಾ 25,000 ಯುಎಸ್ ಡಾಲರ್ ಬಹುಮಾನ ಮೊತ್ತದ ಎನ್‌ಇಸಿಸಿ-ಐಟಿಎಫ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿಗೆ ತಲುಪಿದ್ದಾರೆ.

ಅಹ್ಮದಾಬಾದ್‌ನ 21ರ ಹರೆಯದ ರೈನಾ ಅವರು ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 294ನೆ ರ್ಯಾಂಕಿನ ಸೆರ್ಬಿಯದ ನೈನಾ ಸ್ಟಾಜಾನೊವಿಕ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದರು.

ಅಂಕಿತಾ ಈ ಹಿಂದೆ ನಾಲ್ಕು ಬಾರಿ 10,000 ಯುಎಸ್ ಡಾಲರ್ ಬಹುಮಾನ ಮೊತ್ತದ ಮಹಿಳೆಯರ ಐಟಿಎಫ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಕಳೆದ ವರ್ಷವೊಂದರಲ್ಲೆ ಮೂರು ಪ್ರಶಸ್ತಿ ಬಾಚಿಕೊಂಡಿದ್ದರು. ಈ ವರ್ಷ ಡಬ್ಲೂಟಿಎ ರ್ಯಾಂಕಿಂಗ್‌ನಲ್ಲಿ 262ನೆ ಸ್ಥಾನ ಪಡೆದಿದ್ದ ರೈನಾ ಸೆಮಿಫೈನಲ್‌ನಲ್ಲಿ ರೊಮಾನಿಯದ ಕ್ರಿಸ್ಟಿನಾ ಎನೆ ಅವರನ್ನು ಎದುರಿಸಲಿದ್ದಾರೆ.

Write A Comment