ಮನೋರಂಜನೆ

ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಷಿಪ್: ಅಪೂರ್ವಿ ಚಂಡೇಲಾಗೆ ಚಿನ್ನದ ಪದಕ

Pinterest LinkedIn Tumblr

chande

ಪುಣೆ, ಡಿ.24: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಅಪೂರ್ವಿ ಚಂಡೇಲಾ ಬುಧವಾರ ಇಲ್ಲಿ ಕೊನೆಗೊಂಡ 58ನೆ ನ್ಯಾಶನಲ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್ ಇವೆಂಟ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ 1,168 ಅಂಕವನ್ನು ಸಂಪಾದಿಸಿದ ಅಪೂರ್ವಿ ಚಿನ್ನದ ಪದಕವನ್ನು ಜಯಿಸಿದರು.

ಗುಜರಾತ್‌ನ ಲಜ್ಜಾ ಗೋಸ್ವಾಮಿ (207.2) ಎರಡನೆ ಸ್ಥಾನ ಪಡೆದರು. ರಾಜಸ್ಥಾನ ಹೇಮಾ ಎಂಸಿ ಕಂಚಿನ ಪದಕವನ್ನು ಜಯಿಸಿದರು.

ಪುರುಷರ 25ಮೀ. ಸೆಂಟರ್ ಫೈಯರ್ ಪಿಸ್ತೂಲ್ ಇವೆಂಟ್‌ನಲ್ಲಿ ಆರ್ಮಿಯ ಶೂಟರ್ ಗುರುಪ್ರೀತ್ ಸಿಂಗ್ ಚಿನ್ನದ ಪದಕವನ್ನು ಜಯಿಸಿದರು. ಬುಧವಾರ ಇಲ್ಲಿ ಎರಡನೆ ಬಾರಿ ಚಿನ್ನದ ಪದಕವನ್ನು ಜಯಿಸಿದ ಸಿಂಗ್ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಟೀಮ್ ಇವೆಂಟ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದರು.

ಪುರುಷರ 50 ಮೀ. ರೈಫಲ್ ಇವೆಂಟ್‌ನಲ್ಲಿ ಆರ್ಮಿಯ ಸತ್ಯೇಂದ್ರ ಸಿಂಗ್ ಫೈನಲ್ ರೌಂಡ್‌ನಲ್ಲಿ 454 ಅಂಕ ಗಳಿಸಿ ಚಿನ್ನದ ಪದಕವನ್ನು ಜಯಿಸಿದರು. ಹರ್ಯಾಣದ ಸಂಜೀವ್ ರಾಜ್‌ಪೂತ್ (445.8) ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಆರ್ಮಿಯ ಇಮ್ರಾನ್ ಹಸನ್‌ಖಾನ್ ಕಂಚಿನ ಪದಕವನ್ನು ಜಯಿಸಿದ್ದಾರೆ. ಚಾಂಪಿಯನ್ ಆಫ್ ಚಾಂಪಿಯನ್ ರೈಫಲ್ ಕಿರೀಟ ಧರಿಸಿದ ಸಂಜೀವ್ ರಾಜ್‌ಪೂತ್‌ಗೆ ರೂ.50,000 ನಗದು ಬಹುಮಾನ ಹಾಗೂ ಸತ್ಯೇಂದ್ರ ಸಿಂಗ್‌ಗೆ ರನ್ನರ್ ಅಪ್ ಪ್ರಶಸ್ತಿಯನ್ನು ಕ್ರಮವಾಗಿ ನ್ಯಾಶನಲ್ ರೈಫಲ್ ಅಸೋಸಿಯೇಶನ್ ಹಾಗೂ ಮಹಾರಾಷ್ಟ್ರದ ರೈಫಲ್ ಸಂಸ್ಥೆ ಬುಧವಾರ ಇಲ್ಲಿ ಪ್ರದಾನಿಸಿತು.

Write A Comment