ಮನೋರಂಜನೆ

ನೆಟ್ ಪ್ರಾಕ್ಟೀಸ್‌ನಲ್ಲಿ ವ್ಯಾಟ್ಸನ್ ಹೆಲ್ಮೆಟ್‌ಗೆ ತಾಗಿದ ಬೌನ್ಸರ್: ಅಭ್ಯಾಸವನ್ನು ಮೊಟಕುಗೊಳಿಸಿದ ಆಸೀಸ್ ಆಲ್‌ರೌಂಡರ್

Pinterest LinkedIn Tumblr

watson_getty231214

ಮೆಲ್ಬೋರ್ನ್, ಡಿ.23: ಎಂಸಿಜಿಯಲ್ಲಿ ನೆಟ್ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಹೆಲ್ಮೆಟ್‌ಗೆ ಬೌನ್ಸರ್ ಬಡಿದ ಪರಿಣಾಮ ಆಸ್ಟ್ರೇಲಿಯದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಅಭ್ಯಾಸವನ್ನು ಮೊಟಕುಗೊಳಿಸಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ. ಭಾರತ ವಿರುದ್ಧ ಮೂರನೆ ಟೆಸ್ಟ್ ಆರಂಭವಾಗಲು ಮೂರು ದಿನಗಳು ಬಾಕಿಯಿದ್ದು ಆಸ್ಟ್ರೇಲಿಯ ಹಾಗೂ ಭಾರತ ನೆಟ್‌ಪ್ರಾಕ್ಟೀಸ್‌ನಲ್ಲಿ ನಿರತವಾಗಿದೆ.

ಆಸೀಸ್‌ನ ಬ್ಯಾಟಿಂಗ್‌ನಲ್ಲಿ ಮೂರನೆ ಕ್ರಮಾಂಕದಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿರುವ ವ್ಯಾಟ್ಸನ್ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಜೇಮ್ಸ್ ಪ್ಯಾಟಿನ್ಸನ್ ಎಸೆದ ಬೌನ್ಸರ್ ಹೆಲ್ಮೆಟ್‌ಗೆ ಬಡಿಯಿತು. ಆಗ ವ್ಯಾಟ್ಸನ್ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು. ‘‘ಹೆಲ್ಮೆಟ್‌ಗೆ ಬೌನ್ಸರ್ ತಾಗಿದಾಗ ವ್ಯಾಟ್ಸನ್ ಒಂದು ಕ್ಷಣ ದಂಗಾಗಿ ಹೋದರು’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮಾಡಿದೆ. ವ್ಯಾಟ್ಸನ್‌ಗೆ ಬೌನ್ಸರ್ ಎಸೆದ ಪ್ಯಾಟಿನ್ಸನ್ ಕೂಡ ಒಂದು ಕ್ಷಣ ಆಘಾತಕ್ಕೀಡಾಗಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ದೇಶಿಯ ಪಂದ್ಯದಲ್ಲಿ ಆಡುತ್ತಿದ್ದಾಗ ಅಬಾಟ್ ಎಸೆದ ಬೌನ್ಸರ್ ಹೆಲ್ಮೆಟ್‌ಗೆ ತಗಲಿ ದಾ ುಣ ಸಾವನ್ನಪ್ಪಿದ್ದರು.

ಹೆಲ್ಮೆಟ್‌ಗೆ ಬೌನ್ಸರ್ ತಾಗಿದಾಗಲೆಲ್ಲ ಹ್ಯೂಸ್ ದಾರುಣ ಸಾವು ಆಸ್ಟ್ರೇಲಿಯನ್ನರ ಕಣ್ಣ ಮುಂದೆ ಹಾದುಹೋಗುತ್ತದೆ. ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮೊಣಕಾಲಿಗೆ ಚೆಂಡು ತಾಗಿದ ಕಾರಣ ಅವರು ನೆಟ್ ಪ್ರಾಕ್ಟೀಸ್‌ನಿಂದ ಬೇಗನೆ ನಿರ್ಗಮಿಸಿದರು. ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರಿಯಾನ್ ಹ್ಯಾರಿಸ್ ಅವರು ಸ್ಟಾರ್ಕ್ ಬದಲಿಗನಾಗಿ ಆಡುವ 11ರ ಬಳಗದಲ್ಲಿ ಆಡುವ ಸಾಧ್ಯತೆಯಿದೆ.

ಭಾರತ ವಿರುದ್ಧ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಆಸೀಸ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಎರಡನೆ ಟೆಸ್ಟ್ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯವಾಗಿತ್ತು. ನಾಯಕ ಮೈಕಲ್ ಕ್ಲಾರ್ಕ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್ ಮಿಚೆಲ್ ಮಾರ್ಷ್ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಮೂರನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

Write A Comment