ಮನೋರಂಜನೆ

ಅಮೀರ್ ಖಾನ್ ನ ‘ಪಿಕೆ’ ಪಾರ್ಟ್ 2 ಬರಲಿದೆ…?

Pinterest LinkedIn Tumblr

pk poster

ಮುಂಬೈ: ಕಳೆದ ವಾರ ತೆರೆಕಂಡು ಕೋಟಿ ಕೋಟಿ ಬಾಚುತ್ತಿರುವ ಪಿಕೆ ಚಿತ್ರದ ಮತ್ತೊಂದು ಭಾಗ ಬರುತ್ತಾ? ಗೊತ್ತಿಲ್ಲ. ಆದರೆ ಪಿಕೆ- 2 ಮಾಡಲು ನಾನು ಸಿದ್ದ ಎಂದು ಅಮೀರ್ ಖಾನ್ ಹೇಳಿದ್ದಾರೆ. ಹೇಳಿದ್ದಾರೆ.

ಮಾಧ್ಯಮಗಳು ಪಿಕೆ ಭಾಗ 2 ಬರುತ್ತಾ ಎಂದು ಪ್ರಶ್ನಿಸಿದ್ದಕ್ಕೆ ಅಮೀರ್ ಖಾನ್,ಖಚಿತವಾಗಿ ಹೇಳಲಾರೆ ಬರಲಿ ಎಂದು ನಾನು ಬಯಸುತ್ತೇನೆ. ನೀವು ಇದರ ಬಗ್ಗೆ ನಿರ್ದೇಶಕ ರಾಜ್‍ಕುಮಾರ್ ಹಿರಾನಿಯನ್ನೆ ಕೇಳಬೇಕು. ಅವರಿಗೆ ಆಸಕ್ತಿ ಇದ್ದು ಮಾಡುವುದಾದರೆ ನಾನು ಇಷ್ಟ ಪಟ್ಟು ಮಾಡೋದಾಗಿ ಅಮೀರ್ ಖಾನ್ ಹೇಳಿದ್ದಾರೆ.

ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅಮೀರ್ ಖಾನ್ ಜೊತೆಗೆ ನಟ ರಣಬೀರ್ ಕಪೂರ್ ಕೂಡ ಇರೋದರಿಂದ ಹಲವರು ಪಿಕೆ ಪಾರ್ಟ್ 2ಗೆ ಸುಳಿವು ಇದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಾಜ್‍ಕುಮಾರ್ ಹಿರಾನಿಗೆ ಬಹುಶಃ ಮುಂದಿನ ಭಾಗದಲ್ಲಿ ನನ್ನ ಮತ್ತು ರಣಬೀರ್ ಕಪೂರ್ ಇಬ್ಬರನ್ನು ತೆರೆಗೆ ತರುವ ಆಲೋಚನೆ ಇರಬಹುದು ಎಂದಿದ್ದಾರೆ.

ಪಿಕೆ ಚಿತ್ರದಲ್ಲಿ ಅಮೀರ್ ಖಾನ್,ಅನುಷ್ಕಾ ಶರ್ಮಾ ಮತ್ತು ಸಂಜಯ್ ದತ್ ಅಭಿನಯಿಸಿದ್ದು ವಿಮರ್ಶಕರಿಂದ ಚಪ್ಪಾಳೆ ಮತ್ತು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿದೆ.

ಅಮೀರ್ ತುಂಬಾ ಖುಷಿಯಾಗಿದ್ದು ಚಿತ್ರವೂ ಒಂದು ಉತ್ತಮ ಸಂದೇಶದ ಜೊತೆಗೆ ಮಾನವೀಯತೆ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಹಿಂದೂ, ಮುಸ್ಲಿಂ ಬೇಧ ಭಾವವಿಲ್ಲ ನಂಬಿಕೆ ಮತ್ತು ಪ್ರಾಮಾಣಿಕತೆ ಚಿತ್ರದ ಮುಖ್ಯ ಸಂದೇಶ ಎಂದು ಹೇಳಿದ್ದಾರೆ.

Write A Comment