ಮನೋರಂಜನೆ

ಆಫ್ರಿಕ ತಂಡದಲ್ಲಿ ಮೊದಲ ಕರಿಯ ಬ್ಯಾಟ್ಸ್‌ಮನ್ ಟೆೆಂಬಾ

Pinterest LinkedIn Tumblr

_79928433_tembabavumagetty1

ಲಂಡನ್, ಡಿ.25:ಸೈಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ತಂಡದಲ್ಲಿ ತಜ್ಞ ಬ್ಯಾಟ್ಸ್‌ಮನ್ ಟೆೆಂಬಾ ಬವುಮಾಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದ್ದು, ಇದರೊಂದಿಗೆ ಟೆೆಂಬಾ ದಕ್ಷಿಣ ಆಫ್ರಿಕ ತಂಡದಲ್ಲಿ ಅವಕಾಶ ಪಡೆದ ಮೊದಲ ಕರಿಯ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಕ್ವಿಂಟನ್ ಡಿ ಕಾಕ್ ಗಾಯದ ಕಾರಣದಿಂದಾಗಿ ಮುಂಬರುವ ಮೂರು ಟೆಸ್ಟ್‌ಗಳಲ್ಲಿ ತಂಡದಿಂದ ದೂರ ಉಳಿಯಲಿದ್ದಾರೆ. ಅವರ ಬದಲಿಗೆ ಟೆೆಂಬಾ ಅವಕಾಶ ಪಡೆದಿದ್ದಾರೆ.

ದಕ್ಷಿಣ ಆಫ್ರಿಕದ ಜನಸಂಖ್ಯೆಯಲ್ಲಿ ಶೇ 80ರಷ್ಟು ಕರಿಯರು ಇದ್ದಾರೆ. 1991ರಲ್ಲಿ ದಕ್ಷಿಣ ಆಫ್ರಿಕ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ಒಟ್ಟು ಐವರು ಕರಿಯ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ನಾಲ್ವರು ಬೌಲರುಗಳು. ಮಖಾಯ ಎಂಟಿನಿ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದ ಬೌಲರ್. ಅವರು 101 ಟೆಸ್ಟ್‌ಗಳನ್ನು ಆಡಿದ್ದರು. 390 ವಿಕೆಟ್ ಕಬಳಿಸಿದ್ದರು. ಮೂವರು ವೇಗದ ಬೌಲರ್‌ಗಳಾದ ಮಾಂಡ್ ರೊಂಜಕಿ, ಫ್ಯೂಂಕೊ ಎನ್‌ಗ್ಯಾಮ್ ಮತ್ತು ಲೊನ್ವಾಬೊ ಸೊಸೊಬೆ, ವಿಕೆಟ್ ಕೀಪರ್ ಥಾಮಿ ತ್ಸೊಲೆಕಿಲೆ ಒಟ್ಟು 17 ಟೆಸ್ಟ್‌ಗಳಲ್ಲಿ ಆಡಿದ್ದರು.

24ರ ಹರೆಯದ ಟೆೆಂಬಾ 68 ಪ್ರಥಮ ದರ್ಜೆ ಪಂದ್ಯಗಳಲ್ಲಿ 8 ಶತಕ ಮತ್ತು 14 ಅರ್ಧಶತಕ ಒಳಗೊಂಡ 3631 ರನ್ ಸಂಪಾದಿಸಿದ್ದಾರೆ.

Write A Comment